- ‘ಕಾರ್ಯಕರ್ತರು, ಶಾಸಕರ ಒತ್ತಡಕ್ಕೆ ನಿಖಿಲ್ ತಲೆ ಕೊಟ್ಟ’
- ‘ಸೋಲು, ಗೆಲುವು ಸಾಮಾನ್ಯ, ಆ ಬಗ್ಗೆ ಚಿಂತಿಸುವುದಿಲ್ಲ’
ಮುಂದಿನ ಐದು ವರ್ಷ ನಿಖಿಲ್ನನ್ನು ಚುನಾವಣೆಗೆ ಕರೆತರುವ ಪ್ರಶ್ನೆಯೇ ಇಲ್ಲ. ಕಲಾವಿದನಾಗಿ ಜೀವನ ರೂಪಿಸಿಕೊಳ್ಳುವಂತೆ ನಿಖಿಲ್ಗೆ ಹೇಳಿದ್ದೇನೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಮಂಡ್ಯದಲ್ಲಿ ಸೋಮವಾರ ಮಾತನಾಡಿದ ಅವರು, “ರಾಜಕೀಯದ ಸಹವಾಸಕ್ಕೆ ಹೋಗದೆ, ಭಗವಂತ ಕೊಟ್ಟ ಕಲೆ ಮುಂದುವರಿಸಿಕೊಂಡು ಹೋಗು ಎಂದು ಮಗನಿಗೆ ಹೇಳಿರುವೆ. ಈಗಾಗಲೇ ಮೂರು ಚಿತ್ರ ನಿರ್ಮಿಸಲು ಹಲವು ಸಂಸ್ಥೆಗಳು ಮುಂದೆ ಬಂದಿವೆ” ಎಂದರು.
“ಎರಡು ಬಾರಿ ಚುನಾವಣೆಯಲ್ಲಿ ನಿಖಿಲ್ ಸೋತಿದ್ದಾನೆ. ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಲು ತಯಾರಿರಲಿಲ್ಲ. ಕಾರ್ಯಕರ್ತರು ಹಾಗೂ ಶಾಸಕರ ಒತ್ತಡಕ್ಕೆ ನಿಖಿಲ್ ತಲೆ ಕೊಟ್ಟ. ಸೋಲು, ಗೆಲುವು ಸಾಮಾನ್ಯ. ಆ ಬಗ್ಗೆ ಚಿಂತಿಸುವುದಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಯಾವ ಶಾಸಕರೂ ಜೆಡಿಎಸ್ ಬಿಡಲ್ಲ, ಪಕ್ಷ ಸಂಘಟನೆಗೆ ನಾನೂ ತೊಡಗಿಕೊಳ್ಳುವೆ: ಹೆಚ್ ಡಿ ದೇವೇಗೌಡ
“ಇತ್ತೀಚೆಗೆ ನಿಖಿಲ್ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ. ಈ ಚಿತ್ರದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ” ಎಂದರು.