ಬೆಂಗಳೂರು-ಮೈಸೂರು ಹೆದ್ದಾರಿ: 24 ಸ್ಕೈವಾಕ್‌ ನಿರ್ಮಿಸಲು ನಿರ್ಧರಿಸಿದ ಹೆದ್ದಾರಿ ಪ್ರಾಧಿಕಾರ

Date:

Advertisements

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದ ಬಳಿಕ ಸುತ್ತಮುತ್ತ ಗ್ರಾಮಗಳಿಗಿದ್ದ ಸಂಪರ್ಕ ಕಡಿತಗೊಂಡಿದೆ. ಇದರಿಂದ ಸುತ್ತಮುತ್ತ ಗ್ರಾಮಗಳಲ್ಲಿ ವಾಸಿಸುವ ಜನರು ತಮ್ಮ ಗ್ರಾಮಗಳಿಗೆ ತೆರಳಲು ಹೆದ್ದಾರಿ ದಾಟಲು ಪರದಾಡುವಂತಾಗಿದೆ. ರಸ್ತೆ ದಾಟಲು ಜನರು ತಮ್ಮ ಪ್ರಾಣವನ್ನೇ ಪಣಕ್ಕಿಡಬೇಕಾದ ಸ್ಥಿತಿ ಎದುರಾಗಿದೆ. ಈ ಬಗ್ಗೆ ಸ್ಥಳೀಯರಿಂದ ಪದೇ ಪದೆ ದೂರುಗಳು ಬಂದ ಹಿನ್ನೆಲೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಬೆಂಗಳೂರು-ಮೈಸೂರು ಹೆದ್ದಾರಿಗೆ ಅಡ್ಡಲಾಗಿ ಒಟ್ಟು 24 ಸ್ಕೈವಾಕ್‌ಗಳನ್ನು ನಿರ್ಮಿಸಲು ನಿರ್ಧರಿಸಿದೆ.

“ಬೆಂಗಳೂರು-ಮೈಸೂರಿನ ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಚಲಿಸುತ್ತವೆ. ಈ ವೇಳೆ, ಸ್ಕೈವಾಕ್‌ಗಳ ಅನುಪಸ್ಥಿತಿಯಲ್ಲಿ, ಜನರು ರಸ್ತೆ ದಾಟಲು ಪ್ರಯತ್ನಿಸುವ ಮೂಲಕ ತಮ್ಮ ಪ್ರಾಣವನ್ನು ಅಪಾಯಕ್ಕೆ ತಂದುಕೊಳ್ಳುತ್ತಾರೆ” ಎಂದು ಜೂನ್‌ನಲ್ಲಿ ಹೆದ್ದಾರಿಯನ್ನು ಪರಿಶೀಲಿಸಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ಹೇಳಿದ್ದರು.

“ಪಾದಚಾರಿಗಳು ಹೆಚ್ಚಿನ ವೇಗದಲ್ಲಿ ವಾಹನಗಳು ಚಲಿಸುವ ಹೆದ್ದಾರಿಯನ್ನು ದಾಟಲು ಪ್ರಯತ್ನಿಸುವ ಮೂಲಕ ತಮ್ಮ ಪ್ರಾಣವನ್ನು ಅಪಾಯಕ್ಕೆ ತಂದುಕೊಳ್ಳುತ್ತಾರೆ. ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು. ಹಾಗಾಗಿ, ಹಲವಾರು ಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಈ ಪೈಕಿ ಸ್ಕೈವಾಕ್‌ಗಳನ್ನು ನಿರ್ಮಿಸುವುದು ಒಂದು ಉತ್ತಮವಾದ ಕ್ರಮ” ಎಂದು ಸಲಹೆ ನೀಡಿದ್ದರು.

Advertisements

“ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಜನರು ಪ್ರವೇಶಿಸುವುದನ್ನು ತಡೆಯಲು ಲೋಹದ ತಡೆ ಬೇಲಿಯನ್ನು ಹಾಕಲಾಗಿದೆ. ಆದರೆ, ಬೇರೆಡೆ ತೆರಳಲು ಮಾರ್ಗಗಳಿಲ್ಲದ ಕಾರಣ ಪಾದಚಾರಿಗಳು ಹಲವೆಡೆ ಹೆದ್ದಾರಿ ದಾಟಲು ಬೇಲಿಯನ್ನು ಕಡಿದು ಹಾಕಿದ್ದಾರೆ” ಎಂದು ಎನ್‌ಎಚ್‌ಎಐ ಮೂಲಗಳು ತಿಳಿಸಿವೆ.

“ಸುಮಾರು ಒಂದು ವರ್ಷದಲ್ಲಿ 24 ಸ್ಕೈವಾಕ್‌ಗಳನ್ನು ಹೆದ್ದಾರಿಗೆ ಅಡ್ಡಲಾಗಿ ನಿರ್ಮಿಸಲಾಗುವುದು. ಬೆಂಗಳೂರು ಹೊರವಲಯದಲ್ಲಿರುವ ಪಂಚಮುಖಿ ಗಣೇಶ ದೇವಸ್ಥಾನದ ನಂತರ ಪ್ರಾರಂಭವಾಗುವ ಫ್ಲೈಓವರ್ ರ್‍ಯಾಂಪ್‌ನಲ್ಲಿ ಎಲ್ಲ ವಾಹನಗಳು ಇಳಿಯುವ ಕಣಿಮಿಣಿಕೆಯಲ್ಲಿ ಮೊದಲ ಸ್ಕೈವಾಕ್ ನಿರ್ಮಿಸಿದರೆ, ಕೊನೆಯ ಸ್ಕೈವಾಕ್ ಸಿದ್ದಲಿಂಗಪುರದಲ್ಲಿ ಬರಲಿದೆ” ಎಂದು ಎನ್‌ಎಚ್‌ಎಐ ಮೂಲಗಳು ತಿಳಿಸಿವೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾಜಿ ಸಿಎಂ ಎಚ್‌ಡಿಕೆ ಆಸ್ಪತ್ರೆಗೆ ದಾಖಲು

ಈ ಸ್ಕೈವಾಕ್‌ಗಳ ನಿರ್ಮಾಣದಿಂದ ಮೈಸೂರು ಮತ್ತು ಬೆಂಗಳೂರು ನಡುವಿನ ಹೆದ್ದಾರಿಯುದ್ದಕ್ಕೂ ಅನೇಕ ಹಳ್ಳಿಗಳ ಜನರಿಗೆ ಪ್ರಯೋಜನವಾಗಿದೆ.

ಕಣಿಮಿಣಿಕೆ, ಮಂಚನಾಯಕನಹಳ್ಳಿ, ಕಲ್ಲುಗೊಪ್ಪಹಳ್ಳಿ, ಹುಲ್ತಾರ್ ಹೊಸದೊಡ್ಡಿ, ಮಾದಾಪುರ, ದಬನಗುಂದ, ರುದ್ರಾಕ್ಷಿಪುರ, ಅಗರಲಿಂಗನದೊಡ್ಡಿ, ಮೊಬ್ಬಲಗೆರೆ, ಗೆಜ್ಜಲಗೆರೆ ಕೈಗಾರಿಕಾ ಪ್ರದೇಶ, ಗೆಜ್ಜಲಗೆರೆ, ಬಿ ಗೌಡಗೆರೆ, ಬೂದನೂರು, ಕಲ್ಲಂಗಡಿ, ಗೌಡನಹಳ್ಳಿ, ಬ್ರಹ್ಮಪುರ, ಕಳಸ್ತವಾಡಿ ಮತ್ತು ಸಿದ್ದಲಿಂಗಪುರ, ಕಲಮಿಣಿಕೆಯಲ್ಲಿ ಸ್ಕೈವಾಕ್‌ಗಳು ಬರಲಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X