ತುಮಕೂರು ದಸರಾ | ಮಹಿಳಾ ಬೈಕ್ ರೈಡ್ ಗೆ ಗೃಹ ಸಚಿವ ಪರಮೇಶ್ವರ್ ಚಾಲನೆ

Date:

 ತುಮಕೂರು ದಸರಾ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳಾ ಬೈಕ್ ರೈಡ್‌ಗೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಶನಿವಾರ ನಗರದ ಬಟವಾಡಿ ಬಳಿ ಚಾಲನೆ ನೀಡಿದರು. 

- Advertisement -

     ಬೈಕ್ ರೈಡಿನ ಮುಂದಿನ ಸಾಲಿನಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಕಣ್ಣಿಗೆ ಗಾಗಲ್, ತಲೆಗೆ ಹೆಲ್ಮೆಟ್ ಧರಿಸಿ ರಾಯಲ್ ಎನ್‌ಫೀಲ್ಡ್ ಭಾರಿ ಬೈಕನ್ನು ಚಲಾಯಿಸಿದ್ದು ನೋಡುಗರಿಗೆ ಅಚ್ಚರಿ ಮೂಡಿಸಿತು.  ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಅವರೂ ಸಹ ರಾಯಲ್ ಎನ್‌ಫೀಲ್ಡ್ ಚಾಲನೆ ಮಾಡುವ ಮೂಲಕ ಜಿಲ್ಲಾಧಿಕಾರಿಗಳಿಗೆ ಸಾತ್ ನೀಡಿದರು. ಸುಮಾರು 300 ದ್ವಿಚಕ್ರ ವಾಹನಗಳ ಮಹಿಳಾ ಸವಾರರು ಈ ರೈಡ್‌ನಲ್ಲಿ ಭಾಗವಹಿಸಿದ್ದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂವಿಧಾನವೆಂಬ ನಮ್ಮೆಲ್ಲರ ಆಸ್ತಿಗಾಗಿ ಸತ್ಯಾಗ್ರಹ

ಇವತ್ತು ಬೀದಿಗೆ ಇಳಿದಿರೋ ಜನ ಸಾಮಾನ್ಯರಲ್ಲ. ಬದುಕಿನ ಹಕ್ಕನ್ನು ಈ ದೇಶದ ಜನರಿಗೆ ಮರಳಿ ಕೊಡಿಸುವುದಕ್ಕಾಗಿ, ಗಾಂಧೀಜಿಯವರ ಮಾತುಗಳು ಮತ್ತು ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವ ನಿಜವಾದ ಹೋರಾಟಗಾರರು. ಸರ್ಕಾರದ...

ಸಿಲಿಕಾನ್ ಸಿಟಿಗಳಲ್ಲಿ ಹಸಿದ ಹಲವು ಬದುಕುಗಳ ಕಥೆ–ವ್ಯಥೆ

ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವು ನಮ್ಮನ್ನು ತಟ್ಟದಿದ್ದರೆ, ನಮ್ಮ ಪ್ರಗತಿಯ ಬಗ್ಗೆ ಮತ್ತೊಮ್ಮೆ ಯೋಚಿಸಬೇಕಾಗುತ್ತದೆ. ಮತ್ತೊಬ್ಬರ ಹಸಿವು ನಮ್ಮ ಮನಸ್ಸಿನಲ್ಲಿ ಸಂವೇದನೆ ಮೂಡಿಸದಿದ್ದರೆ, ನಮ್ಮ ಮಾನವೀಯತೆಯ ಸ್ವರೂಪವನ್ನೇ ಪರಿಶೀಲಿಸಬೇಕಾಗುತ್ತದೆ. ಆಧುನಿಕ ನಗರಗಳೆಂದರೆ ನೆನಪಾಗುವುದು ಸಿಲಿಕಾನ್...

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...
1002114937

     ಮಹಿಳೆಯರು ಮನೆಯಲ್ಲಿ “ಸೌಟು ಹಿಡಿದು ಅಡುಗೆ ಮಾಡಲು ಸೈ-ಹ್ಯಾಂಡಲ್ ಹಿಡಿದು ಬೈಕ್ ಓಡಿಸಲು ಸೈ” ಎಂದು ಹೊಂಡಾ ಆಕ್ಟಿವಾ, ಜುಪಿಟರ್, ಡಿಯೋ, ಆ್ಯಕ್ಸೆಸ್, ಫ್ಯಾಸಿನೋ ಬೈಕ್ ಸವಾರಿ ಮಾಡುತ್ತಾ ಬಟವಾಡಿ ವೃತ್ತದಿಂದ ಎಸ್‌ಐಟಿ ಬ್ಯಾಕ್ ಗೇಟ್-ಶೆಟ್ಟಿಹಳ್ಳಿ ಅಂಡರ್ ಪಾಸ್-ಉಪ್ಪಾರಹಳ್ಳಿ ಅಂಡರ್ ಪಾಸ್-ಭದ್ರಮ್ಮ ವೃತ್ತ-ಬಿ.ಜಿ.ಎಸ್. ವೃತ್ತ-ಕಾಲ್ಟೆಕ್ಸ್ ವೃತ್ತ-ಕುಣಿಗಲ್ ವೃತ್ತ-ಡಾ: ಗಂಗಾಧರಯ್ಯ ವೃತ್ತ-ಗುಬ್ಬಿಗೇಟ್-ಕಾಲ್ಟೆಕ್ಸ್ ವೃತ್ತ-ಮಂಡಿಪೇಟೆ ವೃತ್ತ, -ಬಿ.ಜಿ.ಎಸ್.ವೃತ್ತ-ಎಂ.ಜಿ.ರಸ್ತೆ-ಗುಂಚಿವೃತ್ತ-ಡೀಸಿ ಕಚೇರಿ ವೃತ್ತ-ಕೋತಿತೋಪು ವೃತ್ತ-ತಮ್ಮಯ್ಯ ಆಸ್ಪತ್ರೆ ವೃತ್ತ-ಎಸ್.ಎಸ್.ವೃತ್ತ-ಭದ್ರಮ್ಮ ವೃತ್ತ ಮರ‍್ಗದಲ್ಲಿ ರ‍್ಕಾರಿ ಪದವಿ ಪರ‍್ವ ಕಾಲೇಜು ಮೈದಾನದವರೆಗೂ ಸಾಗಿದರು.

1002114949 1

    ವಿಕಲಚೇತನ ಮಹಿಳೆಯರಾದ ಲಲಿತಾ, ನಾಗರತ್ನ, ಪವಿತ್ರ, ವೀಣಾ, ನಿವೇದಿತಾ, ಉಮತ್ ಖಾನಂ ಬೈಕ್ ರೈಡ್‌ನಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. 

ಸಚಿವರಿಂದ ಗಜಪಡೆಗೆ ಪೂಜೆ :

     ವಿಜಯದಶಮಿಯಂದು ಜರುಗುವ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಶ್ರೀರಾಮ, ನೊಣವಿನಕೆರೆಯ ಲಕ್ಷ್ಮೀ ಹಾಗೂ ಕರಿಬಸವೇಶ್ವರ ಮಠದ ಲಕ್ಷ್ಮೀ ಸೇರಿದಂತೆ 3 ಆನೆಗಳಿಗೆ ನಗರದ ಬಿ.ಜಿ.ಎಸ್. ವೃತ್ತದ ಬಳಿ ಸಚಿವರು ಪೂಜೆ ಸಲ್ಲಿಸಿದರು.

1002114988

     ನಂತರ ಗಜಪಡೆಯು ಬಿ.ಜಿ.ಎಸ್. ವೃತ್ತದಿಂದ ರ‍್ಚ್ ರ‍್ಕಲ್ ಮರ‍್ಗವಾಗಿ ಮತ್ತೆ ಬಿ.ಜಿ.ಎಸ್. ವೃತ್ತದವರೆಗೂ ಮೆರವಣಿಗೆಯ ತಾಲೀಮು ನಡೆಸಿತು.

    ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನರ‍್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್, ಸಚಿವರ ವಿಶೇಷ ಕರ‍್ತವ್ಯಾಧಿಕಾರಿ ನಾಗಣ್ಣ, ಮತ್ತಿತರ ಅಧಿಕಾರಿ, ಸರ‍್ವಜನಿಕರು ಭಾಗವಹಿಸಿದ್ದರು. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಡ

ಹಾಸನ ಜಿಲ್ಲೆ ಆಲೂರು ತಾಲ್ಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು, ರೈತರಿಗೆ...

ಗದಗ | ಕಳಸಾಪೂರ ಬಸವ ಕೇಂದ್ರದಲ್ಲಿ 1633ನೇ ವಾರದ ಶಿವಾನುಭವ ಕಾರ್ಯಕ್ರಮ

ಗದಗ ತಾಲೂಕ ಕಳಸಾಪೂರ ಗ್ರಾಮದ ಬಸವ ಕೇಂದ್ರದಲ್ಲಿ 1633ನೇ ವಾರದ ಶಿವಾನುಭವದಲ್ಲಿ...

ವಿಜಯಪುರ | ಸದೃಢ ಸಮಾಜ ನಿರ್ಮಾಣಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯ: ಅರವಿಂದ ಹಾಗರಗಿ

ವಯಸ್ಸು ಬದುಕಿನ ಅಂತ್ಯವಲ್ಲ; ಅದು ಅನುಭವ, ಜ್ಞಾನ ಮತ್ತು ಬದುಕಿನ ಪಾಠಗಳ...

ಕಲಬುರಗಿ | ಎಸ್‌ಐಆರ್ ರದ್ದತಿಗೆ ಅ.2ರಂದು ಬೃಹತ್ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ರದ್ದುಗೊಳಿಸುವುದು, ಪಟ್ಟಿಯಿಂದ...