ಈ ದಿನ ಸಂಪಾದಕೀಯ | ಸಂಪಾದಕರ ಬಾಯಿ ಬಡಿಯುವುದು ವಿಕಟ ವಿಡಂಬನೆ 

Date:

Advertisements
ಮೂರು ತಿಂಗಳಿಂದ ಜರುಗಿರುವ ಮಣಿಪುರದ ಜನಾಂಗೀಯ ಘರ್ಷಣೆ ಹಿಂಸೆಯನ್ನು ಸ್ಥಳೀಯ ಮಾಧ್ಯಮಗಳು ಹೇಗೆ ವರದಿ ಮಾಡಿವೆ ಎಂಬುದು ಸಂಪಾದಕರ ಕೂಟದ ಸತ್ಯಶೋಧಕ ವರದಿಯ ಮುಖ್ಯಾಂಶ. ಮಣಿಪುರದ ಪತ್ರಕರ್ತರ ಬಹುತೇಕ ವರದಿಗಳು ಒಮ್ಮುಖವಾಗಿವೆ ಎಂಬುದನ್ನು ವರದಿಯು ಸಾರಿ ಹೇಳಿದೆ 

ಪೊಲೀಸ್ ಕೇಸು, ಬಂಧನ, ಬೆದರಿಕೆಗಳ ಮೂಲಕ ಪತ್ರಕರ್ತರ ಬಾಯಿ ಬಡಿಯುವ ದಬ್ಬಾಳಿಕೆಯ ವಾತಾವರಣವನ್ನು ಮೋಶಾ ಆಡಳಿತ ದೇಶದಲ್ಲಿ ಸೃಷ್ಟಿಸಿದೆ. ಮಣಿಪುರದಲ್ಲಿ ಕುಕಿಗಳು ಮತ್ತು ಮೈತೇಯಿಗಳನ್ನು ಪರಸ್ಪರರ ವಿರುದ್ಧ ಎತ್ತಿ ಕಟ್ಟಿ ದ್ವೇಷದ ದಳ್ಳುರಿಯನ್ನು ಭುಗಿಲೆಬ್ಬಿಸಿ ತಿಂಗಳುಗಳೇ ಉರುಳಿವೆ. ಸಾವು ನೋವುಗಳು ದೊಡ್ಡ ಸಂಖ್ಯೆಯಲ್ಲಿ ಘಟಿಸಿವೆ. ಗ್ರಾಮಗಳನ್ನೇ ಹೊತ್ತಿ ಉರಿಸಲಾಗಿದೆ. ಬದುಕುಗಳು ಬೂದಿಯಾಗಿವೆ.  

ಭಾರತದ ಸಂಪಾದಕರ ಕೂಟ (Editor’s Guild of India) ಇತ್ತೀಚೆಗೆ ಮಣಿಪುರಕ್ಕೆ ಭೇಟಿ ನೀಡಿ, ನಾಲ್ಕು ದಿನಗಳ ಕಾಲ ಅಧ್ಯಯನ ನಡೆಸಿ ಸತ್ಯಶೋಧನಾ ವರದಿಯನ್ನು ಬಿಡುಗಡೆ ಮಾಡಿತ್ತು. ಕೋಮುವಾದಿಗಳು ಮತ್ತು ಸರ್ವಾಧಿಕಾರಿಗಳು ಸತ್ಯದ ಕನ್ನಡಿಯನ್ನು ಸಹಿಸುವುದಿಲ್ಲ. ಅದರಲ್ಲಿ ಕಾಣುವ ತಮ್ಮ ರಾವು ಹಿಡಿದ ವಿಕೃತ ಬಿಂಬಗಳನ್ನು ಕಣ್ಣಿಟ್ಟು ಕಾಣುವ ದಿಟ್ಟತನವೂ ಅವರಿಗೆ ಇರುವುದಿಲ್ಲ. ಬಿಜೆಪಿಯ ಮುಖ್ಯಮಂತ್ರಿಯಾಗಿರದೆ ಹೋಗಿದ್ದರೆ ಬೀರೇನ್ ಸಿಂಗ್ ಅವರು ಎಂದೋ ರಾಜೀನಾಮೆ ನೀಡಿ ಮನೆಗೆ ಹೋಗಬೇಕಾಗಿ ಬರುತ್ತಿತ್ತು. ಇಲ್ಲವೇ ಕಾನೂನು ಕ್ರಮಗಳನ್ನು ಎದುರಿಸಬೇಕಾಗಿತ್ತು. ಅವರ ಅಸೀಮ ಆಡಳಿತ ವೈಫಲ್ಯವು ಕೇಂದ್ರ ಗೃಹಮಂತ್ರಿ ಅಮಿತ್ ಶಾ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತ ವೈಫಲ್ಯವೂ ಹೌದು. ಹೀಗಾಗಿ ಬೀರೇನ್ ಸಿಂಗ್ ಕುರ್ಚಿ ಅಲ್ಲಾಡಿಲ್ಲ. ಮಣಿಪುರದ ಸ್ಥಿತಿಯು ಜಾಗತಿಕ ಟೀಕೆಯನ್ನು ಎದುರಿಸಿದೆ. ಇಂತಹ ಮುಖ್ಯಮಂತ್ರಿಯವರು ಸಂಪಾದಕರ ಕೂಟದ ಸತ್ಯಶೋಧಕ ವರದಿಯ ವಿರುದ್ಧ ಪೊಲೀಸ್ ಕ್ರಮದ ಬೆದರಿಕೆ ಹಾಕಿದ್ದಾರೆ. ಇದೊಂದು ವಿಕಟ ವಿಡಂಬನೆಯೇ ಸರಿ.

ಮೂರು ತಿಂಗಳಿಂದ ಜರುಗಿರುವ ಮಣಿಪುರದ ಜನಾಂಗೀಯ ಘರ್ಷಣೆ ಹಿಂಸೆಯನ್ನು ಸ್ಥಳೀಯ ಮಾಧ್ಯಮಗಳು ಹೇಗೆ ವರದಿ ಮಾಡಿವೆ ಎಂಬುದು ಸಂಪಾದಕರ ಕೂಟದ ಸತ್ಯಶೋಧಕ ವರದಿಯ ಮುಖ್ಯಾಂಶ. ಮಣಿಪುರದ ಪತ್ರಕರ್ತರ ಬಹುತೇಕ ವರದಿಗಳು ಒಮ್ಮುಖವಾಗಿವೆ ಎಂಬುದನ್ನು ವರದಿಯು ಸಾರಿ ಹೇಳಿದೆ. ರಾಜ್ಯ ಸರ್ಕಾರದ ಆಡಳಿತ ಕೂಡ ಪಕ್ಷಪಾತಿ ಎಂಬುದನ್ನೂ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ವರದಿಯನ್ನು ತಿರಸ್ಕರಿಸುವ ಅಥವಾ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಎಲ್ಲ ಹಕ್ಕನ್ನು ಬೀರೇನ್ ಸಿಂಗ್ ಹೊಂದಿದ್ದಾರೆ. ಆದರೆ ಪತ್ರಕರ್ತರನ್ನು ಬೆದರಿಸುವುದು, ಕೇಸು ಹಾಕುವುದು ಜನತಂತ್ರ ವಿರೋಧಿ ದುಷ್ಕೃತ್ಯ.

Advertisements

ಸತ್ಯಶೋಧಕ ವರದಿಯು ಘರ್ಷಣೆಗಳನ್ನು ಪ್ರಚೋದಿಸಿದೆ ಮತ್ತು ಮಾನಹಾನಿ ಉಂಟು ಮಾಡಿದೆ ಎಂದು ಆಪಾದಿಸಿ ಕೂಟದ ಅಧ್ಯಕ್ಷೆ ಮತ್ತು ಮೂವರು ಸದಸ್ಯರ ವಿರುದ್ಧ ಎರಡು ಎಫ್.ಐ.ಆರ್.ಗಳನ್ನು ದಾಖಲಿಸಲಾಗಿತ್ತು. ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆಯೂ ಇತ್ತು.

ಈ ಹಂತದಲ್ಲಿ ಸುಪ್ರೀಮ್ ಕೋರ್ಟ್ ನಡೆಸಿದ ಹಸ್ತಕ್ಷೇಪವು ಯಾವುದೇ ‘ಬಲಾತ್ಕಾರಿ ಕ್ರಮ’ಗಳಿಂದ ನಾಲ್ವರೂ ಪತ್ರಕರ್ತರಿಗೆ ರಕ್ಷಣೆ ಒದಗಿಸಿದೆ. ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಈ ಸಂಬಂಧದಲ್ಲಿ ಮಣಿಪುರ ಸರ್ಕಾರದಿಂದ ವಿವರಣೆಯನ್ನೂ ಕೇಳಿದೆ.

ತಪ್ಪನ್ನು ತಿದ್ದಿಕೊಳ್ಳುವ ಮತ್ತು ಆತ್ಮಶೋಧನೆಗೆ ತಯಾರಿಲ್ಲವೆಂಬ ದುರಹಂಕಾರಿ ಧೋರಣೆಯನ್ನು ಪ್ರಕಟಿಸಿದ್ದಾರೆ ಬೀರೇನ್ ಸಿಂಗ್. ಮಾಹಿತಿ ತಂತ್ರಜ್ಞಾನ ಕಾಯಿದೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯಿದೆ ಉಲ್ಲಂಘನೆಯ ಆರೋಪವನ್ನು ಈ ಪತ್ರಕರ್ತರ ಮೇಲೆ ಹೊರಿಸಿದ್ದಾರೆ. ಅವರ ಈ ಕ್ರಮವು ಪತ್ರಿಕಾಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸಿರುವ ಪ್ರಹಾರ. ಘರ್ಷಣೆಗಳಲ್ಲಿ ತೊಡಗಿರುವ ಎರಡೂ ಜನಾಂಗಗಳನ್ನು ರಮಿಸಿ ಮನ ಒಲಿಸಿ ಸಂಧಾನದ ಮೇಜಿಗೆ ಕರೆ ತಂದು ಶಾಂತಿ ಸ್ಥಾಪಿಸುವ ಕೆಲಸ ಮಾಡಬೇಕೇ ವಿನಾ ಪತ್ರಕರ್ತರ ವಿರುದ್ಧ ಕೇಸುಗಳನ್ನು ಹಾಕಿ ಕಾಲಹರಣ ಮಾಡುವುದು ಖಂಡನೀಯ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X