ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ)ಯ ಫಲಾನುಭವಿಗಳಗೆ ಬಾಕಿ ವೇತನ ಕೊಡಬೇಕು ಹಾಗೂ ಇತರರಿಗೂ ಯೋಜನೆ ಅಡಿ ಕೆಲಸ ನೀಡಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ಸಮಿತಿ ಕಾರ್ಯಕರ್ತರು ಧರಣಿ ಮಾಡುವುದರ ಮೂಲಕ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
“ಪ್ರಸ್ತುತ ವರ್ಷ ಸಕಾಲಕ್ಕೆ ಮಳೆಬಾರದೆ ಇರುವುದರಿಂದ ರೈತರು, ಕೂಲಿಕಾರರು ಸಂಕಷ್ಟದಲ್ಲಿದ್ದಾರೆ. ರೈತರನ್ನೇ ನಂಬಿ ಜೀವನ ಮಾಡುತ್ತಿರುವ ಕೂಲಿಕಾರರ ಬದುಕು ಬಹು ದುಸ್ತರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಕೊಡಬೇಕೆಂದು ಮತ್ತು ದುಡಿದವರ ವೇತನ ಕೊಡಬೇಕು” ಎಂದು ಒತ್ತಾಯಿಸಿದರು.
“ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಮಸ್ಯೆಗಳನ್ನು ಪರಿಹರಿಸುವುದರ ಮೂಲಕ ಹಲವು ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಒತ್ತಾಯಿಸಿದರು.
“ಫಾರಂ ನಂ.6 ಸ್ವೀಕೃತಿ ಕೊಟ್ಟು ತಕ್ಷಣವೇ ಕಲಸ ಕೊಡಬೇಕು. ಈಗಾಗಲೇ ದುಡಿದವರ ಕೂಲಿ ಹಣ ಕೊಡಲೇಬೇಕು. ನಾಗನಗಿ ಗ್ರಾಂ.ಪಂ.ನ ಕಂಪ್ಯೂಟರ್ ಆಪರೇಟರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಕೆಲಸದ ವೇಳೆ ಮೂಲ ಸೌಲಭ್ಯ ಒದಗಿಸಬೇಕು. ಕೆಲಸದಲ್ಲಿ ಕಾರ್ಯನಿರತರಾಗಿದ್ದಾಗ ಮೃತಪಟ್ಟ ಸಾಹೇಬಗೌಡನ ಕುಟುಂಬಕ್ಕೆ ಪರಿಹಾರ ಕೊಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?
“ಅಂಗವಿಕಲರಿಗೆ ಪ್ರತ್ಯೇಕ ಜಾಬ್ ಕಾರ್ಡ ಮಾಡಿಕೊಡಬೇಕು. ನಾಗನಗಿ ಮತ್ತು ಇಬ್ರಾಹಿಂಪೂರ ಗ್ರಾಂ.ಪಂ ಕಾರ್ಯಾಲಯಲ್ಲಿ ಅಲೆದಾಡಿದರೂ ಕೆಲಸ ಕೊಡದೇ ಸತಾಯಿಸುತ್ತಿದ್ದಾರೆ. ದುಡಿದವರಿಗೆ ಕೂಲಿ ಬರದೇ ಬೇರೆಯವರ ಖಾತೆಗೆ ಹಣ ಜಮಾ ಮಾಡುತ್ತಿದ್ದು. ಕೂಡಲೇ ಕೂಲಿ ಕೊಡಿಸಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ದವಲಸಾಬ್ ನಧಫ್, ತಾಲೂಕು ಅದ್ಯಕ್ಷೆ ರಂಗಮ್ಮ ಕಟ್ಟಿಮನಿ, ಗುಲಾಂ ಹುಸೇನ, ಕಾರ್ಯದರ್ಶಿ ಸಿದ್ದಯ್ಯ ಬೀರೆಗೊಂಡ ಇದ್ದರು.