ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಂದಿಸದೇ, ಔಷಧಿಗಳನ್ನು ಸಮಪರ್ಕವಾಗಿ ನೀಡದೆ ರೋಗಿಗಳನ್ನು ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರ ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಮನವಿ ಸಲ್ಲಿದ್ದಾರೆ.
ಅನಾರೋಗ್ಯ ಕಾರಣ ವಿದ್ಯಾರ್ಥಿ ಆಕಾಶ್ ಸಿಂಧನಮಡು ಎಂಬುವವರು ಸರ್ಕಾರಿ ಆಸ್ಪತ್ರೆಗೆ ಹೋಗಿದ್ದ, ಸಂದರ್ಭದಲ್ಲಿ ವೈದ್ಯರು ಕೆಲವು ಔಷಧಿಗಳನ್ನು ರಶೀದಿಯಲ್ಲಿ ಬರೆದು ನೀಡುತ್ತಾರೆ. ಈ ಔಷಧಿಗಳು ಸರ್ಕಾರಿ ಮೆಡಿಕಲ್‌ನಲ್ಲಿ ಇಲ್ಲವೆಂದು ತಿಳಿದ ಹಿನ್ನೆಲೆ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ನಾಗರಾಜ ಮನ್ನೆಯವರು ಬಳಿ ಔಷಧಿಯ ಬಗ್ಗೆ ವಿಚಾರಿಸಿದಾಗ ನನಗೆ ಕೇಳಬೇಡ ಹೋಗಿ ಡಿಹೆಚ್‌ಓಗೆ ಕೇಳು ಎಂದು ಅಸಡ್ಡೆಯಿಂದ ಉತ್ತರ ನೀಡಿದರೆಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ | ಮುಂದುವರೆದ ಧರಣಿ ಸತ್ಯಾಗ್ರಹ; ಅತಿವೃಷ್ಟಿ ಹಾನಿಗೆ ಶೀಘ್ರ ಪರಿಹಾರಕ್ಕೆ ಪ್ರಗತಿಪರರ ಆಗ್ರಹ
ಡಿಹೆಚ್‌ಓ ಅವರನ್ನು ಸಂಪರ್ಕಿಸಿದ ವೇಳೆ ಆಸ್ಪತ್ರೆಯಲ್ಲಿ ಔಷಧಿ ಇರುವ ಬಗ್ಗೆ ಆಡಳಿತ ಅಧಿಕಾರಿ ಬಳಿಯಲ್ಲಿ ಮಾಹಿತಿ ಇರುತ್ತದೆ. ನಮ್ಮ ಬಳಿಯಲ್ಲಿ ಇರುವುದಿಲ್ಲ ಎಂದು ಉತ್ತರ ನೀಡುತ್ತಾರೆ. ಇದರ ಬಗ್ಗೆ ಆಡಳಿತ ಅಧಿಕಾರಿ ಡಾ.ನಾಗರಾಜ ಮನ್ನೆಯವರಿಗೆ ತಿಳಿಸಿದರೆ ಅವರು ಅದಕ್ಕೆ ಸ್ಪಂದನೆ ನೀಡದೇ ಅವಾಚ್ಯ ಶಬ್ದಗಳಿಂದ ನಿಂದಿಸಿದರೆ ಎಂದು ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್ ಆರೋಪಿಸಿದೆ. ಅಧಿಕಾರಿಗಳು ಸಾರ್ವಜನಿಕರ ಪರವಾಗಿ ಇರದೇ ಗೂಂಡಾಗಳಂತೆ ವರ್ತನೆ ಮಾಡುತ್ತಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಜತೆಗೆ ಆಸ್ಪತ್ರೆಗಳಿಗೆ ಸಕಾಲದಲ್ಲಿ ಔಷಧಿಗಳನ್ನು ಒದಗಿಸುವಂತೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸ್ಟೂಡೆಂಟ ಅಸೋಸಿಯೇಷನ್‌ನ ಜಿಲ್ಲಾ ಅಧ್ಯಕ್ಷರದ ಸಿದ್ದಾರ್ಥ ಎಂ.ಪಿ., ಉಪಾಧ್ಯಕ್ಷರದ ಮಹೇಶ ದೊಡ್ಡಮನಿ, ಕಾರ್ಯದರ್ಶಿಗಳಾದ ಕಾರ್ತಿಕ ಶೆಟ್ಟಿ, ನಾಗೇಶ್ ಪೂಜಾರಿ, ಆಕಾಶ, ದರ್ಶನ, ರಾಜು, ಬಸವರಾಜ, ಚಂದು, ಪ್ರಭಾಕರ ಇತರರಿದ್ದರು.
