ಅಮೆರಿಕ | ಟ್ರಂಪ್ ಬಜೆಟ್‌ಗೆ ಸಿಗದ ಅನುಮೋದನೆ; ಸರ್ಕಾರದ ಕೆಲಸಗಳು ಸ್ಥಗಿತ!

Date:

Advertisements

ಅಮೆರಿಕ ಸೆನೆಟ್‌ನಲ್ಲಿ ಮಂಡಿಸಲಾದ ತಾತ್ಕಾಲಿಕ ಹಣಕಾಸು ಮಸೂದೆಗೆ (ಬಜೆಟ್‌) ಅನುಮೋದನೆ ದೊರೆಯದ ಪರಿಣಾಮ ಸರ್ಕಾರಿ ಕೆಲಸಗಳು ಸ್ಥಗಿತಗೊಂಡಿವೆ. ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಜೆಟ್‌ಗೆ ಅನುಮೋದನೆ ಸಿಗದೆ, ಸರ್ಕಾರ ಕೈಕಟ್ಟಿ ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ.

ಹಿಂದಿನ ಹಣಕಾಸು ಆಯವ್ಯಯದ ಅವಧಿ ಸೆಪ್ಟೆಂಬರ್ 30ರ ಮಧ್ಯರಾತ್ರಿಗೆ ಮುಗಿದಿದ್ದು, ಟ್ರಂಪ್ ನೇತೃತ್ವದ ರಿಪಬ್ಲಿಕನ್ ಸರ್ಕಾರವು ತಾತ್ಕಾಲಿಕ ಮಧ್ಯಂತರ ಬಜೆಟ್‌ಅನ್ನು ಸೆನೆಟ್‌ನಲ್ಲಿ ಮಂಡಿಸಿದೆ. ಆದರೆ, ಬಜೆಟ್‌ಅನ್ನು ವಿಪಕ್ಷ ಡೆಮಾಕ್ರಟಿಕ್ ಪಕ್ಷದ ದದಸ್ಯರು ತಿರಸ್ಕರಿಸಿದ್ದಾರೆ. ಹೀಗಾಗಿ, ಸರ್ಕಾರದ ಎಲ್ಲ ಕೆಲಸಗಳು ಬಹುತೇಕ ಸ್ಥಗಿತಗೊಂಡಿವೆ.

ಮುಂದಿನ ದಿನಗಳಲ್ಲಿನ ಪರಿಸ್ಥಿತಿ ಏನು ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಇದೇ ಸಮಯದಲ್ಲಿ, ಮತ್ತಷ್ಟು ಸರ್ಕಾರಿ ನೌಕರರನ್ನು ಕೆಲಸದಿಂದ ವಜಾಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಈ ಲೇಖನ ಓದಿದ್ದೀರಾ?: ಬ್ರಾಹ್ಮಣ್ಯದ ಜನರು ಜಾತಿ ಗಣತಿಯನ್ನು ಯಾಕೆ ವಿರೋಧಿಸುತ್ತಾರೆ?

ಬಜೆಟ್‌ಗೆ ಅನುಮೋದನೆ ದೊರೆಯದೇ ಇರುವುದರಿಂದ ಮತ್ತು ಸರ್ಕಾರಿ ಕೆಲಸಗಳು ಸ್ಥಗಿತಗೊಂಡಿರುವ ಕಾರಣ, ಲಕ್ಷಾಂತರ ಸರ್ಕಾರಿ ನೌಕರರಿಗೆ ವೇತನ ಪಾವಳಿಯೂ ಸ್ಥಗಿತಗೊಳ್ಳಲಿದೆ ಎಂದು ವರದಿಯಾಗಿದೆ. ನೌಕರರಿಗೆ ವೇತನಪಾವತಿಯಲ್ಲಿನ ತಾತ್ಕಾಲಿಕ ಸ್ಥಗಿತದಿಂದ, ಹಲವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಮಾತ್ರವಲ್ಲದೆ, ಸಮಾಜ ಕಲ್ಯಾಣ ಯೋಜನೆಗಳೂ ಹಿಂದುಳಿಯಲಿವೆ ಎಂದು ಹೇಳಲಾಗಿದೆ.

ಟ್ರಂಪ್ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದಾಗ 2018-2019ರಲ್ಲಿಯೂ ಬಜೆಟ್‌ಗೆ ಅನುಮೋದನೆ ದೊರೆತಿರಲಿಲ್ಲ. ಆಗ, ಅಮೆರಿಕ ಸರ್ಕಾರದ ಕೆಲಸಗಳು ಸುಮಾರು ಐದು ವಾರಗಳ ಕಾಲ ಸ್ಥಗಿತಗೊಂಡಿದ್ದವು. ಇದೀಗ, ಅಂತಹದ್ದೇ ಪರಿಸ್ಥಿತಿ ಟ್ರಂಪ್ ಆಡಳಿತದಲ್ಲಿಯೇ ಎದುರಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕಕ್ಕೆ ವಾಪಸಾಗುತ್ತಿರುವ ಭಾರತೀಯರ ವಿರುದ್ದ ‘Clog The Toilet’ ವರ್ಣಭೇದ ಅಭಿಯಾನ; ಏನಿದು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್‌-1ಬಿ(H-1B) ವೀಸಾಗಳಿಗೆ $100,000 ಶುಲ್ಕವನ್ನು ಘೋಷಿಸಿದ...

ಗಾಜಾದಲ್ಲಿ ಮುಂದುವರೆದ ಇಸ್ರೇಲ್ ಕ್ರೌರ್ಯ; 59 ಪ್ಯಾಲೆಸ್ತೀನಿಯರು ಸಾವು

ಗಾಜಾದಲ್ಲಿ ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ವಾಯುದಾಳಿ ಮತ್ತು ಗುಂಡಿನ ದಾಳಿ ನಡೆಸಿದೆ....

ಪಾಕಿಸ್ತಾನ ಪಡೆ ಮತ್ತು ಟಿಟಿಪಿ ನಡುವೆ ಘರ್ಷಣೆ; 17 ಮಂದಿ ಸಾವು

ಪಾಕಿಸ್ತಾನ ಪಡೆಗಳು ಮತ್ತು ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನಡುವೆ ಘರ್ಷಣೆ...

‘ಹಿಂದುತ್ವ ಉಗ್ರವಾದ’ | ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಭಾಷಣಕ್ಕೆ ಭಾರತದ ಪ್ರತ್ಯುತ್ತರ!

ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ಶಹಬಾಜ್ ಷರೀಫ್‌ ಅವರು ಭಾರತ-ಪಾಕ್ ಸಂಘರ್ಷದ ಬಗ್ಗೆ...

Download Eedina App Android / iOS

X