ಸೆ.11 ರಂದು ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು, ನಗರದ ನಾಲ್ಕು ಭಾಗಗಳಲ್ಲಿಯೂ ಪ್ರತಿಭಟನೆ ನಡೆಸುತ್ತಿವೆ. ಎಲ್ಲೆಡೆ ಖಾಸಗಿ ವಾಹನಗಳ ಸಂಚಾರ ಬಂದ ಆಗಿದೆ. ಈ ವೇಳೆ, ರಸ್ತೆಗಿಳಿಯುವ ಆಟೋ, ಟ್ಯಾಕ್ಸಿ ಚಾಲಕರ ಮೇಲೆ ಪ್ರತಿಭಟನಾನಿರತರು ಹಲ್ಲೆ ನಡೆಸುತ್ತಿದ್ದಾರೆ. ಇದರ ಜತೆಗೆ ರ‍್ಯಾಪಿಡೋ ಬೈಕ್ ಚಾಲಕರ ಮೇಲೆ ಹಲ್ಲೆ ಮಾಡುತ್ತಿರುವ ಘಟನೆ ನಡೆಯುತ್ತಿದೆ.
ಬೊಮ್ಮನಹಳ್ಳಿ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾನಿರತರು ರ‍್ಯಾಪಿಡೋ ಬೈಕ್ ಬುಕ್ ಮಾಡಿ, ರ‍್ಯಾಪಿಡೋ ಬೈಕ್ ಚಾಲಕರನ್ನು ಸ್ಥಳಕ್ಕೆ ಕರೆಯಿಸಿಕೊಳ್ಳುತ್ತಿದ್ದಾರೆ. ಅವರು ಸ್ಥಳಕ್ಕೆ ಬಂದ ಬಳಿಕ ಹೆಲ್ಮೆಟ್ ತೆಗೆದು ಹಲ್ಲೆ ಮಾಡುತ್ತಿದ್ದಾರೆ.
ಕಾರು ಚಾಲಕನ ಮೇಲೆ ಹಲ್ಲೆ
ಬಾಡಿಗೆ ಹೋಗುತ್ತಿದ್ದ ಕಾರು ಚಾಲಕನನ್ನು ಹಿಡಿದು ತಡೆಯಲಾಗಿದೆ. ಬಳಿಕ ಕಾರ್ ಕೀ ಕಿತ್ತುಕೊಂಡು ಆತನ ಮೇಲೆ ಪ್ರತಿಭಟನಾನಿರತರು ಹಲ್ಲೆ ಮಾಡಿ ಥಳಿಸಿದ ಘಟನೆ ಗಾಂಧಿ ನಗರದ ಮೌರ್ಯ ಸರ್ಕಲ್ ಬಳಿ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಬಂದ್ | ರಸ್ತೆಗಿಳಿದ ವಾಹನದ ಮೇಲೆ ಕಲ್ಲು ತೂರಾಟ, ಚಾಲಕರಿಗೆ ಸನ್ಮಾನ
ಸ್ಥಳಕ್ಕೆ ಬಂದ ಪೊಲೀಸರಿಂದ ಕಾರು ಚಾಲಕನ ರಕ್ಷಣೆ ಮಾಡಲಾಗಿದೆ.
ಸಂಗೊಳ್ಳಿ ರಾಯಣ್ಣ ಫ್ಲೈಓವರ್ ಮೇಲೆ ಮತ್ತೋರ್ವ ರ‍್ಯಾಪಿಡೋ ಚಾಲಕನ ಮೇಲೆ ಹಲ್ಲೆ ಮಾಡಲಾಗಿದೆ. ಸಿಕ್ಕ ಸಿಕ್ಕಲ್ಲಿ ರ‍್ಯಾಪಿಡೋ ಚಾಲಕರ ಮೇಲೆ ಪ್ರತಿಭಟನಾನಿರತರು ಹಲ್ಲೆ ಮಾಡುತ್ತಿದ್ದಾರೆ.
ಖಾಸಗಿ ಚಾಲಕರು ತಮ್ಮ ಬೇಡಿಕೆಗಳಿಗ ಈಡೇರಿಕೆಗೆ ಮಾಡುತ್ತಿರುವ ಈ ಪ್ರತಿಭಟನೆ ಹಲ್ಲೆ ಮತ್ತು ಹಿಂಸಾಚಾರಕ್ಕೆ ತಿರುಗುತ್ತಿದೆ. ರ‍್ಯಾಪಿಡೋ ಚಾಲಕರನ್ನು ತಾವೇ ಬುಕ್ ಮಾಡಿ ಕರೆಸಿ ಥಳಿಸುವಂತಹ ಘಟನೆಗಳು ನಗರದಲ್ಲಿ ವರದಿಯಾಗುತ್ತಿವೆ.