ದಾವಣಗೆರೆ  | ಶಹೀದ್‌ ಭಗತ್ ಸಿಂಗ್ ರಂತೆ ಶಿಕ್ಷಣ ನಿರುದ್ಯೋಗ, ಭ್ರಷ್ಟಾಚಾರದ ಸಮಸ್ಯೆಗಳ ವಿರುದ್ದ  ಹೋರಾಟಕ್ಕೆ ಮುಂದಾಗಬೇಕು: ಎಐಡಿಎಸ್ಓ

Date:

Advertisements

ʼʼದೇಶದಾದ್ಯಂತ ಶಿಕ್ಷಣದ ವ್ಯಾಪಾರಿಕರಣ, ಸರ್ಕಾರಿ ಶಾಲೆಗಳ ಮುಚ್ಚುವಿಕೆ, ನಿರುದ್ಯೋಗ, ಭ್ರಷ್ಟಾಚಾರ ಬೆಲೆ ಏರಿಕೆಯಂತಹ ಗಂಭೀರ ಸಮಸ್ಯೆಗಳು ರಾರಾಜಿಸುತ್ತಿರುವಾಗ ನಾವು ಶಾಹಿದ್‌ ಭಗತ್ ಸಿಂಗ್ ರಂತಹ ಮಹಾನ್ ಕ್ರಾಂತಿಕಾರಿಗಳ ಆದರ್ಶವನ್ನು ಎತ್ತಿ ಹಿಡಿದು ಬಲಿಷ್ಠ ಹೋರಾಟಕ್ಕೆ ಮುಂದಾಗಬೇಕಿದೆʼʼ ಅಖಿಲ ಭಾರತ ಡೆಮಾಕ್ರಾಟಿಕ್‌ ವಿದ್ಯಾರ್ಥಿ ಫೆಡೆರೇಷನ್‌ (ಎಐಡಿಎಸ್ಓ)  ಜಿಲ್ಲಾಧ್ಯಕ್ಷ ಪೂಜಾ ನಂದಿಹಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು. ದಾವಣಗೆರೆ ನಗರದ ರೈಲ್ವೆ ನಿಲ್ದಾಣದ ಮುಂಬಾಗ ಶಾಹಿದ್‌ ಭಗತ್ ಸಿಂಗ್ ಪುತ್ತಳಿಯ ಬಳಿ ಸ್ವಾತಂತ್ರ್ಯ ಸೇನಾನಿ ಭಗತ್‌ ಸಿಂಗ್‌ ರ 118 ನೇ ಜನ್ಮದಿನಾಚರಣೆ ವೇಳೆ ನಮನ ಸಲ್ಲಿಸಿ ಮಾತನಾಡಿದರು.    

ಈ ವೇಳೆ ಭಗತ್ ಸಿಂಗ್ ಪುತ್ತಳಿಗೆ ಖಾಸಗಿ ಬಸ್ ನಿಲ್ದಾಣ, ವಾಟರ್ ಟ್ಯಾಂಕ್ ಉದ್ಯಾನವನ, ಜಿಲ್ಲಾ ಕ್ರೀಡಾಂಗಣ ಸೇರಿದಂತೆ ಹಲವು ಸ್ಥಳಗಳಲ್ಲಿ ನೆರದಿದ್ದ ಸಾರ್ವಜನಿಕರು ಅತ್ಯಂತ ಗೌರವದಿಂದ ಭಗತ್ ಸಿಂಗ್ ರವರಿಗೆ ಗೌರವ ನಮನ ಸಲ್ಲಿಸಿದರು.  
 
ʼʼಶಾಹೀದ್‌ ಭಗತ್ ಸಿಂಗ್ ನಮ್ಮ ಸಮಾಜದಲ್ಲಿ ನಡೆಯುವ ಪ್ರತಿಯೊಂದು ಅನ್ಯಾಯವನ್ನು ಪ್ರಶ್ನಿಸಬೇಕು ಹಾಗೂ ಅವುಗಳ ವಿರುದ್ಧ ರಾಜೀರಹಿತವಾಗಿ ಹೋರಾಟವನ್ನು ಬೆಳೆಸಬೇಕೆಂದು ಕರೆ ನೀಡಿದ್ದರು. ಅವರ ಆಶಯವನ್ನು ಸಾಕಾರಗೊಳಿಸುವ ಜವಾಬ್ದಾರಿ ಇಂದಿನ ವಿದ್ಯಾರ್ಥಿ ಸಮೂಹವು ತೆಗೆದುಕೊಂಡಿದೆ. ರಾಜ್ಯ ಸರ್ಕಾರವು 6200 ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಹೊರಡಿಸಿದಾಗ ಇಡೀ ರಾಜ್ಯದಾದ್ಯಂತ 50 ಲಕ್ಷ ಸಹಿಗಳನ್ನು ಸಂಗ್ರಹಿಸುವ ಮೂಲಕ ಈ ರಾಜ್ಯದ ವಿದ್ಯಾರ್ಥಿಗಳು ಭಗತ್ ಸಿಂಗ್ ರಂತಹ ಹಲವಾರು ಮಹಾನ್ ವ್ಯಕ್ತಿಗಳ ಆಶಯಕ್ಕೆ ಬಲ ತುಂಬಿದ್ದಾರೆ. ಇಂತಹ ಹೋರಾಟಗಳು ಇನ್ನು ಮುಂದೆಯೂ ಕಟ್ಟುವುದಾಗಿ ಪಣತೊಟ್ಟಿದ್ದಾರೆʼʼ ಎಂದರು.

“ಭಗತ್ ಸಿಂಗ್ ಕಾರ್ಮಿಕರ ಹಾಗೂ ದುಡಿಯುವ ಜನತೆಯ ಸಮಾಜವಾದಿ ಭಾರತವನ್ನು ನಿರ್ಮಿಸಬೇಕೆಂದಿದ್ದರು  ಅವರು ಸಮಾಜವು ಬಂಡವಾಳಶಾಹಿ ಶೋಷಕರ ಆಳ್ವಿಕೆಯಲ್ಲಿನ ಸಮಾಜ ವಾಗಿದ್ದು  ಅದನ್ನು ತೊಡೆದುಹಾಕಬೇಕು ಎಂದಿದ್ದರು. ಭಗತ್ ಸಿಂಗ್ ರ ಕನಸನ್ನು ನನಸು ಮಾಡುವ ಸಂಕಲ್ಪವನ್ನು ದೇಶದ ವಿದ್ಯಾರ್ಥಿ ಸಮೂಹ ತೆಗೆದುಕೊಳ್ಳಬೇಕಿದೆ” ಎಂದು ಕರೆ ನೀಡಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಒಳಮೀಸಲಾತಿ ಆದೇಶ ಕಾನೂನಾಗಲು ಸುಗ್ರೀವಾಜ್ಞೆ ಜಾರಿಗೊಳಿಸಿ: ಮಾಜಿ ಸಚಿವ ಆಂಜನೇಯ

ಕಾರ್ಯಕ್ರಮದಲ್ಲಿ ಎಐಡಿಎಸ್ಓ ಕಾರ್ಯದರ್ಶಿ ಸುಮನ್ ಟಿ ಎಸ್, ಸದಸ್ಯರಾದ ಗಂಗಾಧರ್, ಮುಬಾರಕ್, ಧ್ರುವಕುಮಾರಿ, ಸುಶೀಲ, ಅನುಷ್ಕಾ ಸೇರಿದಂತೆ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.    

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಸ್ತೆಗುಂಡಿ ಬಗ್ಗೆ ಸಾರ್ವಜನಿಕರು ಮಾಹಿತಿ‌ ನೀಡುವ ವ್ಯವಸ್ಥೆ ರಾಜ್ಯದಲ್ಲಿ ಮಾತ್ರ: ಡಿಸಿಎಂ ಡಿ ಕೆ ಶಿವಕುಮಾರ್

ರಸ್ತೆಗುಂಡಿಗಳನ್ನು ಸಾರ್ವಜನಿಕಕರು ಗಮನಿಸಿ ಸರ್ಕಾರಕ್ಕೆ ತಿಳಿಸುವ ವ್ಯವಸ್ಥೆ ಇಡೀ ದೇಶದಲ್ಲಿ ಎಲ್ಲಾದರೂ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

ಸಮಾಜದ ಅಸಮಾನತೆ ಹೋಗಲಾಡಿಸಲು ಸಮೀಕ್ಷೆ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜದಲ್ಲಿ ಅಸಮಾನತೆಯಿದ್ದು, ಅದನ್ನು ಹೋಗಲಾಡಿಸಲು ಸಮೀಕ್ಷೆಯ ಅಂಕಿಅಂಶಗಳು ಅವಶ್ಯಕ. ಯಾವ ಜಾತಿಯ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

Download Eedina App Android / iOS

X