ಅಮೆರಿಕಕ್ಕೆ ವಾಪಸಾಗುತ್ತಿರುವ ಭಾರತೀಯರ ವಿರುದ್ದ ‘Clog The Toilet’ ವರ್ಣಭೇದ ಅಭಿಯಾನ; ಏನಿದು?

Date:

Advertisements

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್‌-1ಬಿ(H-1B) ವೀಸಾಗಳಿಗೆ $100,000 ಶುಲ್ಕವನ್ನು ಘೋಷಿಸಿದ ನಂತರ, ಬಲಪಂಥೀಯ ಆನ್‌ಲೈನ್ ಗುಂಪುಗಳು ಆಪರೇಷನ್ ‘Clog The Toilet’ ಎಂಬ ಅಭಿಯಾನವನ್ನು ಆರಂಭಿಸಿವೆ. Clog The Toilet ಅಂದರೆ ಶೌಚಾಲಯ ಬ್ಲಾಕ್ ಆಗುವಂತೆ ಮಾಡುವುದು.

ಅಂದರೆ ಭಾರತೀಯರು ಅಮೆರಿಕಕ್ಕೆ ಹಿಂತಿರುಗುವುದನ್ನು ತಡೆಯಲು ಉದ್ದೇಶಪೂರ್ವಕವಾಗಿ ವಿಮಾನಯಾನ ಬುಕಿಂಗ್ ವ್ಯವಸ್ಥೆಗಳನ್ನು ಓವರ್‌ಲೋಡ್ ಮಾಡುವ, ಟಿಕೆಟ್ ಬುಕ್ ಮಾಡಲು ಸಾಧ್ಯವಾಗದಂತೆ ಮಾಡುತ್ತಿದ್ದಾರೆ.

ಇದನ್ನು ಓದಿದ್ದೀರಾ? ಅಮೆರಿಕ H-1B ವೀಸಾ ಶುಲ್ಕ ₹84 ಲಕ್ಷಕ್ಕೆ ಏರಿಸಿದ ಟ್ರಂಪ್; ಭಾರತದ ಮೇಲೆ ಗಂಭೀರ ಪರಿಣಾಮ

ಏನಿದು ‘Clog The Toilet’ ಅಭಿಯಾನ?

ಸೆಪ್ಟೆಂಬರ್ 21ರಂದು ಡೊನಾಲ್ಡ್ ಟ್ರಂಪ್ ಅವರು H-1B ವೀಸಾಗಳಿಗೆ $100,000 ಶುಲ್ಕವನ್ನು ಘೋಷಿಸಿದ ಬಳಿಕ, ಹೊಸ ಶುಲ್ಕದಿಂದ ತಪ್ಪಿಸಿಕೊಳ್ಳಲು ಟೆಕ್ಕಿಗಳು ಅಮೆರಿಕಕ್ಕೆ ವಾಪಸ್ ಧಾವಿಸಲು ಯತ್ನಿಸಿದ್ದಾರೆ. ಈ ವೇಳೆ 4chanನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಬಲಪಂಥೀಯ ಟ್ರೋಲ್‌ಗಳು ಕಾಣಿಸಿಕೊಂಡಿದೆ. ಟ್ರೋಲ್ ಮೂಲಕವೇ ವಿಮಾನಗಳನ್ನು ನಿರ್ಬಂಧಿಸಲು ಅಭಿಯಾನವನ್ನು ನಡೆಸಲಾಗಿದೆ.

ದಕ್ಷಿಣ ಏಷ್ಯಾ ಮೂಲದ ಜನರನ್ನು ಅವಹೇಳನಕಾರಿ ಪದ ಬಳಸಿ ‘ಜೀತಗಾರರು’ ಎಂದು ಕರೆದಿರುವ ಈ ಟ್ರೋಲಿಗರು, ಯಾರಿಗೂ ವಿಮಾನ ಟಿಕೆಟ್ ಲಭಿಸದಂತೆ ನೋಡಿಕೊಳ್ಳಲು 100ಕ್ಕೂ ಹೆಚ್ಚು ಸೀಟ್‌ಗಳನ್ನು ಕಾಯ್ದಿರಿಸಿಕೊಂಡಿದ್ದಾರೆ. “ಈ ಬಗ್ಗೆ ನಮಗೆ ಹೆಮ್ಮೆಯಿದೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಟ್ರೋಲಿಗರು ಭಾರತ-ಯುಎಸ್ ವಿಮಾನಗಳಲ್ಲಿ ಪಾವತಿಸದೆ ಚೆಕ್‌ಔಟ್ ಪ್ರಕ್ರಿಯೆಯನ್ನು ನಡೆಸಿದ್ದು ತಾತ್ಕಾಲಿಕವಾಗಿ ವಿಮಾನದ ಸೀಟ್‌ಗಳನ್ನು ಕಾಯ್ದಿರಿಸಿಕೊಂಡಿದ್ದಾರೆ. ನಿಜವಾದ ಪ್ರಯಾಣಿಕರಿಗೆ ಲಭ್ಯವಾಗದಂತೆ ಮಾಡಲಾಗಿದೆ. ಈ ಮೂಲಕ ಟಿಕೆಟ್ ಬೆಲೆಯು ಅಧಿಕವಾಗುವಂತೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ವಿಶೇಷವಾಗಿ ಭಾರತೀಯರು, ಏಷ್ಯಾದ ಜನರು ಹೆಚ್ಚಾಗಿ ಪ್ರಯಾಣಿಸುವ ನ್ಯೂಯಾರ್ಕ್, ನ್ಯೂವಾರ್ಕ್ ಮತ್ತು ಡಲ್ಲಾಸ್‌ನಂತಹ ನಗರಗಳ ವಿಮಾನಗಳನ್ನೇ ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗುತ್ತಿದೆ. ಈ ಅಭಿಯಾನವನ್ನು 4chan ಎಂಬ ಟೆಲಿಗ್ರಾಮ್, ಎಕ್ಸ್‌ ಮೊದಲಾದ ಆನ್‌ಲೈನ್ ವೇದಿಕೆಗಳಲ್ಲಿ ಮಾಡಲಾಗುತ್ತಿದೆ, ಚರ್ಚಿಸಲಾಗುತ್ತಿದೆ.

ಅನೇಕ ಪೋಸ್ಟ್‌ಗಳು ಜನಾಂಗೀಯ ನಿಂದನೆಯನ್ನು ಒಳಗೊಂಡಿದೆ. ಭಾರತೀಯರ ಪ್ರಯಾಣವನ್ನು ಕಷ್ಟಕರವಾಗಿಸಬೇಕು ಎಂಬ ಸೂಚನೆಗಳನ್ನು ಉಲ್ಲೇಖಿಸಲಾಗಿದೆ. “ಭಾರತೀಯರನ್ನು ಭಾರತದಲ್ಲಿಯೇ ಇರಿಸುವುದು” ಮತ್ತು ಅವರ ನಡುವೆ ಭೀತಿಯನ್ನು ಸೃಷ್ಟಿಸುವುದು ಮುಖ್ಯ ಗುರಿ ಎಂದು ಈ ಅಭಿಯಾನದ ಚರ್ಚೆಯ ವೇಳೆ ಹೇಳಲಾಗುತ್ತಿದೆ.

ಆದರೆ ಈ ಬಗ್ಗೆ ಎಎಫ್‌ಪಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾ ವಕ್ತಾರರು, ತಮ್ಮ ವೆಬ್‌ಸೈಟ್ ಯಾವುದೇ ಅಡೆತಡೆಗಳನ್ನು ಅನುಭವಿಸಲಿಲ್ಲ, ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ಹೇಳಿದ್ದಾರೆ.

ಇನ್ನು 2003ರಲ್ಲಿ ರಚಿಸಲಾದ ಅನಾಮಧೇಯ ಆನ್‌ಲೈನ್ ಪ್ಲಾಟ್‌ಫಾರ್ಮ್‌ 4chan, ಇಂಟರ್ನೆಟ್ ಮೀಮ್‌ಗಳು, ಟ್ರೋಲಿಂಗ್ ಅಭಿಯಾನಗಳು ಮತ್ತು ಉಗ್ರಗಾಮಿ ವಿಷಯಗಳನ್ನು ಈ ಹಿಂದಿನಿಂದಲೂ ಹಂಚಿಕೊಂಡಿದೆ.

ಇದನ್ನು ಓದಿದ್ದೀರಾ? ಭಾರತಕ್ಕೆ ಮುಳುವಾದ ಟ್ರಂಪ್ ನೀತಿಗಳು; ದೇಶದ ಆರ್ಥಿಕತೆಯ ಗತಿ ಏನು?

ಅಂತಹ ಒಂದು ಪೋಸ್ಟ್‌ನಲ್ಲಿ, “H1B ಸುದ್ದಿಯ ನಂತರ ಭಾರತೀಯರು ಎಚ್ಚರಗೊಳ್ಳುತ್ತಿದ್ದಾರೆ. ಅವರನ್ನು ಭಾರತದಲ್ಲಿಯೇ ಇರಿಸಲು ಬಯಸುವಿರಾ? ವಿಮಾನ ಕಾಯ್ದಿರಿಸುವಿಕೆ ವ್ಯವಸ್ಥೆಯನ್ನು ಮುಚ್ಚಿಹಾಕಿ” ಎಂದು ಬರೆಯಲಾಗಿದೆ. ಮತ್ತೊಂದು ಕಾಮೆಂಟ್‌ನಲ್ಲಿ, “ಪ್ರಸ್ತುತ ಈ ದೆಹಲಿಯಿಂದ ನ್ಯೂವಾರ್ಕ್ ವಿಮಾನದಲ್ಲಿ ಲಭ್ಯವಿರುವ ಕೊನೆಯ ಸೀಟನ್ನು ಬ್ಲಾಕ್ ಮಾಡಲಾಗುತ್ತಿದೆ” ಎಂದು ಬರೆಯಲಾಗಿದೆ. ಜೊತೆಗೆ “ಸಂಪೂರ್ಣ ಜೀತಗಾರರ ಸಾವು, ನೀವು ನೋಡುವ ಪ್ರತಿಯೊಂದು ಜೀತಗಾರರನ್ನು ಕೊಲ್ಲಿ, ಪಶ್ಚಿಮವನ್ನು ಮುಕ್ತಿಗೊಳಿಸಲು ಯಾವ ಮಟ್ಟಿನ ಕಾರ್ಯಕ್ಕೂ ಸಿದ್ಧ” ಎಂಬ ಉದ್ರೇಕಕಾರಿ ಪೋಸ್ಟ್‌ಗಳನ್ನೂ ಮಾಡಲಾಗುತ್ತಿದೆ.

ಈ ವರ್ಣಭೇದ ಅಭಿಯಾನದಿಂದ ಉಂಟಾಗಿದ್ದೇನು?

ಟ್ರಂಪ್ ಘೋಷಣೆಯ ನಂತರ ಭಾರತಕ್ಕೆ ರಜೆಯ ಮೇಲೆ ಬಂದಿರುವ ಆಸ್ಟಿನ್ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಅಮೃತಾ ತಮಾನಮ್ ವಿಮಾನ ಬುಕ್ ಮಾಡಲು ಧಾವಿಸಿದ್ದರು. ಆದರೆ ಪದೇ ಪದೇ ಸಮಸ್ಯೆ ಉಂಟಾಗಿದೆ. ಅನೇಕ ಪ್ರಯತ್ನಗಳ ನಂತರ, ಅವರು ಅಂತಿಮವಾಗಿ ಕತಾರ್ ಏರ್‌ವೇಸ್‌ನಲ್ಲಿ ಡಲ್ಲಾಸ್‌ಗೆ ಸುಮಾರು $2,000ಗೆ ಟಿಕೆಟ್ ಬುಕ್ ಮಾಡಿದ್ದಾರೆ, ಇದು ಮೂಲ ದರಕ್ಕಿಂತ ಎರಡು ಪಟ್ಟು ಅಧಿಕ ಎಂದು ಹೇಳಲಾಗಿದೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು ತಮಾನಮ್, “ನನಗೆ ಟಿಕೆಟ್ ಬುಕ್ ಮಾಡುವುದು ಕಷ್ಟಕರವಾಗಿತ್ತು. ಅದಕ್ಕಾಗಿ ನಾನು ಅಧಿಕ ಟಿಕೆಟ್ ದರವನ್ನು ಪಾವತಿಸಬೇಕಾಯಿತು” ಎಂದು ಹೇಳಿದ್ದಾರೆ.

ಈ ಎಲ್ಲಾ ಭೀತಿಯ ಬಳಿಕ $100,000 ಶುಲ್ಕವು ಹೊಸ H-1B ಅರ್ಜಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಶ್ವೇತಭವನವು ಸ್ಪಷ್ಟಪಡಿಸಿದೆ. “ಪ್ರಸ್ತುತ ಅಮೆರಿಕದ ಹೊರಗೆ ಇರುವವರಿಗೆ ಮರು-ಪ್ರವೇಶಿಸಲು $100,000 ಶುಲ್ಕ ವಿಧಿಸಲಾಗುವುದಿಲ್ಲ” ಎಂದು ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಸ್ಪಷ್ಟನೆ ನೀಡಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಬ್ಬದ ದಿನವೇ ಸಾರ್ವಜನಿಕರಿಗೆ ದರ ಏರಿಕೆಯ ಶಾಕ್‌; ಎಲ್‌ಪಿಜಿ ಸಿಲಿಂಡರ್ ದರ ಏರಿಕೆ

ಆಯುಧ ಪೂಜೆ ಹಬ್ಬದ ದಿನವೇ ತೈಲ ಮಾರುಕಟ್ಟೆ ಕಂಪನಿಗಳು ಗ್ರಾಹಕರಿಗೆ ದರ...

ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರ ಬಂಧನ

ಯುವತಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ...

ರೆಪೋ ದರ ಶೇ. 5.5 ಕ್ಕೆ ಸ್ಥಿರವಾಗಿರಿಸಿದ ಆರ್‌ಬಿಐ; ಸತತ ಎರಡನೇ ಬಾರಿಯೂ ಯಥಾಸ್ಥಿತಿ

ಶೇ.5.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

Download Eedina App Android / iOS

X