ದಿನವೂ ಮೀನು ತಿನ್ನುವುದರಿಂದ ನಿಮ್ಮ ಕಣ್ಣು ಐಶ್ವರ್ಯ ರೈ ತರಹ ಹೊಳೆಯುತ್ತದೆ ಎಂದು ಮಹಾರಾಷ್ಟ್ರದ ಬುಡಕಟ್ಟು ಸಚಿವ ವಿಜಯ್‌ಕುಮಾರ್ ಗವಿತ್ ಹೇಳಿಕೆ ನೀಡಿದ್ದಾರೆ.
ಉತ್ತರ ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ರಾಜ್ಯ ಬುಡಕಟ್ಟು ಸಚಿವ ವಿಜಯಕುಮಾರ್ ಗವಿತ್ ನೀಡಿದ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
‘ಪ್ರತಿದಿನ ಮೀನು ಸೇವಿಸುವ ಜನರ ಚರ್ಮವು ನಯವಾಗುತ್ತದೆ ಮತ್ತು ಅವರ ಕಣ್ಣುಗಳು ಹೊಳೆಯುತ್ತವೆ. ಯಾರಾದರೂ ನಿಮ್ಮನ್ನು ನೋಡಿದರೆ, ಆ ವ್ಯಕ್ತಿಯು ನಿಮ್ಮತ್ತ ಆಕರ್ಷಿತನಾಗುತ್ತಾನೆ. ಐಶ್ವರ್ಯಾ ರೈ ಬಗ್ಗೆ ನಾನು ನಿಮಗೆ ಹೇಳಿದ್ದೆನಾ? ಅವರು ಮಂಗಳೂರಿನ ಸಮುದ್ರ ತೀರದ ಬಳಿ ವಾಸಿಸುತ್ತಿದ್ದರು. ಅವರು ಪ್ರತಿ ದಿನ ಮೀನು ತಿನ್ನುತ್ತಿದ್ದರು. ನೀವು ಅವರ ಕಣ್ಣು ನೋಡಿದ್ದೀರಾ. ನಿಮ್ಮ ಕಣ್ಣು ಕೂಡ ಅದೇ ಥರ ಆಗುತ್ತದೆ’ ಎಂದು ಸಚಿವರು ಬಾಯಿ ಹರಿಬಿಟ್ಟಿದ್ದಾರೆ.
‘ಮೀನಿನಲ್ಲಿ ಕೆಲವು ಎಣ್ಣೆಗಳಿವೆ, ಅದು ನಿಮ್ಮ ಚರ್ಮವನ್ನು ನಯವಾಗಿಸುತ್ತದೆ’ ಎಂದು 68 ವರ್ಷದ ಸಚಿವ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ: ಈ ದಿನ ಸಂಪಾದಕೀಯ | ಕರ್ನಾಟಕದ ಮಾದರಿಯಿಂದ ಜನರ ಬದುಕು ಸಂಪನ್ನವಾಗಲಿ
ಅವರ ಹೇಳಿಕೆಯು ವಿವಾದಕ್ಕೆ ಈಡಾಗಿದ್ದು, ಹಲವರ ಟೀಕೆಗೆ ಗುರಿಯಾಗುತ್ತಿದೆ.
ಎನ್‌ಸಿಪಿ ಶಾಸಕ ಅಮೋಲ್ ಮಿತ್ಕರಿ ಮಾತನಾಡಿ, ‘ಸಚಿವರು ಇಂಥ ಕ್ಷುಲ್ಲಕ ವಿಚಾರಗಳನ್ನು ಬಿಟ್ಟು ಬುಡಕಟ್ಟು ಜನರು ಎದುರಿಸುತ್ತಿರುವ ಸಮಸ್ಯೆಗಳತ್ತ ಗಮನ ಹರಿಸಬೇಕು’ ಎಂದಿದ್ದಾರೆ. ಬಿಜೆಪಿಯ ಶಾಸಕರಾದ ನಿತೇಶ್ ರಾಣೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ನಾನು ದಿನವೂ ಮೀನು ತಿನ್ನುತ್ತೇನೆ. ನನ್ನ ಕಣ್ಣುಗಳು ಐಶ್ವರ್ಯ ರೈ ಥರ ಆಗಬೇಕಿತ್ತಲ್ಲಾ. ಇದರ ಬಗ್ಗೆ ಏನಾದರೂ ಸಂಶೋಧನೆ ನಡೆದಿದೆಯೇ ಎಂದು ಗವಿತ್ ಸಾಹೇಬರನ್ನು ಕೇಳುತ್ತೇನೆ’ ಎಂದು ವ್ಯಂಗ್ಯ ಮಾಡಿದ್ದಾರೆ.
ವಿಜಯ್‌ಕುಮಾರ್ ಗವಿತ್ ಅವರ ಮಗಳು ಹೀನಾ ಗವಿತ್ ಬಿಜೆಪಿಯ ಲೋಕಸಭಾ ಸದಸ್ಯರಾಗಿದ್ದಾರೆ.
ಅವಿವೇಕದ ನಡೆನುಡಿ
ಈರೀತಿ ಒಬ್ಬರನ್ನು ಮತ್ತೊಬ್ಬರೊಂದಿಗಿನ ವ್ಯತ್ಯಾಸ ದೊಂದಿಗೆ ಸಮೀಕರಿಸುವ ಅಥವಾ ಭಿನ್ನತೆಯನ್ನು ಕಾಣುವ ನೀಚ ಮನಸ್ಥಿತಿ ಇರುವವರೆಗೂ ಒಂದೇ ಭಾರತ
ಒಂದೇ ಕಾನೂನು ಮತ್ತು ಬೇರೆ ಬೇರೆ ನ್ಯಾಯ ಅಷ್ಟೇ