ಮಕ್ಕಳನ್ನು ಪಾಲಕರು ಪ್ರತಿನಿತ್ಯ ಶಾಲೆಗೆ ಕಳುಹಿಸಬೇಕು. ಮಕ್ಕಳ ಭವಿಷ್ಯ ರೂಪಿಸುವುದು ತಂದೆ ತಾಯಿಗಳ ಪ್ರಮುಖ ಕರ್ತವ್ಯವಾಗಿದೆ ಎಂದು ವರ್ಲ್ಡ್ ವಿಷನ್ ಇಂಡಿಯಾ ಅಸೋಸಿಯೇಟ್ ಡೈರೆಕ್ಟರ್ ಸಾಮ್ಸನ್ ಬಂಟು ಹೇಳಿದರು.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ವರ್ಲ್ಡ್ ವಿಷನ್ ಸಂಸ್ಥೆಯಿಂದ ಕನ್ಯಾಕೊಳ್ಳುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮಕ್ಕಳು ಶಾಲೆಯಲ್ಲಿ ಹಲವಾರು ವಿಷಯಗಳ ಜ್ಞಾನ ಪಡೆದುಕೊಳ್ಳುವರು. ಅದರ ಜೊತೆಯಲ್ಲಿ ಅವರು ಸುರಕ್ಷಿತರಾಗಿರಲು ಸಾಧ್ಯವಾಗುವುದು ಹಾಗೂ ಎಲ್ಲ ಮಕ್ಕಳು ಶಿಕ್ಷಕರನ್ನು ಗೌರವಿಸಬೇಕು” ಎಂದು ಹೇಳಿ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ತಿಳಿಸಿದರು.

ಅಂಗನವಾಡಿ ಕೇಂದ್ರ ಸಂಖ್ಯೆ 1 ಕನ್ಯಾಕೊಳ್ಳುರ ಹಾಗೂ ಶಾರದಹಳ್ಳಿ ಅಂಗನವಾಡಿ ಕೇಂದ್ರ 2ಗೆ ಕುರ್ಚಿ ಮತ್ತು ಟೇಬಲ್ ವಿತರಣೆ ಮಾಡಿದರು. ಹಾಲಬಾವಿ ಕಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಕೊಳ್ಳುರ (ಉರ್ದು ಮಾಧ್ಯಮ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಸ್ತಾಪುರ ಶಾಲೆಗಳಿಗೆ ಬೆಂಚ್ ಮತ್ತು ಡೆಸ್ಕ್ ನೀಡಿದರು. ಒಟ್ಟು 34 ಬೆಂಚುಗಳು, ಅಂಗನವಾಡಿ ಕೇಂದ್ರಕ್ಕೆ ಆರು ಟೇಬಲ್‌ಗಳು ಹಾಗೂ 48 ಚೇರುಗಳನ್ನು ವಿತರಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್ | ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸಲು ಭೀಮ್ ಆರ್ಮಿ ಒತ್ತಾಯ
ಕಾರ್ಯಕ್ರಮದಲ್ಲಿ ಗ್ರಾಮ ಅಭಿವೃದ್ಧಿ ಅಧಿಕಾರಿ ಮಡಿವಾಳಪ್ಪ, ವರ್ಲ್ಡ್ ವಿಷನ್ ಇಂಡಿಯಾ ಪ್ರೋಗ್ರಾಮ್ ಆಫೀಸರ್ ಅನಿಲ್ ತೇಜಪ್ಪ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರು ರಿಯಾಜ್ ಪಟೇಲ್, ಪಂಚಾಯತಿ ಅಧ್ಯಕ್ಷೆ ಯಲ್ಲಮ್ಮ, ಉಪಾಧ್ಯಕ್ಷ ಆಂಜನೇಯ, ಶಾಲೆಯ ಮುಖ್ಯಶಿಕ್ಷಕರು, ಗ್ರಾಮ ಪಂಚಾಯತಿ ಸದಸ್ಯರು, ಸೂಪರ್ವೈಸರ್ ಮಲ್ಕಮ್ಮ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮದ ಮುಖಂಡರು, ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪ್ರೋಗ್ರಾಮ್ ಕೋಆರ್ಡಿನೇಟರ್ ರೋಮಾ, ಸುಂದರ್ (ಸಿಎಸ್‌ಇ), ರಾಜ ಕಿರಣ್ (ಪಿಸಿ), ಸುಪ್ರೀಂ ಜಾಯ್ (ಎಫ್‌ಸಿ), ಸ್ವಯಂ ಸೇವಕರು, ಪೋಷಕರು ಇದ್ದರು.