ಆಶ್ರಯ ಯೋಜನೆಗೆ ಮಂಜೂರಾಗಿದ್ದ ಜಮೀನು ಒತ್ತುವರಿ ಹಿನ್ನೆಲೆ ಮೈಸೂರು ತಾಲೂಕು ತಹಶೀಲ್ದಾರ್ ಟಿ ಎನ್ ಗಿರೀಶ್ ನೇತೃತ್ವದಲ್ಲಿ ಆನಂದೂರಿನಲ್ಲಿ ತೆರವು ಕಾರ್ಯಾಚರಣೆ ನಡೆದಿದ್ದು, 4 ಎಕರೆ ಸರ್ಕಾರಿ ಭೂಮಿ ವಶಪಡಿಸಿಕೊಳ್ಳಲಾಗಿದೆ.
ಆಶ್ರಯ ಯೋಜನೆಗಾಗಿ ಮಂಜೂರಾಗಿದ್ದ ಸರ್ಕಾರಿ ಗೋಮಾಳ ಒತ್ತುವರಿ ಮಾಡಿಕೊಂಡು ಪಟ್ಟಭದ್ರ ಹಿತಾಸಕ್ತಿಗಳು ಹಸುವಿನ ಕೊಟ್ಟಿಗೆ ನಿರ್ಮಾಣ ಮಾಡಿದ್ದರು. ತಹಶೀಲ್ದಾರ್ ಟಿ ಎನ್ ಗಿರೀಶ್ ತೆರವು ಕಾರ್ಯಾಚರಣೆ ನಡೆಸಿ ಹಸುವಿನ ಕೊಟ್ಟಿಗೆ ನೆಲಸಮ ಮಾಡಿದ್ದಾರೆ.
1996ರಲ್ಲಿ ಆಶ್ರಯ ಯೋಜನೆಗಾಗಿ 4 ಎಕರೆ ಮಂಜೂರಾಗಿತ್ತು. ಸದರಿ ಜಮೀನಿನಲ್ಲಿ ಆನಂದೂರು ಗ್ರಾಮದ ಗವಿರಂಗೇಗೌಡ ಹಾಗೂ ಇತರರು 20 ಗುಂಟೆ ಜಮೀನು ಒತ್ತುವರಿ ಮಾಡಿಕೊಂಡಿದ್ದ ಆರೋಪ ಕೇಳಿ ಬಂದಿದ್ದು ಆನಂದೂರು ಗ್ರಾಮದ ಸರ್ವೆ ನಂಬರ್ 6ರಲ್ಲಿ ಒತ್ತುವರಿ ತೆರವು ಮಾಡಲಾಗಿದೆ.
ಮೈಸೂರು ತಾಲೂಕು ತಹಶೀಲ್ದಾರ್ ಟಿ ಎನ್ ಗಿರೀಶ್ ನೇತೃತ್ವದ ಅಧಿಕಾರಿಗಳ ತಂಡವು ಜೆಸಿಬಿ ಯಂತ್ರಗಳನ್ನು ಬಳಸಿ ತೆರವು ಕಾರ್ಯಾಚರಣೆ ನಡೆಸಿತು. ಅಕ್ರಮವಾಗಿ ನಿರ್ಮಿಸಲಾದ ದನದ ಕೊಟ್ಟಿಗೆಯನ್ನು ತೆರವುಗೊಳಿಸಿ, ಭೂಮಿಯನ್ನು ವಶಪಡಿಸಿಕೊಳ್ಳಲಾಯಿತು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವಿಲ್ಲದೆ ಧ್ವಜಾರೋಹಣ; ಮುಖ್ಯ ಶಿಕ್ಷಕ ಅಮಾನತು
ಇಲವಾಲ ಹೋಬಳಿಯ ಗ್ರಾಮದಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಲು ಸರ್ಕಾರವು ಭೂಮಿಯನ್ನು ಮಂಜೂರು ಮಾಡಿದೆ.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಿರೀಶ್, ಭೂದಾಖಲೆಗಳ ಸಹಾಯಕ ನಿಬಂಧಕ ಚಿಕ್ಕಣ್ಣ, ತಾಲೂಕು ಸರ್ವೇಯರ್ ವೆಂಕಟೇಶ್, ಉಪತಹಶೀಲ್ದಾರ್ ಕುಬೇರ್, ಕಂದಾಯ ನಿರೀಕ್ಷಕ ಶಿವಕುಮಾರ್ ಇದ್ದರು.