ದಾವಣಗೆರೆ | ರೈತರ ದಾರಿಗೆ ಪ್ರಭಾವಿಗಳ ಅಡ್ಡಿ: ಸೂಕ್ತ ದಾರಿ ಗುರುತಿಸುವಂತೆ ರೈತ ಸಂಘ ಒತ್ತಾಯ

Date:

Advertisements

ರೈತರು ಜಮೀನಿಗೆ ಬರಲು 70-80 ವರ್ಷಗಳಿಂದ ಬಳಸುತ್ತಿದ್ದ ದಾರಿಗೆ ಖಾಸಗಿ ಮತ್ತು ಪ್ರಭಾವಿ ವ್ಯಕ್ತಿಗಳು ಈಗ ಅಡ್ಡಿಪಡಿಸುತ್ತಿದ್ದು, ಕಂದಾಯ ಇಲಾಖೆ ಮತ್ತು ದಾವಣಗೆರೆ ಜಿಲ್ಲಾಡಳಿತ ಕೂಡಲೇ ರೈತರ ಹೊಲಗಳಿಗೆ ದಾರಿಯನ್ನು ಗುರುತಿಸಿ ದಾರಿ ಬಿಡಿಸಿಕೊಡಬೇಕೆಂದು ಒತ್ತಾಯಿಸಿ ಜಗಳೂರು ತಾಲೂಕಿನ ಭರಮಸಮುದ್ರ ಗ್ರಾಮದ ನೂರಾರು ರೈತರು, ರಾಜ್ಯ ರೈತ ಸಂಘದ(ವಾಸುದೇವ ಮೇಟಿ) ನೇತೃತ್ವದೊಂದಿಗೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿಯವರಿಗೆ ಮನವಿ ಸಲ್ಲಿಸಿದರು.

ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಕುಮಾರ್ ಭರಮಸಮುದ್ರ ಮಾತನಾಡಿ, “70-80 ವರ್ಷಗಳಿಂದ ರಿ. ಸರ್ವೇ ನಂ. 15, 16, 19, 65, 66ರಿಂದ 99ರವರೆಗಿನ ನೂರಾರು ಎಕರೆ ಕೃಷಿ ಜಮೀನುಗಳಿಗೆ ಓಡಾಡಲು ಬಳಸುತ್ತಿದ್ದ ದಾರಿಗೆ ಈಗ ಸ.ನಂ. 87ರ ಮಾಲೀಕರಾದ ನಾಗರತ್ನಮ್ಮ ಕೋಂ ರಾಮಚಂದ್ರ ರೆಡ್ಡಿ ಅಡ್ಡಿಪಡಿಸುತ್ತಿದ್ದಾರೆ. ರೈತರಿಗೆ ಓಡಾಡಲು ಬಿಡುತ್ತಿಲ್ಲ. ಅದೇ ದಾರಿಯಲ್ಲಿ 70-80 ವರ್ಷಗಳ ಹಿಂದಿನಿಂದಲೂ ಇದೇ ರೈತರು ಸಂಚಾರ ಮಾಡುತ್ತಿದ್ದಾರೆ. ಈಗ ಕಟಾವಿನ ಕಾಲವಾಗಿರುವುದರಿಂದ ಪ್ರತಿನಿತ್ಯ ಓಡಾಡಲು ರೈತರಿಗೆ ತೊಂದರೆಯಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

1002801986

“ಈ ಹಿಂದೆ ಅಡ್ಡಿಪಡಿಸಿದ ಕಾರಣಕ್ಕಾಗಿ ಸೂಕ್ತ ದಾರಿಯನ್ನು ಪರಿಶೀಲಿಸಿ ಗುರುತಿಸಿ ಸಂಚಾರಕ್ಕೆ ಅನುವು ಮಾಡಿಕೊಡಲು ತಾಲೂಕು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದು, ಅವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದರು. ಸರ್ವೆ ಸ್ಕೆಚ್, ಹಿಂಬರಹ, ಸರ್ವೆ ನೋಟಿಸ್ ಈ ರೀತಿಯ ಕಾರ್ಯಗಳು ನಡೆದಿದ್ದವು. ಆದರೆ ಕೆಳಗಿನ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಸರ್ವೆ ಸ್ಕೆಚ್, ದಾರಿ ಗುರುತಿಸುವ ಕಾರ್ಯವಾಗದೇ ವಿಳಂಬವಾಗುತ್ತಿದೆ. ಈಗ ಕಟಾವಿನ ಕಾಲವಾಗಿರುವುದರಿಂದ ಬೆಳೆದ ಬೆಳೆಯನ್ನು ಮನೆಗೆ ತರಲು ರೈತರಿಗೂ ಕೂಡ ತೊಂದರೆಯಾಗುತ್ತಿದೆ. ತಾವುಗಳು ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ದಾರಿಯನ್ನು ಗುರುತಿಸಿ ರೈತರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ” ಎಂದು ರೈತರ ಸಂಘದ ಕಾರ್ಯಕರ್ತರು ಆಗ್ರಹಿಸಿದರು.

ಮನವಿ ನೀಡುವ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಮತ್ತು ರೈತರಾದ ಶಿವಶಂಕರಪ್ಪ ಅಂಜಿನಪ್ಪ, ಬಸವರಾಜ ,ವಾಗೀಶ, ರಮೇಶ್, ಅನಿಲ್ ಕುಮಾರ, ಶ್ರೀನಿವಾಸ ರೆಡ್ಡಿ, ಸುನಿಲ್, ಮಲ್ಲಿಕಾರ್ಜುನ, ಮಲ್ಲೇಶ್ ಪೂಜಾರ, ಲೋಕೇಶ್ ದೊಣ್ಣೆಹಳ್ಳಿ ಮಧು ಕ ಎಸ್, ಎಚ್ ಸಿ ಶರಣಪ್ಪ, ಬಿ ಎಲ್ ಶ್ರೀನಿವಾಸ ರೆಡ್ಡಿ, ಕೃತಿಕ, ನಾಡಿಗರ ಮಹಾಲಿಂಗಪ್ಪ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಧಾರಾಕಾರ ಮಳೆಗೆ ಗೋಡೆ ಕುಸಿತ – ವೃದ್ದೆ ಸಾವು, ಇಬ್ಬರು ಗಾಯ

ಸುರಿದ ಧಾರಾಕಾರ ಮಳೆಗೆ ಮೇಲ್ಚಾವಣೆ ಗೋಡೆ ಕುಸಿದು ವೃದ್ದೆ ಮೃತಪಟ್ಟಿದ್ದು, ಇಬ್ಬರು...

ಭಟ್ಕಳ | ಮುರುಡೇಶ್ವರದಲ್ಲಿ ಯುವಕನ ಪ್ರಾಮಾಣಿಕತೆ; ಕಳೆದುಹೋದ ಬ್ಯಾಗ್‌ ಹಸ್ತಾಂತರ

ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರದಲ್ಲಿ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡಿದ್ದ ಹೈದರಾಬಾದ್ ಪ್ರವಾಸಿಗರಿಗೆ...

ಕಾವೇರಿ ಆರತಿ | ರೈತರಿಂದ ಭಾರಿ ವಿರೋಧ, ಆದರೂ ಅದ್ದೂರಿ ಸಮಾರಂಭ ಮಾಡಿದ ಡಿ ಕೆ ಶಿವಕುಮಾರ್

ಕೃಷ್ಣರಾಜ ಸಾಗರ ಅಣೆಕಟ್ಟು (ಕೆಆರ್‌ಎಸ್‌) ಬೃಂದಾವನ ಉದ್ಯಾನದ ಆವರಣದಲ್ಲಿ ಇದೇ ಮೊದಲ...

ರಾಯಚೂರು | ಬಸ್ ಪಲ್ಟಿ : ಹಲವರಿಗೆ ಗಾಯ

ಸರ್ಕಾರಿ ಸ್ಲೀಪರ್ ಬಸ್ ಉರುಳಿ ಓರ್ವ ಪ್ರಯಾಣಿಕನ ಕಾಲು ಮುರಿದು, ಬಸ್ಸಿನಲ್ಲಿದ್ದ...

Download Eedina App Android / iOS

X