- ರೈತರ ಅಲ್ಪ ಪ್ರಮಾಣದ ಸಾಲ ವಸೂಲಿಗಾಗಿ ಬ್ಯಾಂಕ್ ಅಧಿಕಾರಿಗಳು ನಿರಂತರ ಕಿರುಕುಳಕ್ಕೆ ನೀಡುತ್ತಿದ್ದಾರೆ.
- ರಾಜ್ಯ ಸರ್ಕಾರ ರೈತರ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಬಂದಿದ್ದು, ಸರ್ಕಾರ ರೈತರ ಬೆಳೆ ಸಾಲ ಸೇರಿದಂತೆ ಸಂಪೂರ್ಣ ಸಾಲಮನ್ನಾ ಕೈಗೊಂಡು ರೈತರ ಜೀವದಾನಕ್ಕೆ ಮುಂದಾಗಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿಗ್ಗಾವಿ-ಸವಣೂರ ತಾಲೂಕು ಘಟಕದ ಕಾರ್ಯಕರ್ತರು ಒತ್ತಾಯಿಸಿದರು.
ಈ ಕುರಿತು ರೈತ ಸಂಘದ ಹಾವೇರಿ ಜಿಲ್ಲಾಧ್ಯಕ್ಷ ಎಮ್.ಎನ್.ನಾಯ್ಕ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ನಡೆಸಿ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಶಿಗ್ಗಾವಿ-ಸವಣೂರ ಅಸಿಸ್ಟೆಂಟ್ ಕಮಿಷನರ್ ಅವರಿಗೆ ಸಲ್ಲಿಸಿದರು.
“ಬ್ಯಾಂಕ್ ಅಧಿಕಾರಿಗಳು, ಎಸ್ಕಾಂ ಇಲಾಖೆ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ರೈತರನ್ನು ಸಣ್ಣಪುಟ್ಟ ವಿಷಯಗಳಿಗೆ ಅಪರಾಧಿಗಳಂತೆ ಕಾಣುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ರೈತರ ಅಲ್ಪ ಪ್ರಮಾಣ ಸಾಲ ಮೊತ್ತ ವಸೂಲಿಗಾಗಿ ಬ್ಯಾಂಕ್ ಅಧಿಕಾರಿಗಳು ರೈತರಿಗೆ ನಿರಂತರ ಕಿರುಕುಳಕ್ಕೆ ನೀಡುತ್ತಿದ್ದಾರೆ. ಕೂಡಲೇ ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
“ರೈತರ ಸಾಮೂಹಿಕ ಮನವಿಗೆ ಸ್ಪಂದಿಸಿ ಸರ್ವ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ಮುಂದಾಗಗಬೇಕು. ಇಲ್ಲವಾದಲ್ಲಿ ಮುಂದಿನ ದಿನಮಾನದಲ್ಲಿ ಸರ್ಕಾರಕ್ಕೆ ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸವಣೂರು ಕಂದಾಯ ಇಲಾಖೆ ಕಚೇರಿ ಎದುರುಗಡೆ ಸಾವಿರಾರು ರೈತರು ಸಮ್ಮುಖದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಬೇಡಿಕೆಗಳು:
- ಬರಗಾಲ ಘೋಷಣೆಯೊಂದಿಗೆ ರೈತರಿಗೆ ಆತ್ಮಸ್ಥೈರ್ಯಕ್ಕಾಗಿ ಬಿತ್ತನೆ ಖರ್ಚು ಘೋಷಣೆ ಮಾಡಬೇಕು.
- ಅನಾವೃಷ್ಟಿಯಿಂದ ಬೆಳೆ ಹಾನಿ ಉಂಟಾದ ಹಿನ್ನೆಲೆಯಲ್ಲಿ ಕೂಡಲೇ ಬೆಳೆ ವಿಮಾ ಘೋಷಿಸಬೇಕು.
- ಕೃಷಿ ಚಟುವಟಿಕೆಗಾಗಿ ನಿರಂತರ ಮೂರು ಫೇಸ್ ವಿದ್ಯುತ್ ಸರಬರಾಜಿಗೆ ಸೂಕ್ತ ಕ್ರಮ ಕೈಗೊಂಡು ಒಣಗುತ್ತಿರುವ ಬೆಳೆಗಳಿಗೆ ಜೀವಕಳೆ ತುಂಬಲು ಮುಂದಾಗಬೇಕು.
- ರೈತರ ಬೆಳೆ ಸಾಲ ಸೇರಿದಂತೆ ಸಂಪೂರ್ಣ ಸಾಲ ಮನ್ನಾಕ್ಕೆ ಕ್ರಮ ಕೈಗೊಳ್ಳುವ ಮೂಲಕ ರೈತರಿಗೆ ಜೀವದಾನ ನೀಡಬೇಕು.
- ಸಾಲ ವಸೂಲಾತಿಗಾಗಿ ನಿರಂತರ ಕಿರುಕುಳ ನೀಡುತ್ತಿರುವ ಬ್ಯಾಂಕ್ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡುವುದು ಹಾಗೂ ರೈತರಿಗೆ ಸಾಲ ಮರುಪಾವತಿಗಾಗಿ ಸಮಯ ನೀಡಲು ಆದೇಶ ನೀಡಬೇಕು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬರ ಘೋಷಣೆಯಲ್ಲ, ಪೀಡಿತರಿಗೆ ಪರಿಹಾರ ಮುಟ್ಟಿಸುವುದು ಮುಖ್ಯ
- ರೈತರ ಕೃಷಿ ಚಟುವಟಿಕೆಗಾಗಿ ಹಾಗೂ ವಿದ್ಯುತ್ ಸಂಪರ್ಕ ನೀಡಲು ಸತಾಯಿಸುತ್ತಿರುವ ಹೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಪಾರದರ್ಶಕವಾಗಿ ಸರ್ಕಾರದ ಫೀಸ್ ಮಾತ್ರ ಪಡೆದು ವಿದ್ಯುತ್ ಸಂಪರ್ಕ ನೀಡಲು ಆದೇಶಿಸಬೇಕು.
- ರೈತರ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪ್ರವರ್ತಕ (ಟಿ ಸಿ) ನೀಡಲು ಸೂಚನೆ ನೀಡಬೇಕು.
- ಸರ್ಕಾರ ಹಾಗೂ ವಿವಿಧ ಇಲಾಖೆಯ ಮೆಲಾಧಿಕಾರಿಗಳು ರೈತರ ಅಹವಾಲು ಸ್ವೀಕಾರಕ್ಕಾಗಿ ಪ್ರತಿ ತಿಂಗಳು ಒಂದು ದಿನ ಸಮಯ ಮೀಸಲು ಇಡಬೇಕು. ಪ್ರತಿ ತಾಲೂಕು ಮಟ್ಟದಲ್ಲಿ ರೈತರ ಅಹವಾಲು ಸ್ವೀಕರಿಸಬೇಕು.