“ಬ್ಯಾರಿ ಎಲ್ತ್‌ಗಾರ್ತಿಮಾರೊ ಕೂಟ” ವಾಟ್ಸಪ್ ಗ್ರೂಪ್ ವತಿಯಿಂದ ಅಕ್ಟೋಬರ್ 3ರಂದು ಬ್ಯಾರಿ ಭಾಷಾ ದಿನಾಚರಣೆಯ ಪ್ರಯುಕ್ತ ಸಾರ್ವಜನಿಕರಿಗಾಗಿ ನಡೆಸಲಾದ “ಗಾಝಾ” ವಿಷಯಾಧಾರಿತ ಬ್ಯಾರಿ ಕವನ ಸ್ಪರ್ಧೆಯಲ್ಲಿ ಮೂವರ ಕವನಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಯಿತು.
ಕವನ ಸ್ಪರ್ಧೆಯಲ್ಲಿ ಸುಮಾರು ಐವತ್ತರಷ್ಟು ಮಹಿಳೆಯರು ಭಾಗವಹಿಸಿದ್ದು. ಕವನ ಸ್ಪರ್ಧೆಯ ಪ್ರಥಮ ಬಹುಮಾನವನ್ನು ಕವಯತ್ರಿ ಹಸೀನಾ ಮಲ್ನಾಡ್, ದ್ವಿತೀಯ ಬಹುಮಾನವನ್ನು ಲೇಖಕಿ ರಮೀಝ ಯಂ.ಬಿ. ಹಾಗೂ ತೃತೀಯ ಬಹುಮಾನವನ್ನು ಕವಯತ್ರಿ ಶಾಹಿದ ಮೈಕಾಲ ಗಳಿಸಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರೂಪಿನ ಅಡ್ಮಿನ್‌ಗಳಾದ ಆಯಿಷಾ ಯು.ಕೆ, ಹಫ್ಸಾ ಬಾನು ಬೆಂಗಳೂರು, ಝುಲೇಖ ಮುಮ್ತಾಝ್ ಹಾಗೂ ಶಮೀಮಾ ಕುತ್ತಾರ್ ರವರು ನಡೆಸಿಕೊಟ್ಟರು.
ಐದು ಸಮಾಧಾನಕರ ಬಹುಮಾನಗಳು ಕೂಡ ಪ್ರಕಟಿಸಿದ್ದು, ಈ ಬಹುಮಾನಕ್ಕೆ ಸುಮಯ್ಯ ಪಾಟೀಲ್, ಸಲ್ಮಾ ಮೈಕಾಲ, ಆಯಿಷಾ ಪೆರ್ನೆ, ಸಫಾ ಕಾರ್ಕಳ ಮತ್ತು ಮಿಸ್ರಿಯಾ ದೇರಳೆಕಟ್ಟೆ ಇವರು ಪಡೆದುಕೊಂಡಿದ್ದಾರೆ.
ಕವನ ಸ್ಪರ್ಧಯ ತೀರ್ಪುಗಾರರಾಗಿ ಕವಯತ್ರಿ ಮಿಸ್ರಿಯಾ ಪಜೀರ್ ಹಾಗೂ ಕವಿ ಅನ್ಸಾರ್ ಕಾಟಿಪಳ್ಳ ಸಹಕರಿಸಿದರು.
ವಿಜೇತರಿಗೆ ಗ್ರೂಪಿನ ವತಿಯಿಂದ ಅಕ್ಟೋಬರ್ 5ರಂದು ಅಪರಾಹ್ನ ಮಂಗಳೂರಿನ ಅಡ್ಯಾರ್ ಬಳಿ ಇರುವ ಬರಕಾ ಶಾಲೆಯಲ್ಲಿ ನಡೆಸಲಾಗುವ “ಬ್ಯಾರಿ ಬಾಸಾ ನಾಲಾಚರನೆ’ ಕಾರ್ಯಕ್ರಮದಲ್ಲಿ ಈ ಬಹುಮಾನಗಳನ್ನು ನೀಡಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.