ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮಾಡಮಗೇರಿ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮೇಲೆ ನಡೆದ ಮಾರಣಾಂತಿಕ ಹಲ್ಲೆಯಿಂದ ಗ್ರಾಮ ದಟ್ಟಣೆಗೊಂಡಿದೆ.
ಮಾಡಮಗೇರಿ ಗ್ರಾಮ ಪಂಚಾಯತ್ನ ಪಿಡಿಒ ಜಯಗೌಡ ಪಾಟೀಲ ಅವರು ಅನಧಿಕೃತವಾಗಿ ಉತಾರ್ ನೀಡಿದರೆಂಬ ಆರೋಪದ ಹಿನ್ನೆಲೆ, ಅಸಮಾಧಾನಗೊಂಡ ಕೆಲವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಜಯಗೌಡ ಪಾಟೀಲ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.