₹30 ಕೋಟಿ ವೆಚ್ಚದ ಟೆಂಡರ್‌ಗೆ 12 ಪರ್ಸೆಂಟ್ ಕಮಿಷನ್ ಪಡೆದು ವಂಚಿಸಿದ್ದ ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಗನ್‌ಮ್ಯಾನ್ ವಿರುದ್ಧ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾಜಿ ಸಚಿವ ಹಾಲಪ್ಪ ಅವರ ಗನ್‌ಮ್ಯಾನ್ ರಾಘವೇಂದ್ರ ಎಂಬುವವರು ಮಾಯಕೊಂಡ ಗ್ರಾಮ ಪಂಚಾಯಿತಿ ಟೆಂಡರ್ ಕೊಡಿಸುತ್ತೇನೆ ಎಂದು ಹೆಚ್ ರಾಜು ಎಂಬುವವರಿಗೆ ನಂಬಿಸಿದ್ದಾರೆ. ₹30 ಕೋಟಿ ವೆಚ್ಚದ ಟೆಂಡರ್‌ಗೆ 12 ಪರ್ಸೆಂಟ್ ಕಮಿಷನ್ ನೀಡುವಂತೆ ಕೇಳಿದ್ದು, ಟೆಂಡರ್ ಕೊಡಿಸುವ ಮೊದಲು ₹10 ಲಕ್ಷ ಪಡೆದು ರಾಜು ಎಂಬುವವರಿಗೆ ವಂಚನೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.
₹10 ಲಕ್ಷ ಪಡೆದ ಬಳಿಕ ಟೆಂಡರ್ ಕೊಡಿಸದೆ ಸತಾಯಿಸಿದ್ದಾರೆ. ಬಳಿಕ ರಾಜು ಅವರು ನೀಡಿದ ಹಣವನ್ನು ವಾಪಸ್ ಕೇಳಿದಾಗ ಕೇವಲ ₹4 ಲಕ್ಷ ಮಾತ್ರ ಹಿಂತಿರುಗಿ ನೀಡಿದ್ದಾರೆ. ಇನ್ನುಳಿದ ₹6 ಲಕ್ಷ ಕೊಡದೆ ಮೋಸ ಮಾಡಿದ್ದಾರೆ ಎಂದು ರಾಜು ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸೆ.11 ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿದ ಖಾಸಗಿ ಸಾರಿಗೆ ಒಕ್ಕೂಟ
ರಾಜು ಅವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.