ಚಿಕ್ಕಮಗಳೂರು | ಲಂಚ ಸ್ವೀಕರಿಸುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಆರ್‌ಟಿಒ ಅಟೆಂಡರ್

Date:

Advertisements

ಪ್ರಾದೇಶಿಕ ಸಾರಿಗೆ ಇಲಾಖೆಯ ಅಟೆಂಡರ್ ಒಬ್ಬರು ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ನಗರದ ವ್ಯಕ್ತಿಯೊಬ್ಬರು 8 ಬೈಕ್‌ಗಳಿಗೆ ರಾಜ್ಯದಾದ್ಯಂತ ಸಂಚರಿಸಲು ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದ್ದರು. ಜೊತೆಗೆ ಒಂದು ಬೈಕಿಗೆ ₹500ರಂತೆ ಸರ್ಕಾರಕ್ಕೆ ಶುಲ್ಕ ಪಾವತಿಸಿದ್ದರು. ಆದರೆ ಅವರಿಗೆ ಪರವಾನಗಿ ನೀಡಲು ಚಿಕ್ಕಮಗಳೂರು ಆರ್‌ಟಿಒ ಮಧುರಾ ಅವರು ತಲಾ ಒಂದು ಬೈಕಿಗೆ ಒಂದು ಸಾವಿರದಂತೆ ಒಟ್ಟು ₹8,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.

ಕುಪಿತನಾದ ವ್ಯಕ್ತಿ ವಿಚಾರವನ್ನು ಲೋಕಾಯುಕ್ತ ಪೊಲೀಸರಿಗೆ ತಿಳಿಸಿದ್ದರು. ನಂತರ ಸೆಪ್ಟಂಬರ್ 4 ರಂದು ಆರ್‌ಟಿಒ ಕಚೇರಿಗೆ ಬಂದ ವ್ಯಕ್ತಿಗೆ ಮಧುರಾ ಅವರು ಅಟೆಂಡರ್ ಲತಾ ಬಳಿ ಲಂಚ ನೀಡುವಂತೆ ಹೇಳಿದ್ದಾರೆ. ಅದರಂತೆ ಅಧಿಕಾರಿಯ ಮಾತು ಕೇಳಿ ಲಂಚ ಸ್ವೀಕರಿಸಲು ಮುಂದಾದ ಅಟೆಂಡರ್ ಲತಾರನ್ನು ಲೋಕಾಯುಕ್ತರು ಬಂಧಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಮೈಸೂರು | ಬರ ನಿರ್ವಹಣೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ; ರೈತ ಸಂಘ ಆಗ್ರಹ

ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಇಲಾಖೆ ಭ್ರಷ್ಟಾಚಾರದ ಕೂಪವಾಗಿದ್ದು, ಇಲ್ಲಿ ಹಣವಿಲ್ಲದೆ ಯಾವುದೇ ಕಡತಗಳು ಮುಂದುವರಿಯುವುದಿಲ್ಲ. ಸಾರ್ವಜನಿಕರ ಯಾವುದೇ ಕೆಲಸಗಳಿಗೂ ಲಂಚದ ಬೇಡಿಕೆ ಇಡಲಾಗುತ್ತದೆ ಎಂಬ ದೂರುಗಳು ಹಿಂದಿನಿಂದಲೂ ಕೇಳಿಬಂದಿದ್ದವು. ಇದೀಗ ಆರ್‌ಟಿಒ ವಿಭಾಗದಲ್ಲಿ ಲಂಚ ಸ್ವೀಕರಿಸುವಾಗ ಸಾಕ್ಷಿ ಸಮೇತ ಲೋಕಾಯುಕ್ತರ ಬಲೆಗೆ ಬಿದ್ದಿರುವ ಪ್ರಕರಣ ನಡೆದಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. C T RAVI SOLUNDA BJP MAJI SHASAKA–Ivara kshetradalle istondu lanchavatara adarallu dakshina Kannada jilleya janaru Sakastu buddivantarante matte yake lancha–BAYALLI MANTRA KAIYALLI DANDA–Andangaytu🤔🥱😱🫣🥺😡

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಧಾರಾಕಾರ ಮಳೆ: ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ ರಜೆ ಘೋಷಣೆ

ಮಲೆನಾಡಿನಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮಕ್ಕಳ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ...

ಚಿಕ್ಕಮಗಳೂರು l ದಲಿತ ಯುವಕ ಸಾವಿನ ಪ್ರಕರಣ: ಆರೋಪಿ ಪೊಲೀಸ್ ಪೇದೆ ಬಂಧನ

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕು ಸಂಸೆ ಗ್ರಾಮದ ಯುವಕ ನಾಗೇಶ್ ಸಾವಿನ...

ಚಿಕ್ಕಮಗಳೂರು l ಮಲೆನಾಡಿನಲ್ಲಿ ಮಳೆಯ ಆರ್ಭಟ: ಉಕ್ಕಿ ಹರಿಯುತ್ತಿರುವ ತುಂಗಾ ನದಿ

ಶೃಂಗೇರಿ ತಾಲೂಕಿನ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾಗಿದ ಪರಿಣಾಮ ಕೆಲವು ಭಾಗಗಳಲ್ಲಿ ನೆರೆ...

ಚಿಕ್ಕಮಗಳೂರು l ಮಲೆನಾಡಿನಲ್ಲಿ ಕಾಡಾನೆ ಹಾವಳಿ: ಜನರಲ್ಲಿ ಭಯದ ವಾತಾವರಣ

ಮಲೆನಾಡಿನಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಕೆಲವು ದಿನಗಳ ಹಿಂದೇ ಆನೆ ದಾಳಿಯಿಂದ...

Download Eedina App Android / iOS

X