ರಾಯಚೂರು | ಸಮಾನತೆಯ ಶತ್ರು ಸನಾತನವಾದ ನಾಶವಾಗಲೇಬೇಕು: ಟಿಯುಸಿಐ

Date:

Advertisements

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಅವರು ‘ಸನಾತನ ಧಮ೯ದ ನಿಮೂ೯ಲನೆಯ ಅಗತ್ಯ’ದ ಇಂಗಿತವನ್ನು ಪ್ರಕಟಿಸಿದ್ದಾರೆ. ಇದು ಭಾರತದ ಬಹು ಜನರ, ಅದರಲ್ಲೂ ಜಾತಿಯ ತುಳಿತ ಹಾಗೂ ಧಮ೯ದ ದಬ್ಬಾಳಿಕೆಗೆ ಗುರಿಯಾದ ದಮನಿತರ ಮನದಾಳದ ಮಾತಾಗಿದೆ. ಸ್ಟಾಲಿನ್ ಅವರ ಹೇಳಿಕೆ ಸಮರ್ಥನೀಯ ಎಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ) ಹೇಳಿದೆ.

ಉದಯನಿಧಿ ಅವರ ಹೇಳಿಕೆಯನ್ನು ಬೆಂಬಲಿಸಿ ಟಿಯುಸಿಐ ಪತ್ರಿಕಾ ಪ್ರಕಟಣೆ ಹೊರಡಿಸಿದೆ. “ಸನಾತನವಾದವು ಜಾತಿ ತಾರತಮ್ಯ, ಲಿಂಗ ತಾರತಮ್ಯ ಹಾಗೂ ಸಂಪತ್ತಿನ ಅಸಮಾನತೆಯನ್ನು‌ ಪ್ರತಿಪಾದಿಸುತ್ತದೆ. ದುಡಿಮೆಯನ್ನು ‘ಪಾಪ’ವೆಂದು ಸಾರುತ್ತದೆ. ಅಧಿಕಾರ ಹಾಗೂ ಸಂಪತ್ತಿಗೆ ಯಾವತ್ತೂ ಮೇಲ್ಜಾತಿಗರೇ ಒಡೆಯರಾಗಿರಬೇಕೆಂದು ಹೇಳುತ್ತದೆ. ಆ ವಾದದ ನಿರ್ಮೂಲನೆ ಅತ್ಯಗತ್ಯ” ಎಂದು ಹೇಳಿದೆ.

“ದಲಿತರು, ದುಡಿಮೆಗಾರರು ಹಾಗೂ ಮಹಿಳೆಯರಿಗೆ ಸ್ವಾತಂತ್ರ್ಯ ಇರಬಾರದೆಂಬ ಸಿದ್ದಾಂತ ಸನಾತನ ಧರ್ಮದ್ದಾಗಿದೆ. ಭಾರತದ ಸಂವಿಧಾನ ಹೇಳುವ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಜಾತ್ಯಾತೀತೆಗಳನ್ನು ಸನಾತನವಾದಿಗಳು ಸಂಪೂಣ೯ ತಿರಸ್ಕರಿಸುತ್ತಾರೆ. ಸನಾತನಾವಾದದ ಆಧಾರದ ಮೇಲೆ ಅವರು ಹಿಂದುರಾಷ್ಟ್ರ ನಿಮಾ೯ಣಕ್ಕೆ ಹೊರಟಿದ್ದಾರೆ. ಜಮ್ಮು-ಕಾಶ್ಮೀರ, ಮಣಿಪುರಗಳ ಮಾದರಿ ನಮ್ಮ ಕಣ್ಮುಂದಿದೆ. ‘ಒಂದೇ ರಾಷ್ಟ ಒಂದೇ ಧಮ’೯, ‘ಒಂದೇ ರಾಷ್ಟ್ರ ಒಂದೇ ಪೊಲೀಸ್’ ಹಾಗೂ ‘ಒಂದೇ ರಾಷ್ಟ್ರ, ಒಂದೇ ಚುನಾವಣೆ’ಯ ಮೂಲಕ ಭಾರತದ ಬಹು ಸಂಸ್ಕೃತಿ ಹಾಗೂ ಗಣತಂತ್ರದ ಮೇಲೆ ಸಂಘ ಪರಿವಾರದ ದಬ್ಬಾಳಿಕೆಯು ನಿರಂತರವಾಗಿ ಮುಂದುವರೆದಿದೆ” ಎಂದು ಕಿಡಿಕಾರಿದೆ.

Advertisements

“ಸಂಘ ಪರಿವಾರದ ದಬ್ಬಾಳಿಕೆಯನ್ನು ಪ್ರಶ್ನಿಸಿದರೆ ದೇಶದ್ರೋಹಿ ಪಟ್ಟ ಕಟ್ಟಿ ಜೈಲಿಗೆ ತಳ್ಳಲಾಗುತ್ತಿದೆ. ಇಂಥಹ ಫ್ಯಾಸಿಸ್ಟ್ ದಮನ ದಬ್ಬಾಳಿಕೆಗೆ ಸನಾತನವಾದವೆ ಮುಖ್ಯ ಆಧಾರವಾಗಿದೆ. ಇಂದು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದೊಂದಿಗೆ ಸೇರಿಕೊಂಡು, ದೇಶದ ಶ್ರಮಶಕ್ತಿ ಹಾಗೂ ಪ್ರಕೃತಿದತ್ತ ಸಂಪನ್ಮೂಲಗಳ ಲೂಟಿಗೆ ಈ ಸನಾತನವಾದಿಗಳೇ ಮುಂದೆ ನಿಂತಿದ್ದಾರೆ” ಎಂದು ಆರೋಪಿಸಿದೆ.

“ದೇಶದ ದುಡಿಯುವ ಜನರು ಹಾಗೂ ದಮನಿತ ಜನಾಂಗಗಳು ಮತ್ತು ಪ್ರಜಾಪ್ರಭುತ್ವಾದಿಗಳು ಈ ಸನಾತನವಾದಿಗಳ ನಿಮೂ೯ಲನೆಗಾಗಿ ಪಣ ತೊಡಬೇಕಾಗಿದೆ. ಇದಕ್ಕಾಗಿ ಮತ್ತೊಮ್ಮೆ ಅತೀ ದೊಡ್ಡ ಸಾಂಸ್ಕೃತಿಕ ರಾಜಕೀಯ ಚಳುವಳಿಗೆ ಮುಂದಾಗಬೇಕಾಗಿದೆ” ಎಂದು ಕರೆ ಕೊಟ್ಟಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X