ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಗಲಾಟೆ ನಡೆದು, ಒಬ್ಬ ಕೈದಿ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.
ಗಲಾಟೆಯಲ್ಲಿ ಕೈದಿಯೊಬ್ಬರು ಮತ್ತೊಬ್ಬ ಕೈದಿಯ ಕತ್ತಿಗೆ ಹರಿತ ವಸ್ತುವಿನಿಂದ ಇರಿದಿದ್ದರಿಂದ ಕೈದಿ ಇಸ್ಮಾಯಿಲ್ ಮೌಲಾನಾಸಾಬ್ (37) ಗಂಭೀರವಾಗಿ ಗಾಯಗೊಂಡಿದ್ದಾನೆ. ಹಲ್ಲೆ ನಡೆಸಿದವರು ಹಸನ್ ಶೇಖ್ (48) ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕಲಬುರಗಿ | ಕಾರಾಗೃಹದಲ್ಲಿ ಕೈದಿಗಳ ಗಲಾಟೆ; ಒಬ್ಬರಿಗೆ ಗಂಭೀರ ಗಾಯ
ಗಾಯಗೊಂಡ ಇಸ್ಮಾಯಿಲ್ ಮೌಲಾನಾಸಾಬ್ ರವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಹುಬ್ಬಳ್ಳಿ ಮೂಲದ ಇಸ್ಮಾಯಿಲ್ ಪೋಕ್ಸೊ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಹಸನ್ ಶೇಖ್ ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಘಟನೆಯ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
