- ಸ್ವಾವಲಂಬನೆ ಜೀವನ ರೂಪಿಸಿಕೊಳ್ಳಲು ಕೌಶಲ್ಯ ಅಭಿವೃದ್ಧಿ ತರಬೇತಿ ತುಂಬಾ ಅಗತ್ಯ
- ನಿರುದ್ಯೋಗ ಯುವಕ-ಯುವತಿಯರು ಮತ್ತು ಮಹಿಳೆಯರು ತರಬೇತಿಯ ಲಾಭ ಪಡೆದುಕೊಳ್ಳಿ
ಗ್ರಾಮೀಣ ಭಾಗದ ಜನರು ಕೌಶಲ್ಯ ಅಭಿವೃದ್ಧಿ ತರಬೇತಿಯ ಮೂಲಕ ತಮ್ಮ ಜೀವನವನ್ನು ಸುಧಾರಿಸಿಕೊಳ್ಳುವಲ್ಲಿ ತುಂಬಾ ಪರಿಣಾಮಕಾರಿಯಾಗಿದ್ದು, ಡಾ. ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಹಾಗೂ ಡಾ. ಬಾಬು ಜಗಜೀವನರಾಮ್ ಚರ್ಮ ಕುಶಲಕರ್ಮಿಗಳ ಸಂಘದ ಸಹಯೋಗದಲ್ಲಿ ಸೆ.12ರಂದು ಗದಗ ಜಿಲ್ಲೆಯ ರೋಣ ತಾಲೂಕಿನ ಸೂಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಆಯೋಜಕ ರಮೇಶ ಗುಡಿಮನಿ ತಿಳಿಸಿದರು.
“ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳು ಮತ್ತು ನಿರುದ್ಯೋಗ ಯುವಕ- ಯುವತಿಯರು ಹಾಗೂ ಮಹಿಳೆಯರು ತಮ್ಮ ಜೀವನವನ್ನು ಆರ್ಥಿಕವಾಗಿ ಮತ್ತು ಸ್ವಾವಲಂಬಿಗಳಾಗಿ ಜೀವನ ರೂಪಿಸಿಕೊಳ್ಳಲು ಈ ಕೌಶಲ್ಯ ಅಭಿವೃದ್ಧಿ ತರಬೇತಿಯು ತುಂಬಾ ಪ್ರಮುಖವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗ್ರಾಮ ಭಾರತಕ್ಕೆ ಬೇಕಿರುವುದು ಯೋಗ, ಧ್ಯಾನ ಕೇಂದ್ರಗಳಲ್ಲ ಬಡವರಿಗೆ ನೆರವಾಗುವ ಆರೋಗ್ಯ ಕೇಂದ್ರಗಳು
ನಿರುದ್ಯೋಗ ಯುವಕ-ಯುವತಿಯರು ಮತ್ತು ಮಹಿಳೆಯರು ತಮ್ಮ ಕೌಶಲ್ಯಗಳ ಮೂಲಕ ಅದರಲ್ಲಿಯೂ ಹೊಲಿಗೆ ತರಬೇತಿ, ಬ್ಯೂಟಿ ಪಾರ್ಲರ್, ಕಸೂತಿ ತರಬೇತಿ ಸೇರಿದಂತೆ ಮುಂತಾದ ತರಬೇತಿ ಪಡೆದು ಬದುಕು ಕಟ್ಟಿಕೊಳ್ಳುವುದು ತುಂಬಾ ಅತ್ಯವಶ್ಯಕವಾಗಿದೆ. ಈ ತರಬೇತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಲಾಭ ಪಡೆದುಕೊಳ್ಳುವಂತೆ” ತರಬೇತಿ ಆಯೋಜಕ ರಮೇಶ ಗುಡಿಮನಿ ಮನವಿ ಮಾಡಿದರು.