ನಗರದ ಕುಸನೂರ ರಸ್ತೆಯ ಕೃಷ್ಣಾ ನಗರ ಬಸ್ ನಿಲ್ದಾಣದ ಬಳಿ ಹಂದಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಕುಸನೂರ ಗ್ರಾಮದ ನಜೀರೋದ್ದಿನ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಕಲಬುರಗಿ | ಕಾರಾಗೃಹದಲ್ಲಿ ಕೈದಿಗಳ ಗಲಾಟೆ; ಒಬ್ಬನಿಗೆ ಗಂಭೀರ ಗಾಯ
ಶನಿವಾರ ರಾತ್ರಿ ಬೈಕ್‌ನಲ್ಲಿ ಕುಸನೂರ ಕಡೆಗೆ ತೆರಳುತ್ತಿದ್ದ ವೇಳೆ ಕೃಷ್ಣಾ ನಗರ ಬಸ್ ನಿಲ್ದಾಣದ ಬಳಿ ಹಂದಿ ರಸ್ತೆ ದಾಟುತ್ತಿರುವ ವೇಳೆ ಬೈಕ್ ಡಿಕ್ಕಿಯಾಗಿ ಸವಾರ ನಜೀರೋದ್ದಿನ್ ಗಂಭೀರವಾಗಿ ಗಾಯಗೊಂಡಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆ-2ಯಲ್ಲಿ ಪ್ರಕರಣ ದಾಖಲಾಗಿದೆ.