- ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣೆ ದಂಧೆ ಮಿತಿಮೀರಿ ನಡೆಯುತ್ತಿದೆ.
- ಸಂತ್ರಸ್ತ ವಿದ್ಯಾರ್ಥಿ ಮಲ್ಲೇಶ ಕುಟುಂಬಕ್ಕೆ ಪರಿಹಾರ ನೀಡಬೇಕು
ರಾಯಚೂರು ಜಿಲ್ಲೆ ಸೇರಿದಂತೆ ವಿವಿಧೆಡೆ ಅಕ್ರಮವಾಗಿ ನಡೆಯುತ್ತಿರುವ ಮರಳು ದಂಧೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ತಾರಾನಾಥ ಶಿಕ್ಷಣ ಸಂಸ್ಥೆಯ ಎಸ್‌ಆರ್‌ಪಿಎಸ್ ಕಾಲೇಜುವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಿದರು .
ಈ ಸಂಬಂಧ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿ ಮಾತನಾಡಿದ ವಿದ್ಯಾರ್ಥಿಗಳು, “ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣೆ ದಂಧೆ ಮಿತಿಮೀರಿ ನಡೆಯುತ್ತಿದೆ, ಹತ್ತಿರದ ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿಯೂ ನಡೆಯುತ್ತಿದೆ, ಅಕ್ರಮ ಮರಳು ಸಾಗಣೆಗೆ ಜನಪ್ರತಿನಿಧಿಗಳು ಪೋಷಿಸುತ್ತಿದಾರೆ. ಆದರೂ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಕ್ರಮವಹಿಸುತ್ತಿಲ್ಲ” ಎಂದು ದೂರಿದರು.
“ಅಕ್ರಮ ಮರಳು ಸಾಗಾಣೆಯಿಂದ ಅಮಾಯಕರ ಪ್ರಾಣ ಹಾನಿಯಾಗಿದೆ, ಕೊತ್ತದೊಡ್ಡಿ ಗ್ರಾಮದಲ್ಲಿ ಅಕ್ರಮ ಮರಳು ಸಾಗಾಣೆ ಟ್ರಾಕ್ಟರ್ ಹರಿದು ತಾರನಾಥ ಶಿಕ್ಷಣ ಸಂಸ್ಥೆ ಯ ವಿದ್ಯಾರ್ಥಿ ಮಲ್ಲೇಶ ಸಾವಿನಪ್ಪಿದ್ದು, ಕೂಡಲೇ ಅವರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ ? ರಾಯಚೂರು | ಮಕ್ಕಳಿಗೆ ಬಾಲ್ಯದ ಜೀವನವೇ ಇಲ್ಲದಂತಾಗಿದೆ; ಹಿರಿಯ ಸಾಹಿತಿ ಕಳವಳ
ಈ ಸಂದರ್ಭದಲ್ಲಿ ತಾರನಾಥ ಶಿಕ್ಷಣ ಸಂಸ್ಥೆಯ ಸದಸ್ಯರುಗಳಾದ ಪವನ ಸುಖಾಣ , ಅಂಬಾಪತಿ ಪಾಟೀಲ್, ಜಿ..ಶಿವಮೂರ್ತಿ, ಕಟ್ಕಂ ಶ್ರೀನಿವಾಸ ಸೇರಿದಂತೆ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.