- ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಕೆ
- ಜೀವ ಹಾನಿ ಸಂಭವಿಸಿದಲ್ಲಿ 5 ಲಕ್ಷ ರೂಪಾಯಿ ಜೀವ ವಿಮೆ ಒದಗಿಸಿಕೊಡಬೇಕು
ಬೀದರ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಪ್ರತಿ ವರ್ಷ ಮುಂಗಾರು, ಹಿಂಗಾರು, ಬೇಸಿಗೆ ಋತುವಿನಲ್ಲಿ ಬೆಳೆ ಸಮಿಕ್ಷೆ ಕಾರ್ಯಕೈಗೊಳುತ್ತೇವೆ. ಆದರೆ ಸದರಿ ಬೆಳೆ ಸಮೀಕ್ಷೆ ಕಾರ್ಯ ಸುಗಮ ರೀತಿಯಲ್ಲಿ ಮತ್ತು ನಿಗದಿತ ಅವಧಿಯಲ್ಲಿ ಪೂರ್ಣಗೊಳಬೇಕಾದರೆ ಹಲವು ಸಮಸ್ಯೆಗಳು ಎದುರಾಗುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾ ಬೆಳೆ ಸಮೀಕ್ಷೆದಾರರು ( ಪಿ.ಆರ್) ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾಡಳಿತ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ ಅವರು, ಕರ್ನಾಟಕ ಸರಕಾರದ ಆದೇಶದಂತೆ ಪ್ರತಿ ವರ್ಷ ಬೀದರ ಜಿಲ್ಲೆಯ ರೈತರ ಪಹಾಣಿ ಪ್ರತಿಕೆಯಲ್ಲಿ ಬೆಳೆ ನಮೂದು ಆಗಲು ಹಾಗೂ ಪ್ರಧಾನ ಮತ್ರಿ ಫಸಲ ಭಿಮಾ ಯೋಜನೆ ಪಡೆಯಲು ಬೆಳೆ ವಿಮೆ ಪಡೆಯಲು ವಿವಿಧ ಬೆಳೆ ಹಾನಿ ಪ್ರಸಂಗಗಳಲ್ಲಿ ಬೆಳೆ ಹಾನಿ ಪರಿಹಾರ ಪಡೆಯಲು ಮಾರುಕಟ್ಟೆಯಲ್ಲಿ ಬೆಳೆ ಮಾರಾಟ ಮಾಡಲು ಬೆಳೆ ಸಮೀಕ್ಷೆ ಅತ್ಯಗತ್ಯವಾಗಿರುತ್ತದೆ. ಬೆಳೆ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಹಲವು ತೊಂದರೆಗಳು ಅನುಭವಿಸುತ್ತಿದ್ದು ಕೂಡಲೇ ಸಮಸ್ಯೆಗಳು ಬಗೆಹರಿಸುವಂತೆ ಒತ್ತಾಯಿಸಿದರು
ಬೇಡಿಕೆಗಳು:
- ಬೆಳೆ ಸಮೀಕ್ಷೆ ಕೈಗೊಳ್ಳಲು ಹೋದಾಗ ಹೊಲದಲ್ಲಿ ವಿವಿಧ ವಿಷಜಂತುಗಳಿಂದ ಸುರಕ್ಷಿತ ಕವಚಗಳನ್ನು (ಸೆಫ್ಟಿ ಶೂ ಹಾಗೂ ಇತ್ಯಾದಿಗಳು) ಕೊಡಬೇಕು.
- . ಪಿ.ಆರ್.ಗಳಿಗೆ (PR) ಗುರುತಿನ ಚೀಟಿ ನೀಡಬೇಕು.
- ಸುಗಮ ರೀತಿಯಲ್ಲಿ ಬೆಳೆ ಸಮೀಕ್ಷೆಕೈಗೊಳ್ಳಲು ಸುಗಮ ರೀತಿಯಲ್ಲಿ ಜಿ.ಪಿ.ಎಸ್ (G.P.S) ನಕ್ಷೆ ವ್ಯವಸ್ಥೆ ಮಾಡಿಕೊಡುವುದು.
- ಜೀವ ಹಾನಿ ಸಂಭವಿಸಿದಲ್ಲಿ 5 ಲಕ್ಷ ರೂಪಾಯಿ ಜೀವ ವಿಮೆ ಒದಗಿಸಿಕೊಡಬೇಕು.
- ಪ್ರತಿ ಪ್ಲಾಟ್ ಗೆ 50 ರೂ. ನಿಗದಿಪಡಿಸುವುದು ಅಥವಾ ಪಿ.ಆರ್ ಗಳಿಗೆ ಪ್ರತಿ ತಿಂಗಳಿಗೆ ನಿರ್ದಿಷ್ಟ ಮೊತ್ತ (10,000) ನಿಗದಿಪಡಿಸಬೇಕು.
- ಪಿ.ಆರ್.ಗಳು ಬೆಳೆ ಸಮೀಕ್ಷೆ ಮಾಡುವ ಸಮಯದಲ್ಲಿ ಫೋನ್ ಹಾಗೂ ಚಾರ್ಚಿಂಗ್ ತೊಂದರೆ ಆಗುತ್ತಿದೆ.ಹೊಸ ಮೊಬೈಲ್, ಪವರ್ ಬ್ಯಾಂಕ್ ಕೊಡಿಸಬೇಕು.
- ಪ್ರತಿ ವರ್ಷ ಜಿ.ಪಿ.ಎಸ್ (GPS) ನಕ್ಷೆ ಸರ್ವೆ ನಂಬರ ಮೂಲಕ ಬೆಳೆ ಸಮೀಕ್ಷೆ ಮಾಡಲಾಗುತ್ತಿತ್ತು. ಆದರೆ ಈವಾಗ ಹಿಸ್ಸಾ ನಂಬರ ಜಿ.ಪಿ.ಎಸ್ ಮಾಡಲು ತುಂಬಾ ತೊಂದರೆ ಹಾಗೂ ಸಮಯ ವರ್ಥವಾಗುತ್ತಿದೆ. ಈ ಸಮಸ್ಯೆ ಬಗೆಹರಿಸಬೇಕು.
ಈ ಸುದ್ದಿ ಓದಿದ್ದೀರಾ ? ಬೀದರ್ | ವಿವಿಧ ಬೇಡಿಕೆಗಳ ಈಡೇರಿಕೆಗೆ ಭೀಮ್ ಆರ್ಮಿ ಒತ್ತಾಯ
ಈ ಸಂದರ್ಭದಲ್ಲಿ ಬೀದರ ಜಿಲ್ಲೆಯ ವಿವಿಧ ತಾಲೂಕಿನ ಪಿ.ಆರ್ ಗಳಾದ ಲೋಕೇಶ, ಬಸವರಾಜ ಕುಪ್ಪೆ, ಸಂಜುಕುಮಾರ, ವೀರಶೆಟ್ಟಿ, ಏಕನಾಥ ಮೇತ್ರೆ, ನಾಗಶೇಟ್ಟಿ, ಸಂತೋಷ, ಶ್ರೀಕಾಂತ, ಸುಂದರ, ರಮೇಶ, ಸೊಗೇಲ್, ದಾವುದ್ ಮಿಯ್ಯಾ, ನಾಗರಾಜ, ಕಲ್ಯಾಣಿ, ನರಸಪ್ಪ, ಪ್ರಕಾಶ, ಬಲಭೀಮ, ಮಧುಕರ, ಗುಂಡಪ್ಪ ಸೇರಿದಂತೆ ಇತರರಿದ್ದರು.