- ಕಲುಷಿತ ನೀರು ತುಂಬಿದ ಬಾಟಲಿ ಹಿಡಿದು ಜಿ.ಪಂ. ಕಛೇರಿ ಮುಂಭಾಗ ಪ್ರತಿಭಟನೆ
- ಸಾಂಕ್ರಾಮಿಕ ರೋಗದ ಭೀತಿಯ ಎದುರಿಸುತ್ತಿರುವ ಮುನಮುಟ್ಟಿಗಿ ಗ್ರಾಮಸ್ಥರು
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಮುನಮುಟ್ಟಿಗಿ ಗ್ರಾಮದಲ್ಲಿ ಕಳೆದ ಕೆಲ ತಿಂಗಳಿಂದ ಶುದ್ಧ ಕುಡಿಯುವ ನೀರಿಲ್ಲದೆ ಜನರು ಪರದಾಡುವಂತಾಗಿದೆ. ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅವರಿಗೆ ಹಕ್ಕೊತ್ತಾಯ ಸಲ್ಲಿಸಿದ್ದಾರೆ. “ಗ್ರಾಮದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಆದರೂ, ಮೋಟಾರ್ ಹಾಳಾಗಿದೆ, ಇನ್ನು ಕೊಳವೆ ಬಾವಿಗಳಲ್ಲಿನ ನೀರು ಕುಡಿಯುಲು ಯೋಗ್ಯವಿಲ್ಲ. ಇದರಿಂದ ಗ್ರಾಮಸ್ಥರು ಪಕ್ಕದ ಹಳ್ಳ-ಕೊಳ್ಳದಲ್ಲಿ ಹರಿಯುವ ನೀರು ಸೇವನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ದನ-ಕರುಗಳಿಗೆ ಮೈತೊಳೆಯುವುದು, ಜನರು ಬಟ್ಟೆ ತೊಳೆಯುವ ನೀರೇ ಗತಿಯಾದ ಗ್ರಾಮಸ್ಥರು ಸಾಂಕ್ರಾಮಿಕ ರೋಗದ ಭೀತಿಯ ಎದುರಿಸುತ್ತಿದ್ದಾರೆ” ಎಂದು ಗ್ರಾಮಸ್ಥರು ಅಧಿಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಕಲುಷಿತ ನೀರು ತುಂಬಿದ ಬಾಟಲಿ ತೆಗೆದುಕೊಂಡು ಜಿಲ್ಲಾ ಪಂಚಾಯಿತಿ ಕಛೇರಿ ಮುಂಭಾಗ ಪ್ರತಿಭಟಿಸಿದ ಗ್ರಾಮಸ್ಥರು ಕೂಡಲೇ ಶುದ್ಧ ಕುಡಿಯುವ ನೀರು ಒದಗಿಸುವಂತೆ ಒತ್ತಾಯಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಒತ್ತಾಯಿಸಿದರು. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಸರ್ಕಾರದ ಗೈರಾಣ ಜಮೀನು ಒತ್ತುವರಿ; ಅಧಿಕಾರಿಗಳ ವಿರುದ್ಧ ಉಮೇಶ ಕೆ. ಮುದ್ನಾಳ ಕಿಡಿ
ಈ ಸಂದರ್ಭದಲ್ಲಿ ಶರಣರೆಡ್ಡಿ ಹತ್ತಿಗೂಡುರ್, ಕಂಡಪ್ಪ ಅಯ್ಯಾಳ ಬಿ, ಮಲ್ಲಿಕಾರ್ಜುನ್, ಭೀಮಣ್ಣ, ಹೊನ್ನಪ್ಪ, ಶಾಂತಪ್ಪ, ದೇವಪ್ಪ, ನಿಂಗಪ್ಪ, ಹೊನ್ನಪ್ಪ, ಪರಶುರಾಮಪ್ಪ, ಮಲ್ಲಪ್ಪ, ದೇವಪ್ಪ ಪೂಜಾರಿ, ದೇವಪ್ಪ, ಮಲ್ಲು ಅಮಾತ್ಯೆಪ್ಪ ದೇವೇಂದ್ರಪ್ಪ ಇದ್ದರು…