ರಾಯಚೂರು ವಾಣಿಜ್ಯೋದ್ಯಮ ಸಂಘ ಹಾಗೂ ರಾಜ್ಯ ವಾಣಿಜ್ಯೋದ್ಯಮ ಸಂಘ, ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಸೆಪ್ಟೆಂಬರ್ 2 ಮತ್ತು 3ರಂದು ರಾಜ್ಯ ಮಟ್ಟದ ಕೈಗಾರಿಕಾ ಸಮಾವೇಶವನ್ನು ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಬಿ ವಿ ಗೋಪಾಲರೆಡ್ಡಿ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಆಯಾ ಜಿಲ್ಲೆಗಳಲ್ಲಿರುವ ಕೈಗಾರಿಕಾ ಸಮಸ್ಯೆಗಳು ಹಾಗೂ ಪರಿಹಾರದ ಕುರಿತು ಸಭೆಗಳನ್ನು ನಡೆಸಲು ಎಫ್‌ಕೆಸಿಸಿ ನಿರ್ಧರಿಸಿದೆ. ನಗರದಲ್ಲಿ ನಡೆಯಲಿರುವ ಎರಡು ದಿನದ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಕೈಗಾರಿಕಾ ಸಚಿವ ಎಂ ಬಿ ಪಾಟೀಲ್, ಸಣ್ಣಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರು, ಕೃಷಿ ಸಚಿವ ಚಲುವರಾಯ ಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಾ ಶರಣಪ್ರಕಾಶ ಪಾಟೀಲ್, ಸಣ್ಣಕೈಗಾರಿಕಾ ಸಚಿವ ಎನ್ ಎಸ್ ಬೋಸರಾಜ, ಎಪಿಎಂಸಿ ಸಚಿವ ಶಿವಾನಂದಪಾಟೀಲ್ ಸೇರಿ ಅನೇಕರು ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
“ವಿಭಾಗ ಮಟ್ಟದಲ್ಲಿ ಇರುವ ಸಮಸ್ಯೆಗಳನ್ನು ಸರ್ಕಾರ ಗಮನ ಸೆಳೆಯುತ್ತದೆ. ಮಧ್ಯಾಹ್ನದ ವೇಳೆಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವುಕುಮಾರ್ ಅವರೂ ಭಾಗಿಯಾಗಲಿದ್ದಾರೆ” ಎಂದರು.
“ಸೆ.3 ರಂದು ನಡೆಯಲಿರುವ ಸಮ್ಮೇಳದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಸಚಿವ, ಭಗವಂತ ಖೂಬಾ, ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ಸೆಲ್ವಂ ಕುಮಾರ, ಕೌಶಲಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಅಶ್ವಿನಿಗೌಡ ಭಾಗವಹಿಸಲಿದ್ದಾರೆ. ಎರಡು ದಿನಗಳಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಕೈಗಾರಿಕೆಗಳ ಬೆಳೆವಣಿಗೆ, ಸಮಸ್ಯೆಗಳನ್ನು ಕುರಿತು ಚರ್ಚಿಸಲಾಗುತ್ತದೆ” ಎಂದರು.
“ರಾಜ್ಯದ ಹಲವು ಜಿಲ್ಲೆಗಳಿಂದ 500 ರಿಂದ 600 ಕೈಗಾರಿಕೋದ್ಯಮಗಳು ಭಾಗವಹಿಸಲಿದ್ದು, ಸ್ಥಳೀಯರು ಸೇರಿ ಒಂದು ಸಾವಿರ ಜನ ಎರಡು ದಿನ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ವಾಣಿಜ್ಯೋದ್ಯಮ ಸಂಘದ ಕೌಶಲ್ಯಾಭಿವೃಧ್ದಿ ಸಮಿತಿ ಅಧ್ಯಕ್ಷ ತ್ರಿವಿಕ್ರಮ ಜೋಷಿ ಮಾತನಾಡಿ, “ಎರಡು ದಿನದ ಸಮ್ಮೇಳನದಲ್ಲಿ ಜಿಲ್ಲಾ ಕೈಗಾರಿಕೆಗಳ ನೂರು ಸ್ಟಾಲ್‌ಗಳನ್ನು ಹಾಕಲಾಗುತ್ತದೆ. ವ್ಯಾಪರಸ್ಥರು, ಕೈಗಾರಿಕೋದ್ಯಮಗಳು ಭಾಗವಹಿಸಬೇಕು” ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಫೋಟೋಗ್ರಫಿ ಕಾರ್ಯಾಗಾರ
ಇದೇ ಸಂದರ್ಭದಲ್ಲಿ ರಾಯಚೂರು ವೆಬ್ ಪೇಜ್ ರಚಿಸಲು ಎಲ್ಲ ವ್ಯಾಪಾರಸ್ಥರು, ಉದ್ಯಮಿಗಳು ಸಹಕರಿಸುವ ಮನವಿಯನ್ನು ಬಿಡುಗಡೆಗೊಳಿಸಿದರು.
ರಾಯಚೂರು ವಾಣಿಜ್ಯೋದ್ಯೋಮ ಸಂಘದ ಅಧ್ಯಕ್ಷ ಎಸ್ ಕಮಲಕುಮಾರ ಜೈನ್, ಎಫ್‌ಕೆಸಿಸಿ ವಿವಿಧ ಸಮಿತಿಗಳ ಅಧ್ಯಕ್ಷರುಗಳಾದ ದಾನಪ್ಪಗೌಡರು ಗದಗ, ರಾಜಪುರೋಹಿತ, ಮಧುಸೂಧನ, ಮಲ್ಲಿಕಾರ್ಜುನ ದೋತರಬಂಡಿ, ಜಂಬಣ್ಣ ಯಕ್ಲಾಸಪುರು, ಜಗದೀಶ ಗುಪ್ತ, ನಾಗನಗೌಡ ಹರವಿ, ಸಿದ್ದನಗೌಡ ಗಾರಲಿದನ್ನಿ ಇದ್ದರು.