ಪ್ರಧಾನಿ ನರೇಂದ್ರ ಮೋದಿ ಅವರು 20 ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಂಡೋನೇಷ್ಯಾಗೆ ಭೇಟಿ ನೀಡುತ್ತಿದ್ದು, ‘ದಿ ಪ್ರೈಮ್ ಮಿನಿಸ್ಟರ್ ಆಫ್ ಭಾರತ್’ ಎಂಬ ಅಧಿಕೃತ ಆಹ್ವಾನ ಪತ್ರವನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಮಾಹಿತಿಯಲ್ಲಿ ನರೇಂದ್ರ ಮೋದಿ ಅವರನ್ನು “ಭಾರತದ ಪ್ರಧಾನಿ” ಎಂದು ಉಲ್ಲೇಖಿಸಲಾಗಿದೆ.
ಇದಲ್ಲದೆ, ಆಗಸ್ಟ್ 22-25 ರಂದು ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ಗೆ ತೆರಳಿದ್ದ ಅವರ ಇತ್ತೀಚಿನ ಭೇಟಿಯ ಸಂದರ್ಭದಲ್ಲಿ ಸಮಾರಂಭದ ಪತ್ರಗಳಲ್ಲಿ ಮೋದಿ ಅವರನ್ನು ‘ದಿ ಪ್ರೈಮ್ ಮಿನಿಸ್ಟರ್ ಆಫ್ ಭಾರತ್’ ಎಂದು ಉಲ್ಲೇಖಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಭಾರತ, ಟರ್ಕಿಯಲ್ಲಿ ನಕಲಿ ಯಕೃತ್ತಿನ ಔಷಧಿ ಮಾರಾಟ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
20ನೇ ಆಸಿಯಾನ್ – ಭಾರತ ಶೃಂಗಸಭೆ ಮತ್ತು 18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಂದು(ಆಗಸ್ಟ್ 6) ರಾತ್ರಿ ಇಂಡೋನೇಷ್ಯಾಕ್ಕೆ ತೆರಳಲಿದ್ದಾರೆ. ಪ್ರಧಾನಿ ಮೋದಿಯವರನ್ನು ‘ದಿ ಪ್ರೈಮ್ ಮಿನಿಸ್ಟರ್ ಆಫ್ ಭಾರತ್’ ಎಂದು ಹೇಳುವ ಮೊದಲು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಜಿ20 ಔತಣಕೂಟಕ್ಕೆ ಕಳುಹಿಸಿದ ಆಮಂತ್ರಣ ಪತ್ರದಲ್ಲಿ ‘ದಿ ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಉಲ್ಲೇಖಿಸಲಾಗಿದೆ.
ಸೆಪ್ಟೆಂಬರ್ 18ರಂದು ಬಿಜೆಪಿ ಸರ್ಕಾರ 5 ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನವನ್ನೂ ಕರೆದಿದೆ. ಮುಂಬರುವ ವಿಶೇಷ ಅಧಿವೇಶನದಲ್ಲಿ ಇಂಡಿಯಾ ಹೆಸರನ್ನು ಭಾರತ ಎಂದು ಬದಲಾಯಿಸಲಾಗುವುದಕ್ಕೆ ಈ ಆಹ್ವಾನ ಪತ್ರಗಳು ಮತ್ತಷ್ಟು ಪುಷ್ಟಿ ನೀಡಿವೆ.
ಇಂಡೋನೇಷ್ಯಾ ಆತಿಥ್ಯ ವಹಿಸುತ್ತಿರುವ 20 ನೇ ಆಸಿಯಾನ್-ಭಾರತ ಶೃಂಗಸಭೆ ಮತ್ತು 18 ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನ ಮಂತ್ರಿ ಅವರು ಸೆಪ್ಟೆಂಬರ್ 6-7 ರಂದು ಎರಡು ದಿನಗಳ ಭೇಟಿಗಾಗಿ ಜಕಾರ್ತಾಕ್ಕೆ ಭೇಟಿ ನೀಡುತ್ತಿದ್ದಾರೆ.
ಜಿ-20 ಶೃಂಗಸಭೆ ದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿದ್ದು, ಆಸಿಯಾನ್ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಪ್ರಧಾನಿ ಭಾರತಕ್ಕೆ ಮರಳಲಿದ್ದಾರೆ. ಇಂಡೋನೇಷ್ಯಾ G20 ‘ತ್ರಿಲೋಕ’ದ ಭಾಗವಾಗಿದೆ ಮತ್ತು ಕಳೆದ ವರ್ಷ ಜಿ20 ಗುಂಪಿನ ಅಧ್ಯಕ್ಷತೆ ವಹಿಸಿತ್ತು.