“ಸೈಬರ್ ವಂಚನೆಯಿಂದ ರಾಜ್ಯದಾದ್ಯಂತ ಸಾವಿರಾರು ಕೋಟಿ ರೂಪಾಯಿ ಜನರು ವಂಚನೆಗೆ ಒಳಗಾಗುತ್ತಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ಡಿಜಿಟಲ್ ವಂಚನೆಗಳು ನಡೆಯುತ್ತಿವೆ. ಡಿಜಿಟಲ್ ವಂಚನೆ ಬಗ್ಗೆ ಜಾಗೃತಿ ಮೂಡಿಸಲು ಯುವಕರು ಮುಂದಾಗಬೇಕು” ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯಿಲ್ ಕರೆ ನೀಡಿದರು.
ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಪಟ್ಟಣದ ಟಿಪ್ಪು ಸುಲ್ತಾನ್ ಶಾದಿ ಮಹಲ್ ನಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಜಿಲ್ಲಾ ವತಿಯಿಂದ ‘ಡಿಜಿಟಲ್ ವಂಚನೆ ಜಾಗೃತಿ ಹಾಗೂ ಮಾದಕ ಮುಕ್ತ ಸಮಾಜ ನಿರ್ಮಾಣ” ಕುರಿತು ಜಿಲ್ಲಾ ಯುವ ಸಮಾವೇಶ ನಡೆಯಿತು.
ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರು ಡಾ. ನಸೀಮ್ ಅಹ್ಮದ್ ಅವರು ಮಾತನಾಡಿ, “ಮಾದಕ ವ್ಯಸನದಿಂದ ಸಮಾಜ ಅವನತಿ ಕಡೆಗೆ ಸಾಗುತ್ತಿದ್ದೆ. ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಯುವಕರು ತಮಗೆ ಗೊತ್ತಿದ್ದರೂ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದ ಹೊರಬಂದು ಸಮಾಜಕ್ಕೆ ಮಾದರಿಯಾಗಿ, ಮಾದಕ ವ್ಯಾಸನ ಮುಕ್ತ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದರು.
“ಡಿಜಿಟಲ್ ಮಾಧ್ಯಮದಲ್ಲಿ ಆನ್ಲೈನ್ ಬೆಟ್ಟಿಂಗ್ ಗೇಮ್, ಲೋನ್ ಆಪ್ ಇಂತಹ ಅನೇಕ ಡಿಜಿಟಲ್ ವಂಚನೆಗಳಿಗೆ ಯುವಕರು ಬಲಿ ಆಗುತ್ತಿದ್ದಾರೆ. ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಉಡುಪಿಯಲ್ಲಿ ಕಾರ್ಮಿಕರೊಬ್ಬರೂ ಡಿಜಿಟಲ್ ವಂಚನೆಯಿಂದ ಏಳು ಸಾವಿರ ರೂ ಕಳೆದುಕೊಂಡ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಹಾಗಾಗಿ ಜನಸಾಮಾನ್ಯರು ಯುವಕರು ಡಿಜಿಟಲ್ ವಂಚನೆಗೆ ಒಳಗಾಗದೆ ಎಚ್ಚರದಿಂದ ಇರಬೇಕಾಗಿದೆ” ಎಂದು ಹೇಳಿದರು.

ಮುಖ್ಯ ಅತಿಥಿಗಳು ರಿಫಾ ಚೆಂಬರ್‌ನ ರಾಜ್ಯಾಧ್ಯಕ್ಷರು ಜನಾಬ್ ಸಯ್ಯಿದ್ ಮುಮ್ತಾಜ್ ಮನ್ಸೂರಿ ಅವರು ಮಾತನಾಡಿ, “ಪ್ರವಾದಿ ಮುಹಮ್ಮದ್ ಅವರ ಸಮಾಜ ಸುಧಾರಣೆಯ ಮಾರ್ಗಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉನ್ನತ ಚಾರಿತ್ರ್ಯವನ್ನು ಬೆಳೆಸಿಕೊಳ್ಳಬೇಕು” ಎಂದು ಯುವಕರಿಗೆ ಕರೆ ನೀಡಿದರು.
“ಯಾವುದೇ ಭೇದ-ಭಾವ ಇಲ್ಲದೆ ಸಮಾಜದಲ್ಲಿ ಸಕರಾತ್ಮಕ ಕಾರ್ಯಗಳಿಗೆ ಯುವ ಸಮುದಾಯವನ್ನು ಕರೆದೊಯ್ಯುವ ಅಗತ್ಯವಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ವತಿಯಿಂದ ರಚಿಸಲಾಗಿರುವ ಡಿಜಿಟಲ್ ವಂಚನೆಯ ಜಾಗೃತಿ ಮೂಡಿಸುವ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಗದಗ | ಸಂಶೋಧನೆಯ ಕೌಶಲ್ಯ ಉದ್ಯೋಗಗಳನ್ನು ಸೃಜಿಸಬಲ್ಲವೂ: ಡಾ. ಪಿ ಎಸ್ ಶಶಿಧರ
ಕಾರ್ಯಕ್ರಮದಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯ ಕಾರ್ಯದರ್ಶಿ ಮುದಸ್ಸಿರ್ ಖಾನ್, ಇಲಿಯಾಜ್ ನಾಲ್ಬಂದ್, ಜನಾಬ್ ಏಜಾಜ್ ಸಾಬ್, ರಾಣೆಬೆನ್ನೂರು ನಗರಾಧ್ಯಕ್ಷ ಜಿಬ್ರಾನ್, ಮಕ್ಸೂದ್ ರಟ್ಟೆಹಳ್ಳಿ ಉಪಸ್ಥಿತರಿದ್ದರು. ಯುವ ಮುಖಂಡರು ಜಿಬ್ರಾನ್ ಖಾನ್ ನಿರೂಪಣೆ ಮಾಡಿದರು.