ಚಿಕ್ಕಬಳ್ಳಾಪುರ: ಬರಪೀಡಿತ ಬಯಲು ಸೀಮೆಯ ಜನರಿಗೆ ಶುದ್ಧವಾದ ಕುಡಿಯುವ ನೀರನ್ನು ಪೊರೈಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲ್ ಗೌಡ ರವರು ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು ಕುಡಿಯುವ ನೀರು ಪ್ರತಿಯೊಬ್ಬ ಮನುಷ್ಯನ ಮೂಲಭೂತ ಹಕ್ಕಾಗಿದ್ದು ಸಂವಿಧಾನಕರವಾದ ಹಕ್ಕನ್ನು ರಾಜ್ಯ ಸರ್ಕಾರ ಮುಟಕುಗೊಳಿಸಿದೆ ಎಂದು ಆರೋಪಿಸಿದರು.
ನಗರದ ಕೆ.ಇ.ಬಿ ಸಮುದಾಯ ಭವನದಲ್ಲಿ ಬಯಲು ಸೀಮೆ ಜಿಲ್ಲೆಗಳಿಗೆ ನೀರಾವರಿ ನ್ಯಾಯಕ್ಕಾಗಿ ರಚನೆಗೊಂಡಿರುವ ಜಂಟಿ ಕ್ರಿಯಾ ಸಮಿತಿ ಮೊದಲ ಸಮಾವೇಶದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು ಕೇಂದ್ರ ರಾಜ್ಯ ಸರ್ಕಾರಗಳಿಗೆ ನೀರಾವರಿ ವಿಚಾರ ಕುರಿತು ಚಾಟಿ ಬೀಸಿದರು. ಬಯಲು ಸೀಮೆಯ ಜನರಿಗಾಗಿ ಯಾವ ತ್ಯಾಗಕ್ಕೂ ನಾನು ಸಿದ್ಧ ಎಂದು ಘೋಷಿಸಿದರು.
ಈಗಿನ ಆಳುವ ಸರ್ಕಾರಗಳಿಗೆ ರೈತರ, ಕಾರ್ಮಿಕರ, ಮಹಿಳೆಯರ ಪರವಾದ ಯಾವ ಚಿಂತನೆ, ಕಾಳಜಿಯು ಕೂಡ ಇಲ್ಲ. ಕೇವಲ ಬಂಡವಾಳಶಾಹಿ ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿ ಕಾಪಾಡುವುದು ಬಿಟ್ಟರೆ ಸರ್ಕಾರಗಳಿಗೆ ಜನ ಸಾಮಾನ್ಯರ ಕಷ್ಟ ಸುಖಗಳನ್ನು ಅರಿತುಕೊಳ್ಳುವ ಮನಸ್ಸು ಇಲ್ಲ ಎಂದರು. ಬಯಲು ಸೀಮೆ ಜಿಲ್ಲೆಗಳ ನೀರಾವರಿ ಹೋರಾಟಗಳನ್ನು ದೇಶದ ಎರಡನೇ ಸ್ವಾಂತಂತ್ರ್ಯ, ಸಂಗ್ರಾಮಕ್ಕೆ ಹೋಲಿಸಿದ ನಿವೃತ್ತಿ ನ್ಯಾಯಮೂರ್ತಿ ಗೋಪಾಲಗೌಡರು ನೀರಾವರಿ ಹೋರಾಟ ಗೆಲ್ಲುವವರೆಗೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ನಮ್ಮ ಸಂಘಟಿತ ಹೋರಾಟಕ್ಕೆ ಮೂರು ಜಿಲ್ಲೆಗಳ ಮಹಾ ಜನತೆ ಬೆಂಬಲಿಸಿ ಪಾಲ್ಗೊಳ್ಳಬೇಕು ಕೇವಲ ನೀರಾವರಿ ಹೋರಾಟ ನಾಯಕರ ಹೋರಾಟ ಆಗಬಾರದು ಜನರ ಹೋರಾಟ ಆಗಬೇಕು ಈ ನಿಟ್ಟಿನಲ್ಲಿ ಜಲಾಗ್ರಹ ಸಮಾವೇಶಗಳ ಮೂಲಕ ಮೂರು ಜಿಲ್ಲೆಗಳಲ್ಲಿ ಪ್ರತಿ ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಸಂಘಟಿತರಾಗಬೇಕೆಂದರು.
ಜನ ರೊಚ್ಚಿಗೆದ್ದರೆ ಯಾವ ಸರ್ಕಾರಗಳು ಯಾವ ಮಿಲಿಟರಿ ಕೂಡ ಅಡ್ಡಿ ಬರುವುದಿಲ್ಲ. ಅದಕ್ಕೆ ಇತ್ತೀಚೆಗೆ ನೇಪಾಳದಲ್ಲಿ ನಡೆದ ಯುವಕರ ಹೋರಾಟ ನಮ್ಮ ಕಣ್ಣು ಮುಂದೆ ಇದೆ. ಹೊಸ ಆರ್ಥಿಕ ನೀತಿಯ ಪರಿಹಾರ ಹೋರಾಟಗಳು ಸ್ತಬ್ಧ ಹೋಗಿವೆ, ಆದರೆ ಬಯಲು ಸೀಮೆ ಜಿಲ್ಲೆಗಳಿಗೆ ಆಗುತ್ತಿರುವ ನೀರಾವರಿ ಮೋಸ ಅನ್ಯಾಯವನ್ನು ಜಿಲ್ಲೆಯ ಜನರು ಪ್ರಶ್ನಿಸಬೇಕು ಎಂದು ಕರೆ ನೀಡಿದರು.
ಈಗಿನ ಸರ್ಕಾರಗಳು ಸಂವಿಧಾನ ಬದ್ಧವಾಗಿ ಆಡಳಿತ ನೀಡುತಿಲ್ಲ ನೀರಾವರಿ ಹೋರಾಟದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಇಲ್ಲದೆ ಹೋದರೆ ಭವಿಷ್ಯದ ದಿನಗಳಲ್ಲಿ ಯಾರನ್ನು ಯಾರು ರಕ್ಷಣೆ ಮಾಡುವುದಿಲ್ಲ, ಬಯಲುಸೀಮೆ ಜಿಲ್ಲೆಗಳಿಗೆ ಶುದ್ಧ ನೀರು ಬೇಕು, ಶಾಸಕಾಂಗ ಕಾರ್ಯಾಂಗ ವಿಫಲವಾದಾಗ ನ್ಯಾಯಾಂಗ ಮಧ್ಯ ಪ್ರವೇಶಿಸಬೇಕು, ಆದರೆ ನ್ಯಾಯಾಂಗ ಕೂಡಾ ಇತ್ತೀಚಿನ ದಿನಗಳಲ್ಲಿ ಜನರ ಸಮಸ್ಯೆಗಳಿಗೆ ಧ್ವನಿ ಆಗುತ್ತಿಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ ನ್ಯಾಯಾಂಗವು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಟೀಕಿಸಿದ ವಿ. ಗೋಪಾಲಗೌಡರು. ರೈತರ ಕಷ್ಟ ಸುಖಗಳಿಗೆ ಸ್ಪಂದಿಸದ ಸರ್ಕಾರಗಳಿಗೆ ನಾಚಿಕೆ ಆಗಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳಾಗಿದ್ದು ಇಂದಿಗೂ ಕುಡಿಯುವ ನೀರಿಗಾಗಿ ಹೋರಾಟ ನಡೆಸುವುದು ದುರಂತ ಎಂದರು.
ಪ್ರಗತಿಪರ ಚಿಂತಕರಾದ ಡಾ. ವಾಸು ರವರು ಮಾತನಾಡಿ ಕೆ.ಸಿ ವ್ಯಾಲಿ ಹಾಗೂ ಹೆಚ್ ಎನ್ ವ್ಯಾಲಿ ನೀರಿನಿಂದ ಸೀಮೆ ಜಿಲ್ಲೆಗಳ ಜನರಿಗೆ ಹೆಚ್ಚಾಗಿ ಕ್ಯಾನ್ಸರ್ ರೋಗ ಜಾಸ್ತಿಯಾಗುತ್ತಿದೆ. ಜಲಾಗ್ರಹ ಹೋರಾಟದ ಜೊತೆ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರದ ವೈದ್ಯರನ್ನು ಒಟ್ಟಿಗೆ ಸೇರಿಸಿ ಹೋರಾಟಕ್ಕೆ ಬೆಂಬಲ ನೀಡುವ ಬಗ್ಗೆ ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಆಂಜನೇಯ ರೆಡ್ಡಿರವರು ಮಾತನಾಡಿ ಬಯಲು ಸೀಮೆಯ ಮೂರು ಜಿಲ್ಲೆಗಳ ಜನರು ಪೆನ್ನಾರ್ ಕನ್ನಡಿಗರು ಎಂದು ಹೇಳಿ ಈ ಭಾಗದ ಜನರು ಹೋರಾಟಕ್ಕೆ ಬೆಂಬಲ ನೀಡುವುದರ ಜೊತೆಗೆ ಹೋರಾಟಕ್ಕೆ ಧುಮುಕಬೇಕು. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಜಂಟಿ ಕ್ರಿಯಾ ಸಮಿತಿಗಳನ್ನು ಮಾಡಿ ತೆಲಂಗಾಣ ಮಾದರಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ..? ಮಹಿಳೆ ಅನ್ನುವ ಕಾರಣಕ್ಕೆ ತಹಶೀಲ್ದಾರ್ ನಿಂದ ಪೂಜೆ ಮಾಡಿಸದೆ ಇರುವುದು ಸಂವಿಧಾನಕ್ಕೆ ಮಾಡಿದ ಅಪಮಾನ : ಗೀತಾ
ಸಮಾವೇಶದಲ್ಲಿ ಡಾ.ಅನೀಲ್ ಕುಮಾರ್, ರೈತ ಸಂಘದ ನಾರಾಯಣಸ್ವಾಮಿ, ಕೋಟಿಗಾನಹಳ್ಳಿ ರಾಮಯ್ಯ, ಸಲಾವುದ್ದೀನ್ ಬಾಬು, ಲಕ್ಷ್ಮೀನಾರಾಯಣ, ವೆಂಕಟರೆಡ್ಡಿ, ಸುಷ್ಮಾ ಶ್ರೀನಿವಾಸ್, ಹೊಳಲಿ ಪ್ರಕಾಶ್, ಮುಂತಾದವರು ಉಪಸ್ಥಿತರಿದ್ದರು