ಪತ್ನಿ ಜೊತೆ ತೆರಳುತ್ತಿದ್ದಾಗ ಏಕಾಏಕಿ ನಿಂತ ಎಸ್ಕಲೇಟರ್; ಗಾಬರಿಗೊಂಡ ಟ್ರಂಪ್!

Date:

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪತ್ನಿ ಮೆಲಾನಿಯಾ ಟ್ರಂಪ್ ಜೊತೆ ವಿಶ್ವಸಂಸ್ಥೆಯ ಪ್ರಧಾನ ಕಚೇರಿಗೆ ಎಸ್ಕಲೇಟರ್‌ನಲ್ಲಿ ತೆರಳುತ್ತಿದ್ದಾಗ ಏಕಾಏಕಿ ನಿಂತು ಗೊಂದಲ ಉಂಟಾಯಿತು. ಟ್ರಂಪ್‌ರ ಭಾಷಣಕ್ಕೂ ಕೆಲ ನಿಮಿಷಗಳ ಮುಂಚೆ ನಡೆದ ಈ ಘಟನೆಗೆ ಶ್ವೇತಭವನ ಆಕ್ರೋಶ ವ್ಯಕ್ತಪಡಿಸಿದೆ.

- Advertisement -

ಟ್ರಂಪ್ ಹಾಗೂ ಮೆಲಾನಿಯಾ ಎಸ್ಕಲೇಟರ್ ಹತ್ತಿದ ತಕ್ಷಣವೇ ಅದು ನಿಂತುಹೋಗಿದ್ದು, ಇಬ್ಬರೂ ಮೆಟ್ಟಿಲುಗಳ ಮೇಲೆಯೇ ನಡೆದು ಹೋಗಬೇಕಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಬಳಿಕ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, “ಯಾರಾದರೂ ವಿಶ್ವಸಂಸ್ಥೆಯ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಎಸ್ಕಲೇಟರ್ ನಿಲ್ಲಿಸಿದ್ದರೆ, ಅವರನ್ನು ತಕ್ಷಣ ವಜಾ ಮಾಡಿ ತನಿಖೆ ನಡೆಸಬೇಕು” ಎಂದು ಬರೆದಿದ್ದಾರೆ. ಬ್ರಿಟಿಷ್ ದಿನಪತ್ರಿಕೆಯೊಂದರ ವರದಿ ಪ್ರಕಾರ, ಕೆಲವು ವಿಶ್ವಸಂಸ್ಥೆ ಸಿಬ್ಬಂದಿ ಟ್ರಂಪ್ ಬಂದಾಗ ಎಸ್ಕಲೇಟರ್ ಮತ್ತು ಲಿಫ್ಟ್ ನಿಲ್ಲಿಸುವ ಬಗ್ಗೆ ತಮಾಷೆ ಮಾಡಿದ್ದರು ಎಂದು ಹೇಳಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?

ಆದರೆ ವಿಶ್ವಸಂಸ್ಥೆಯ ವಕ್ತಾರ ಸ್ಟೆಫಾನೆ ದುಜಾರಿಕ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಅವರ ಪ್ರಕಾರ, ಟ್ರಂಪ್ ತಂಡದ ಒಬ್ಬ ವೀಡಿಯೋಗ್ರಾಫರ್ ಎಸ್ಕಲೇಟರ್ ಮೇಲೆ ಮುಂಚಿತವಾಗಿ ಕಾಲಿಟ್ಟಾಗ, ಸುರಕ್ಷತಾ ವ್ಯವಸ್ಥೆಯ ಸಂವೇದಕ ಸಕ್ರಿಯಗೊಂಡು ಎಸ್ಕಲೇಟರ್ ಸ್ವಯಂಚಾಲಿತವಾಗಿ ನಿಂತಿತು. ಕೆಲ ನಿಮಿಷಗಳಲ್ಲಿ ಅದನ್ನು ಮರುಚಾಲನೆಗೊಳಿಸಲಾಯಿತು.

ಭಾಷಣದ ವೇಳೆ ಟ್ರಂಪ್ ಹಾಸ್ಯಮಾಡುತ್ತಾ, “ವಿಶ್ವಸಂಸ್ಥೆಯಿಂದ ನನಗೆ ಸಿಕ್ಕದ್ದು ಕೆಟ್ಟ ಎಸ್ಕಲೇಟರ್ ಮತ್ತು ಕೆಟ್ಟ ಟೆಲಿಪ್ರಾಂಪ್ಟರ್ ಮಾತ್ರ” ಎಂದರು. “ಪತ್ನಿ ಆರೋಗ್ಯ ಸರಿಯಿಲ್ಲದಿದ್ದರೆ ಬೀಳುತ್ತಿದ್ದರು” ಎಂದು ಕೂಡ ಹಾಸ್ಯ ಮಾಡಿದರು.

ಘಟನೆ ರಾಜತಾಂತ್ರಿಕ ಚರ್ಚೆಗೆ ಕಾರಣವಾದರೂ, ವಿಶ್ವಸಂಸ್ಥೆ ತಾಂತ್ರಿಕ ದೋಷವಷ್ಟೇ ಸಂಭವಿಸಿತು ಎಂದು ಸ್ಪಷ್ಟಪಡಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕದಲ್ಲಿ ಡೀಸೆಲ್ ರಫ್ತು ನಿಷೇಧದ ಚರ್ಚೆ; ಭಾರತದ ಮೇಲಾಗುವ ಪರಿಣಾಮವೇನು?

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ರಷ್ಯಾ-ಉಕ್ರೇನ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ...

ಗಾಜಾದಲ್ಲಿ ಮೃತರ ಸಂಖ್ಯೆ 74,000 ದಾಟಿದೆ: ಆರೋಗ್ಯ ಸಚಿವಾಲಯ

ಇಸ್ರೇಲ್ ನಡೆಸುತ್ತಿರುವ ದೀರ್ಘಕಾಲದ ಕ್ರೌರ್ಯದಿಂದಾಗಿ ಗಾಜಾ ಪಟ್ಟಿಯಲ್ಲಿ ಮೃತರ ಸಂಖ್ಯೆ 74,000...

ದಕ್ಷಿಣ ಆಫ್ರಿಕಾದ ಹಲವೆಡೆ ಸಾಮೂಹಿಕ ಗುಂಡಿನ ದಾಳಿ; 27 ಮಂದಿ ಭೀಕರ ಸಾವು

ದಕ್ಷಿಣ ಆಫ್ರಿಕಾದ ವಿವಿಧ ಪಟ್ಟಣಗಳಲ್ಲಿ ಭೀಕರ ಸಾಮೂಹಿಕ ಗುಂಡಿನ ದಾಳಿಗಳು ನಡೆದಿದ್ದು,...

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 11 ಮಂದಿ ಬಲಿ, 30 ಜನರಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ...