ಕಲಬುರಗಿ | ಮಣಿಪುರದಲ್ಲಿ ಮುಂದುವರೆದ ಘರ್ಷಣೆಗೆ ಮೂವರ ಹತ್ಯೆ: ದಸಂಸ ಖಂಡನೆ

Date:

Advertisements
  • ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲುಗೊಳಿಸಿ ಮೆರವಣಿಗೆ ಪ್ರಕರಣ ಸಮಾಜ ತಲೆತಗ್ಗಿಸುವಂತ ಘಟನೆ
  • ಮಣಿಪುರದಲ್ಲಿ ಮತ್ತೆ ಘರ್ಷಣೆ, 3 ಜನರ ಹತ್ಯೆ, ನಿವಾಸಿಗಳ ಮೇಲೆ ಗುಂಡಿನ ದಾಳಿ

ಕಳೆದ 3 ತಿಂಗಳುಗಳಿಂದ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಮತ್ತೆ ಘರ್ಷಣೆ ನಡೆದಿದ್ದು, 3 ಜನರ ಹತ್ಯೆ ನಡೆದಿದೆ. ತಮ್ಮ ನಿವಾಸಗಳಲ್ಲಿ ಮಲಗಿದ್ದ ಮೂವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಕ್ರೂರವಾಗಿ ಹತ್ಯೆ ಮಾಡಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಕಿಡಿಕಾರಿದರು.

ಕಲಬುರಗಿ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದರು.

“ಮಣಿಪುರದಲ್ಲಿ ಕುಕಿ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ಇಡೀ ಮಾನವ ಸಮಾಜವೇ ತಲೆತಗ್ಗಿಸುವಂತ ಘಟನೆ. ಇದನ್ನು ತಡೆಯುವಲ್ಲಿ ಕೇಂದ್ರ ಹಾಗೂ ಅಲ್ಲಿನ ಬಿಜೆಪಿ ಸರಕಾರ ಸಂಪೂರ್ಣವಾಗಿ ವಿಫಲಾಗಿದೆ. ಪೊಲೀಸರು ಮತ್ತು ದುಷ್ಕರ್ಮಿಗಳೂ ಒಟ್ಟಾಗಿ ಸೇರಿಯೇ ಈ ಕೃತ್ಯ ಎಸಗಿದ್ದಾರೆ. ರಕ್ಷಣೆ ಕೇಳಿದ ಮಹಿಳೆಯರನ್ನು ಪೊಲೀಸರೇ ಮುಂಡರ ಗುಂಪಿಗೆ ಒಪ್ಪಿಸಿರುವುದು ಇದಕ್ಕೆ ಸಾಕ್ಷಿ. ಮಣಿಪುರ ಪೊಲೀಸರ ತನಿಖೆಯ ಮೇಲೆ ನಮಗೆ ವಿಶ್ವಾಸವಿಲ್ಲ. ಭದ್ರತೆ ದೃಷ್ಟಿಯಿಂದ ಹತ್ತಿರದ ನ್ಯಾಯಾಲಯಗಳಿಗೆ ದಾಖಲಿಸಲು ಅವಕಾಶ ಕಲ್ಪಿಸಬೇಕು ಎಂದು ಸಂತ್ರಸ್ತರು ಮನವಿ ಮಾಡಿದ್ದಾರೆ” ಎಂದರು.

Advertisements

“ಹಿಂಸಾಚಾರದಿಂದ ಸಂತ್ರಸ್ತೆಯರು ಮಾನಸಿಕ ಆಘಾತಕ್ಕೆ ಒಳಗಾಗಿ ಭಯಭೀತರಾಗಿದ್ದಾರೆ. ಸಿಬಿಐ ಮುಂದೆ ಸತ್ಯ ಹೇಳುತ್ತಾರೆ ಎಂಬ ವಿಶ್ವಾಸವಿಲ್ಲ. ಹಾಗಾಗಿ ಮಹಿಳೆಯರನ್ನು ಒಳಗೊಂಡು ಉನ್ನತಮಟ್ಟದ ಸಮಿತಿಯಿಂದ ತನಿಖೆ ನಡೆಸಿದರೆ ಮಾತ್ರ ಅವರು ಸತ್ಯ ಹಂಚಿಕೊಳ್ಳಲು ಸಾಧ್ಯ. ಡಿಜಿಪಿ ದರ್ಜೆಯ ಪೊಲೀಸ್ ಅಧಿಕಾರಿ ನೇತೃತ್ವದ ಸ್ವತಂತ್ರ ವಿಶೇಷ ತಂಡ ರಚಿಸಿ ತನಿಖೆ ನಡೆಸಬೇಕು. ವಿಚಾರಣೆಯನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕು. ಮಣಿಪುರದಲ್ಲಿ ಕುಕಿ ಜನಾಂಗದ ಹೆಣ್ಣು ಮಕ್ಕಳು ಸೈನಿಕರ ಕಾಲು ಹಿಡಿದುಕೊಂಡು ರಕ್ಷಣೆ ಕೇಳುತ್ತಿರುವುದು ಈ ದೇಶದ ವ್ಯವಸ್ಥೆಗೆ ಕನ್ನಡಿ ಹಿಡಿದಂತಿದೆ” ಎಂದು ಒತ್ತಾಯಿಸಿದ್ದರು.

“ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಉಲ್ಬಣಗೊಂಡಿರುವುದರ ನಡುವೆಯೇ ಗಲಭೆಯ ಸಂತ್ರಸ್ತರಿಗೆ ಪರಿಹಾರ ನೀಡಿಕೆ ಮತ್ತು ಪುನರ್ವಸತಿಯ ಮೇಲ್ವಿಚಾರಣೆಗೆ ಹೈಕೋರ್ಟ್ ಮೂವರು ನಿವೃತ್ತ ಮಹಿಳಾ ನ್ಯಾಯಮೂರ್ತಿಗಳ ಸಮಿತಿಯನ್ನು ಸುಪ್ರಿಂಕೋರ್ಟ್ ರಚನೆ ಮಾಡಿರುವುದು ಸ್ವಾಗತಾರ್ಹ. ಸಂತ್ರಸ್ತರಿಗೆ ನ್ಯಾಯ ಒದಗಿಸುವ ಬಗ್ಗೆ ಭರವಸೆಯಿದೆ” ಎಂದು ಹೇಳಿದರು.

“ಸೌಜನ್ಯ ಹತ್ಯೆ ನಡೆದು 11 ವರ್ಷ ಕಳೆದರೂ ಇನ್ನೂ ನ್ಯಾಯ ದೊರೆಕ್ಕಿಲ್ಲ. ಆಕೆಯ ಹತ್ಯೆಯ ನೈಜ ಆರೋಪಿ ಬಂಧನ ಆಗಬೇಕು. ಸಿಬಿಐ ಕೋರ್ಟ್ ತೀರ್ಪಿನಲ್ಲಿ ನೈಜ ಆರೋಪಿಗೆ ಶಿಕ್ಷೆಯಾಗಲಿಲ್ಲ. ಸೌಜನ್ಯಳಗೆ ನ್ಯಾಯ ಸಿಗಲಿಲ್ಲ. ತನಿಖಾ ತಂಡದಿಂದ ನೈಜ್ಯ ಆರೋಪಿಗೆ ಶಿಕ್ಷೆ ಆಗಲಿಲ್ಲ. ಈ ಪ್ರಕರಣವನ್ನು ರಾಜ್ಯ ಸರಕಾರ ಮರು ತನಿಖೆಗೆ ಒಳಪಡಿಸಿ, ನಿಜವಾದ ಆರೋಪಿಗೆ ಕಠಣಿ ಶಿಕ್ಷೆಗೆ ಗುರಿಪಡಿಸಬೇಕೆಂದು” ಆಗ್ರಹಿಸಿದರು.

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ದೇವಂತಗಿ ಗ್ರಾಮದ ಹನ್ನೊಂದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಬಾವಿಯಲ್ಲಿ ಎಸೆದ ಘಟನೆಯನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು” ಒತ್ತಾಯಿಸಿದ್ದರು.

“ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಹಿಂದುತ್ವವಾದಿ, ಜಾತಿವಾದಿ ಮನಸ್ಥಿತಿಯ ಮಾಜಿ ಸಚಿವ ಅರಗ ಜ್ಞಾನೇಂದ್ರ ಖರ್ಗೆಯವರಿಗೆ ಮತ್ತು ಕಲ್ಯಾಣ ಕರ್ನಾಟಕದ ಜನರಿಗೆ ಕಪ್ಪು ಬಣ್ಣಕ್ಕೆ ಹೋಲಿಸಿ ಅವಮಾನಿಸಿದ್ದು ಖಂಡನೀಯ. ಶಾಸಕ ಅರಗ ಜ್ಞಾನೇಂದ್ರರವರ ಮೇಲೆ ಸರ್ಕಾರ ಕಠಿಣ ಕ್ರಮ ಜರುಗಿಸಬೇಕೆಂದು” ಹಕ್ಕೋತ್ತಾಯ ಸಲ್ಲಿಸಿದ್ದರು.

ಪ್ರತಿಭಟನೆಯಲ್ಲಿ ಕೋಲಿ ಕಬ್ಬಲಿಗ ಹೋರಾಟ ಸಮಿತಿಯ ರಾಜ್ಯಧ್ಯಕ್ಷ ಲಚ್ಚಪ್ಪ ಜಮಾದಾರ , ಎಸ್.ಪಿ. ಸುಳ್ಳದ , ಬಿ.ಸಿ ವಾಲಿ , ಹೆಚ್. ಶಂಕರ , ಅಂಬಣ್ಣ ಜೀವಣಗಿ, ಎಸ್.ಎಮ್. ಪಟಕರ್ , ಕೃಷ್ಣಪ್ಪ ಕರ್ಣಿಕ್, ಉಮೇಶ ನರೋಣ , ರೇವಣಸಿದ್ದ ಜಾಲಿ , ಮಲ್ಲಣ್ಣ ಕೊಡಚಿ , ಮಹಾದೇವ ತರನಳ್ಳಿ , ಶಿವಶರಣ ಮಾರಡಗಿ, ರವಿ ಬಡಿಗೇರ , ಮಹಾಅಂಗ ಅಂಗಡಿ , ಶಶಿಕಾಂತ ಮಾನೆ , ಸುಭಾಷ ಡಾಂಗೆ , ದೇವಿಂದ್ರ ಹೆಗಡೆ , ರಾಜು ಗಂಗಾಕರ, ಅಶ್ವಿನಿ ಮದನಕರ್, ಲಕ್ಷ್ಮಿಕಾಂತ್ ಹುಬಳಿ, ಆರ್. ಕೆ. ಉಡುಗಿ, ಸುರೇಶ್ ಹಾದಿಮನಿ, ದಿಲೀಪ್ ಕಾಯಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಯಾದಗಿರಿ :

ಮಣಿಪುರ ಹಿಂಸಾಚಾರ ಖಂಡಿಸಿ ಯಾದಗಿರಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಯಿತು.

ನಗರದ ಪ್ರಮುಖ ಬೀದಿಗಳ ಮುಖಾಂತರ ಯಾದಗಿರಿ ಜಿಲ್ಲಾಧಿಕಾರಿಗಳ ಕಾರ್ಯಾಲಯದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

yadagiri 1

ದಸಂಸ ಜಿಲ್ಲಾಧ್ಯಕ್ಷ ಶಿವಪುತ್ರ ಜವಳಿ ಮಾತನಾಡಿ, “ಮಣಿಪುರದಲ್ಲಿ ಕುಕಿ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಪ್ರಕರಣ ಇಡೀ ಮಾನವ ಸಮಾಜವೇ ತಲೆತಗ್ಗಿಸುವಂತ ಘಟನೆ. ಈ ಅಮಾನವೀಯ ಘಟನೆ ತಡೆಯುವಲ್ಲಿ ಮಣಿಪುರ ರಾಜ್ಯದ ಬಿಜೆಪಿ ಸರಕಾರ ಮತ್ತು ಕೇಂದ್ರ ಸರಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಕಳೆದ 3 ತಿಂಗಳುಗಳಿಂದ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಮತ್ತೆ ಘರ್ಷಣೆ ಮುಂದುವರೆದಿದ್ದು ,3 ಜನರ ಹತ್ಯೆ ನಡೆದಿದೆ. ನಿವಾಸಿಗಳ ಮನೆಗೆ ನುಗ್ಗಿ ಮೂವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಕ್ರೂರವಾಗಿ ಹತ್ಯೆಗೈದಿರುವುದು ಹೇಯ ಕೃತ್ಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿಯೂ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ದುರಂತವೇ ಸರಿ, ಧರ್ಮಸ್ಥಳದಲ್ಲಿ ಸೌಜನ್ಯ ಹತ್ಯೆ ನಡೆದು 11 ವರ್ಷ ಆದರೂ ಇನ್ನೂ ನ್ಯಾಯ ಸಿಕ್ಕಿಲ್ಲ. ಆಕೆಯ ಹತ್ಯೆಯ ನೈಜ್ಯ ಆರೋಪಿ ಬಂಧನ ಆಗಬೇಕು. ಸಿ.ಬಿ.ಐ. ಕೋರ್ಟ್ ತೀರ್ಪಿನಲ್ಲಿ ನೈಜ ಆರೋಪಿಗೆ ಶಿಕ್ಷೆಯಾಗಲಿಲ್ಲ. ಸೌಜನ್ಯಳಗೆ ನ್ಯಾಯ ಸಿಗಲಿಲ್ಲ.ಈ ಪ್ರಕರಣವನ್ನು ರಾಜ್ಯ ಸರಕಾರ ಮರುತನಿಖೆಗೆ ಒಳಪಡಿಸಿ, ನಿಜವಾದ ತಪಿಸ್ಥರರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ ? ಮಣ್ಣಿನ ಮಡಕೆ ಬಳಸುವ ವಿಧಾನ – ಪ್ರಯೋಜನ ಕುರಿತ ಉಪಯುಕ್ತ ಮಾಹಿತಿ

ಈ ಸಂದರ್ಭದಲ್ಲಿ ಶಿವಪುತ್ರ ಜವಳಿ,ಚಂದಪ್ಪ ಕಟ್ಟಿಮನಿ, ಶಿವಲಿಂಗ ಹಸನಾಪುರ, ವೀರಭದ್ರಪ್ಪ ತಳವಾರಗೇರಾ, ಎಂ. ಪಟೇಲ್, ಮುಲ್ಲಾ, ಶಿವಪ್ಪ ಶೆಳ್ಳಗಿ, ಮಲ್ಲಪ್ಪ ಶೆಳ್ಳಗಿ, ಆಶೀಫ್ ಖುರೇಶಿ, ಗುರಪ್ಪ ಮಾವಿನಮಟ್ಟಿ, ಮೌನೇಶ ದೇವತ್ಕಲ್, ಮೌನೇಶ್ ತಳವಾರ್, ಪಾರಪ್ಪ ದೇವತ್ಕಲ್, ಹಣಮಂತ ದೊಡ್ಡಮನಿ,ಶರಬಣ್ಣ ದೊರನಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X