- ಮಹಿಳೆಯರಿಗೆ ಎಲ್ಲಾ ರಂಗದಲ್ಲೂ ಸಕ್ರಿಯವಾಗಿ ಭಾಗಿಯಾಗಲು ಭಾರತದ ಸಂವಿಧಾನ ಕಾರಣ
- ಪ್ರತಿಯೊಬ್ಬರು ಡಾ.ಬಾಬಾ ಸಾಹೇಬ್ ಅಂಬೇಡ್ಕರವರ ಪರಿಶ್ರಮದ ಫಲಾನುಭವಿಗಳು
ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಬದುಕುವುದು ಸಂವಿಧಾನದ ಆಶಯವಾಗಿದೆ. ಶಾಂತಿ, ಸುವ್ಯವಸ್ಥೆ ಹಾಗೂ ಸೌಹಾರ್ದತೆಯಿಂದ ಬಾಳುವುದೇ ಪ್ರಜಾಪ್ರಭುತ್ವ ಭಾರತದ ಸಂವಿಧಾನದ ಕೊಡುಗೆಯಾಗಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಹೇಳಿದರು.
ಯಾದಗಿರಿ ನಗರದ ಅಂಬೇಡ್ಕರ್ ಸಭಾಂಗಣದಲ್ಲಿ ದಸಂಸ ಆಯೋಜಿಸಿದ್ದ ಆಧುನಿಕ ಭಾರತದ ಪಿತಾಮಹ
ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಮಹಿಳಾ ವಿಮೋಚನೆಯ ತಾಲೂಕು ಮಟ್ಟದ ವಿಚಾರ ಸಂಕೀರ್ಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಮಹಿಳೆಯರಿಗೆ ಎಲ್ಲಾ ರಂಗದಲ್ಲೂ ಸಕ್ರಿಯವಾಗಿ ಭಾಗಿಯಾಗಲು ಭಾರತದ ಸಂವಿಧಾನವೇ ಮೂಲ ಕಾರಣ, ಸ್ತ್ರೀಯರಿಗೆ ಬಾಬಾ ಸಾಹೇಬರು ನೀಡಿದ ಬಹುದೊಡ್ಡ ಕೊಡುಗೆಯಾಗಿದೆ” ಎಂದು ಹೇಳಿದರು.
ಪ್ರಗತಿಪರ ಚಿಂತಕ, ಸಾಹಿತಿ ಚಂದ್ರಶೇಖರ ಕಟ್ಟಿಮನಿ ಮಾತನಾಡಿ, “ಜ್ಞಾನದ ಮೂಲಕ ಎಲ್ಲವನ್ನೂ ಗೆಲ್ಲಬಹುದು ಎಂದು ತೋರಿಸಿದವರು ಡಾ. ಬಾಬಾ ಸಾಹೇಬ್ ಅಂಬೇಡ್ಕರರು, ಪ್ರತಿಯೊಬ್ಬ ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ವಿಚಾರ ಮತ್ತು ಆದರ್ಶಗಳನ್ನು ಪಾಲಿಸಿದರೆ ಉನ್ನತ ಸ್ಥಾನಕ್ಕೇರಬಹುದು” ಎಂದರು.
“ಜಾತಿ, ಲಿಂಗ, ವರ್ಣ ಭೇದವಿಲ್ಲದೆ ಸರ್ವರಿಗೂ ಮತಹಕ್ಕು ಕಲ್ಪಿಸಿ ಸರ್ವರಿಗೂ ಸಮಬಾಳು-ಸಮಪಾಲು ನೀಡಿದ್ದಾರೆ.
ಎಲ್ಲಾ ಜಾತಿಯವರು ಮೀಸಲಾತಿಯ ಫಲಾನುಭವಿಗಳಾಗಿದ್ದಾರೆ. ಪ್ರತಿಯೊಬ್ಬ ಪ್ರಜೆಯೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿಶ್ರಮದ ಫಲಾನುಭವಿಗಳೇ ಎಂಬುದು ಈ ದೇಶದ ಜನ ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ ? ರಾಯಚೂರು | ಜಿರಳೆ ಬಿದ್ದ ಹಾಲು ಸೇವನೆ; 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ
ಇದೇ ಸಂದರ್ಭದಲ್ಲಿ ವಯೋನಿವೃತ್ತ ಅಧಿಕಾರಿಗಳಾದ ಚನ್ನಾರಡ್ಡಿ ಎಂ .ತಂಗಡಗಿ, ಶರಣಬಸಪ್ಪ ಜಕಾಪೂರ, ಕುರಕುಂದಿ, ಹಣಮಂತ ಕಾಂಬ್ಳೆ, ನಿಂಗಪ್ಪ ದೊಡ್ಡನಿ, ಮಾನಯ್ಯ ಬೋನೇರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ.ಸಂಗಪ್ಪ ಎಸ್ .ರಾಂಪೂರ, ಮರೆಪ್ಪ.ಬಿ.ಜಾಲಿಮಂಚಿ, ಚಂದ್ರಶೇಖರ ಭೀಮರಾಯ ಟಿ . ಬಡಿಗೇರ, ಮರೆಪ್ಪ ಚಟ್ಟೇರಕರ್, ಚನ್ನಯ್ಯಸ್ವಾಮಿ ಹಿರೇಮಠ, ಮರಪ್ಪ ಕರಡಕರ್, ಅಮೀತ್ ಕ್ಯಾತನವರ್, ರವೀಂದ್ರನಾಥ ಹೊಸಮನಿ, ರಾವುತಪ್ಪ ಹವಲ್ದಾರ, ಶಾಂತಪ್ಪ ಕಟ್ಟಿ,ಬಸವರಾಜ ಗುಡಿಮನಿ, ಮಲ್ಲಣಾರ್ಜುನ ಕಂಬಾಳೆ ಸಿ.ಆರ್.ಸಿ. ಚಟ್ಟ ಇದ್ದರು. ರಾಘವೇಂದ್ರ ಹಾರಣಗೇರಾ ನಿರೂಪಿಸಿದರು, ಬೂದಯ್ಯ ಹಿರೇಮಠ ಪ್ರಾರ್ಥಿಸಿದರು, ನಿಂಗಣ್ಣ ನಾಟೇಕಾರ ಸ್ವಾಗತಿಸಿದರು, ಚಿಕ್ಕಭೀಮೇಶ ಸೀತ್ನಿ ವಂದಿಸಿದರು.