ರಾಮನಗರ | ಅನೈತಿಕವಾಗಿ ಅಧಿಕಾರಕ್ಕೇರುವುದು ಬಿಜೆಪಿಯ ಕಾಯಕ: ಸಚಿವ‌ ಶಿವರಾಜ ತಂಗಡಗಿ

Date:

Advertisements
  • ಹೆಚ್ಚಿನ ಆಧುನಿಕತೆಯೊಂದಿಗೆ ಕೊಪ್ಪಳದಲ್ಲಿ ಜಾನಪದ ಲೋಕ ನಿರ್ಮಾಣ ಮಾಡಲಾಗುವುದು.
  • ರಾಜ್ಯ ಸರ್ಕಾರದ ಗ್ಯಾರಂಟಿಗಳಿಗೆ ಬೆದರಿ ಬಿಜೆಪಿ ಪಕ್ಷದ ಶಾಸಕರು ನಮ್ಮ‌ ಪಕ್ಷಕ್ಕೆ ಬರುತ್ತಿದ್ದಾರೆ.

“ಕರ್ನಾಟಕವೆಂದು ನಮ್ಮ ರಾಜ್ಯಕ್ಕೆ ನಾಮಕರಣ ಮಾಡಿ ನವೆಂಬರ್ 1 ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ. ಆದುದರಿಂದ ರಾಜ್ಯಾದ್ಯಂತ ʼಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡʼ ವೆಂಬ ಕಾರ್ಯಕ್ರಮವನ್ನು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದ್ದು, ಅದರಂತೆ ಒಂದು ವರ್ಷ ರಾಜ್ಯಾದ್ಯಾಂತ ಈ ಕಾರ್ಯಕ್ರಮವನ್ನು ಏರ್ಪಡಿಲಾಗುವುದು” ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಬಳಿಕ ಸಚಿವ ಶಿವರಾಜ್ ತಂಗಡಗಿ ಅವರು ಮೊದಲ ಬಾರಿಗೆ ಭಾನುವಾರ ರಾಮನಗರ ಜಾನಪದ‌ ಲೋಕಕ್ಕೆ ಭೇಟಿ ಜಾನಪದ ಲೋಕದ ಜಾನಪದ ಕಲಾಕೃತಿಗಳು, ಪೌರಾಣಿಕ ಹಾಗೂ ಮಹಾ ಕಾವ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಅವರು, ” ಜಾನಪದ ಲೋಕಕ್ಕೆ ಹೆಚು ವೀಕ್ಷಕರನ್ನು ಸೆಳೆಯಲು ಹೆಚ್ಚು ಪ್ರಚಾರ ಕಾರ್ಯಕ್ಕೆ ಕ್ರಮವಹಿಸಲಾಗುವುದು. ಜಾನಪದ ಲೋಕ ವೀಕ್ಷಿಸಿ ಇಲ್ಲಿನ ಮಾದರಿಯಲ್ಲಿ ಹೆಚ್ಚಿನ ಆಧುನಿಕತೆಯೊಂದಿಗೆ ಕೊಪ್ಪಳದಲ್ಲಿ ಜಾನಪದ ಲೋಕ ನಿರ್ಮಾಣ ಮಾಡಲಾಗುವುದು” ಎಂದು ಭರವಸೆ ನೀಡಿದರು.

“ಈ ಕಾರ್ಯಕ್ರಮವನ್ನು ಏರ್ಪಡಿಸುವ ಮೊದಲು ರಾಜ್ಯದ ಸಾಹಿತಿಗಳು, ಹೋರಾಟಗಾರರ, ಕಲಾವಿದರ ಅಭಿಪ್ರಾಯವನ್ನು ಸಂಗ್ರಹಿಸುವ ಕಾರ್ಯ ಮಾಡಲಾಗುತ್ತಿದೆ. ಈ ಸಂಬಂಧ ಈಗಾಗಲೇ ಬೆಂಗಳೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗ ಮಟ್ಟದ ಸಭೆ ಪೂರ್ಣಗೊಂಡಿದ್ದು, ಮೈಸೂರು ವಿಭಾಗದ ಸಭೆ ಪೂರ್ಣಗೊಂಡ ನಂತರ ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು” ಎಂದರು.”ಈ ಕಾರ್ಯಕ್ರಮವನ್ನು ಏರ್ಪಡಿಸುವ ಮೊದಲು ರಾಜ್ಯದ ಸಾಹಿತಿಗಳು, ಹೋರಾಟಗಾರರ, ಕಲಾವಿದರ ಅಭಿಪ್ರಾಯವನ್ನು ಸಂಗ್ರಹಿಸುವ ಕಾರ್ಯ ಮಾಡಲಾಗುತ್ತಿದೆ. ಈ ಸಂಬಂಧ ಈಗಾಗಲೇ ಬೆಂಗಳೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗ ಮಟ್ಟದ ಸಭೆ ಪೂರ್ಣಗೊಂಡಿದ್ದು, ಮೈಸೂರು ವಿಭಾಗದ ಸಭೆ ಪೂರ್ಣಗೊಂಡ ನಂತರ ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು” ಎಂದರು.

Advertisements

ಅನೈತಿಕವಾಗಿ ಅಧಿಕಾರಕ್ಕೇರುವುದು ಬಿಜೆಪಿಯ ಕಾಯಕ:

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ‌ ಬಿಜೆಪಿ ಸ್ವಂತ ಶಕ್ತಿ ಮೇಲೆ‌ ಸರ್ಕಾರ ರಚನೆ‌ ಒಮ್ಮೆಯೂ ಮಾಡಲಿಲ್ಲ,‌ ಅಡ್ಡದಾರಿಯಲ್ಲಿ ಅಧಿಕಾರಕ್ಕೇರುವುದು ಆ ಪಕ್ಷದ ನಾಯಕರಿಗೆ ಕರಗತವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ‌ ಟೀಕಿಸಿದರು.

ರಾಮನಗರದ ಜಾನಪದ‌ ಲೋಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ನ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ‌‌ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು, “ಅನೈತಿಕವಾಗಿ ಸರ್ಕಾರ ರಚಿಸುವುದು ಅವರ ಕಾಯಕ. ಬಿಜೆಪಿ ಸ್ವಂತ ಶಕ್ತಿ ಮೇಲೆ‌ ಸರ್ಕಾರ ರಚನೆ‌ ಮಾಡಿದ‌‌ ಉದಾಹರಣೆ ಇಲ್ಲ. ಆ ಪಕ್ಷದ ನಾಯಕರಿಗೆ ಬದ್ಧತೆ ಇಲ್ಲ. ಅಪರೇಷನ್ ಕಮಲ‌ ಮಾಡುವ ಕನಸು ಕಾಣುತ್ತಿದ್ದಾರೆ. ಇದೆಲ್ಲ‌ ನಡೆಯುವುದಿಲ್ಲ. ಜನತೆ ನಮಗೆ ದೊಡ್ಡ ಮಟ್ಟದ ಬೆಂಬಲ ನೀಡಿದ್ದಾರೆ. ಯಾವುದೇ ಅಪರೇಷನ್‌‌ ನಡೆಯಲ್ಲ. ನಮ್ಮ ಗ್ಯಾರಂಟಿಗಳಿಗೆ ಬೆದರಿ ಆ ಪಕ್ಷದ ಶಾಸಕರು ನಮ್ಮ‌ ಪಕ್ಷದತ್ತ‌ ಬರುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಜನತೆ ಬಿಜೆಪಿಗರಿಗೆ ತಕ್ಕ‌ಪಾಠ ಕಲಿಸಿದರೂ ಆ ಪಕ್ಷದ ಮುಖಂಡರಿಗೆ ಬುದ್ದಿಬಂದಂತೆ ಕಾಣುತ್ತಿಲ್ಲ” ಎಂದು ಛೇಡಿಸಿದರು.

ಈ ಸುದ್ದಿ ಓದಿದ್ದೀರಾ? ವಿಜಯನಗರ | ಕಾಡುಪ್ರಾಣಿಗಳ ದಾಳಿಯಿಂದ ಜೋಳದ ಬೆಳೆ ನಾಶ; ರೈತ ಕಂಗಾಲು

“ಕೇಂದ್ರದಲ್ಲಿ‌ ಅಧಿಕಾರಕ್ಕೆ ಬರುವ ಮುನ್ನ ಪ್ರಧಾನಿ‌ ನರೇಂದ್ರ ಮೋದಿ‌‌‌‌ ಅವರು, ಅಧಿಕಾರಕ್ಕೆ ‌ಬಂದ‌ ಕೂಡಲೇ ವಿದೇಶದಲ್ಲಿರುವ ಕಪ್ಪು ಹಣ ತರುತ್ತೇವೆ.‌ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದೆಲ್ಲ‌ ಜನತೆಗೆ ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ‌ಬಂದರು.‌ ಅದೆಲ್ಲ ಆಶ್ವಾಸನೆಯಾಗಿಯೇ ಉಳಿದಿದೆ. ನಾವು ಚುನಾವಣಾ ಪೂರ್ವದಲ್ಲಿ‌ ಕೊಟ್ಟ ಆಶ್ವಾಸನೆಯಂತೆ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ” ಎಂದರು.

ಈ ಸಂದರ್ಭದಲ್ಲಿ, ಜಾನಪದ ಲೋಕದ ಟ್ರಸ್ಟಿ ಆದಿತ್ಯ ನಂಜರಾಜು, ಸಚಿವರ ಆಪ್ತ ಕಾರ್ಯದರ್ಶಿ ಮಧುಸೂಧನ ರೆಡ್ಡಿ ಹಾಗೂ ಜಾನಪದ ಲೋಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X