ಶರಣ ನೂಲಿಯ ಚಂದಯ್ಯ ಅವರು ಕನ್ನಡ ನಾಡು ಕಂಡ ಶ್ರೇಷ್ಠ ಕಾಯಕ ಯೋಗಿಯಾಗಿದ್ದರು ಎಂದು ನಾಲಂದಾ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ. ಮನ್ಮಥ ಡೋಳೆ ನುಡಿದರು.
ಔರಾದ ತಾಲೂಕು ಆಡಳಿತವು ಆಯೋಜಿಸಿದ್ದ ಶರಣ ನೂಲಿಯ ಚಂದಯ್ಯ ಹಾಗೂ ನಾರಾಯಣ ಗುರು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಕಾಯಕ ದಾಸೋಹ ಮೈಗೂಡಿಸಿಕೊಂಡ ಶರಣ ನೂಲಿ ಚಂದಯ್ಯನವರ 48 ವಚನಗಳು ಲಭ್ಯವಿದ್ದು, ಪ್ರತಿಯೊಂದು ಮನುಕುಲಕ್ಕೆ ಅವಶ್ಯಕ ಸಂದೇಶಗಳು ಸಾರುತ್ತವೆ” ಎಂದರು.
ಮುಖಂಡ ಡಾ. ಭೀಮಸೆನ್ ಸಿಂಧೆ ಮಾತನಾಡಿ, “ಸಾಮಾಜಿಕ ನ್ಯಾಯಕ್ಕಾಗಿ ಅನೇಕ ಮಹಾತ್ಮರು, ಶರಣರು, ದಾಸರು ಕೆಲಸ ಮಾಡಿದ್ದು, ಚಂದಯ್ಯನವರು ಇದೇ ಸಾಲಿಗೆ ಸೇರುತ್ತಾರೆ” ಎಂದರು.
ತಾಲೂಕು ಕೋರಮಾ ಸಮಾಜದ ಅಧ್ಯಕ್ಷ ಧನರಾಜ ಮಾನೆ ಮಾತನಾಡಿ, “ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಮುದಾಯ ಮುನ್ನೆಲೆಗೆ ಬರಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಎಲ್ಲದರಲ್ಲೂ ಗುಣಾತ್ಮಕತೆ ಕಾಣುವ ಮನೋಭಾವ ಬೆಳೆಯಬೇಕು: ಪ್ರೊ. ವಿಕ್ರಮ ವಿಸಾಜಿ
ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ನರಸಪ್ಪ,ಪ್ರಮುಖರಾದ ರಾಮಣ್ಣ ವಡಿಯಾರ್, ನಾಗನಾಥ ಸಾಡಂಗಲೆ, ಡಾ. ವೈಜಿನಾಥ ಬುಟ್ಟೆ, ಶಿವಾಜಿರಾವ ಪಾಟೀಲ್ ಮುಂಗನಾಳ, ಬಾಬುರಾವ ತಾರೆ, ಸುಧಾಕರ ಕೊಳ್ಳುರ್, ಗುರುನಾಥ ವಡ್ಡೆ, ಸಂಜಯ ಧುಳೆ, ವಿಜಯಕುಮಾರ್, ನರಸಿಂಗ ಮಾನೆ, ವಾಮನ ಮಾನೆ, ರಾಜಕುಮಾರ ಮಾನೆ ಸೇರಿದಂತೆ ಇನ್ನಿತರರಿದ್ದರು.