ರಾಜಧಾನಿ ಬೆಂಗಳೂರಿನ ಹೆಬ್ಬಾಳದ ಖಾಸಗಿ ಆಸ್ಪತ್ರೆಯೊಂದರಲ್ಲಿ ವೃದ್ಧೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ಟರ್ ಸಿಎಂಐ ಆಸ್ಪತ್ರೆ ಸಿಬ್ಬಂದಿ ಅಶೋಕ್ ಬಂಧಿತ ಆರೋಪಿ. ಅನಾರೋಗ್ಯದ ಕಾರಣ ಅಸ್ಟರ್ ಸಿಎಂಐ ಆಸ್ಪತ್ರೆಗೆ ವೃದ್ಧೆಯೊಬ್ಬರು ಆಗಸ್ಟ್ 3ರಂದು ದಾಖಲಾಗಿದ್ದರು. ಆಗಸ್ಟ್ 4ರಂದು ಬೆಳಗ್ಗೆ 1:30ರ ಸುಮಾರಿಗೆ ಸಿಟಿ ಸ್ಕ್ಯಾನ್ ಮಾಡುವ ಸಲುವಾಗಿ ವೃದ್ಧೆಯನ್ನು ಆಸ್ಪತ್ರೆಯ ಸಿಬ್ಬಂದಿ ಅಶೋಕ್ ಎಂಬಾತ ಕರೆದುಕೊಂಡು ಹೋಗಿದ್ದಾನೆ.
ಸಿಟಿ ಸ್ಕ್ಯಾನ್ ಮಷಿನ್ ಮೇಲೆ ವೃದ್ಧೆಯನ್ನು ವಿವಸ್ತ್ರಗೊಳಿಸಿ ಆಸ್ಪತ್ರೆಯ ಸಿಬ್ಬಂದಿ ಅಶೋಕ್ ಮಲಗಿಸಿದ್ದನು. ಈ ವೇಳೆ, ವೃದ್ಧೆಯ ಖಾಸಗಿ ಅಂಗಾಂಗಗಳನ್ನು ಸ್ಪರ್ಶಿಸಿ, ಲೈಂಗಿಕ ದೌರ್ಜನ್ಯ ಮಾಡಿದ್ದಾನೆ. ದೈಹಿಕ ಸಂಪರ್ಕ ನಡೆಸುವಂತೆ ವೃದ್ಧೆಗೆ ಪೀಡಿಸಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೆಡಿಕಲ್ ಸ್ಟೋರ್ಗಳಲ್ಲಿ ಕಳ್ಳತನ ಎಸಗುತ್ತಿರುವ ‘ಮಂಕಿ ಕ್ಯಾಪ್ ಗ್ಯಾಂಗ್’
ಈ ಘಟನೆ ಬಗ್ಗೆ ಸಂತ್ರಸ್ತ ವೃದ್ಧೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವೃದ್ಧೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಶೋಕನನ್ನು ಬಂಧಿಸಿದ್ದಾರೆ.