‘ಕರ್ನಾಟಕ’ ಎಂಬ ಹೆಸರನ್ನು ನಾಮಕರಣ ಮಾಡಿ 50 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಮೈಸೂರು ಭಾಗದ ಸಾಹಿತಿ ಮತ್ತು ಕಲಾವಿದರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಮೈಸೂರಿನಲ್ಲಿ ಸಭೆ ನಡೆಸಿದ್ದಾರೆ.
ಈ ವೇಳೆ, ಸಚಿವರನ್ನು ಭೇಟಿ ಮಾಡಿದ ಕೊಡಗು ಕಸಾಪ ಮುಖಂಡರು ನಾಡಹಬ್ಬ ಮಡಿಕೇರಿ ಜನೋತ್ಸವ ದಸರಾಗೆ ಸಚಿವರು ಬರಬೇಕೆಂದು ಅಹ್ವಾನ ನೀಡಿದರು.
ಸಭೆಯಲ್ಲಿ ಕೊಡಗು ಜಿಲ್ಲೆಯಿಂದ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಲೋಕೇಶ್ ಸಾಗರ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪಾರ್ವತಿ ಅಪ್ಪಯ್ಯ, ಬಿ.ಎಸ್.ತಮ್ಮಯ್ಯ, ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಕೊಡಗು ಜಾನಪದ ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷ ಅನಿಲ್ ಎಚ್.ಟಿ, ರೇಖಾ ವಸಂತ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಮುನೀರ್ ಅಹ್ಮದ್, ಲಿಯಾಕತ್ ಅಲಿ, ನಾಗೇಶ್ ಕಾಲೂರು, ಟಿ.ಜಿ.ಪ್ರೇಮಕುಮಾರ್, ವೆಂಕಟ ನಾಯಕ್, ರೇವತಿ ರಮೇಶ್, ಕುಡಿಯರ ಶಾರದ, ಕಲಾವಿದ ಈ.ರಾಜು ಇತರರು ಇದ್ದರು.