ಬೀದರ್‌ | ಹಿಂದಿ ಸಪ್ತಾಹ ಆಚರಣೆ ಕೈಬಿಡಲು ಕರವೇ ಒತ್ತಾಯ

Date:

Advertisements
  • ಕೇಂದ್ರ ಸರಕಾರ ಹಿಂದಿ ಹೇರಿಕೆ ನೆಪದಲ್ಲಿ ಹಿಂದಿ ಸಪ್ತಾಹ ಆಚರಿಸುತ್ತಿರುವುದು.
  • ಹಿಂದಿ ಸಪ್ತಾಹ ಆಚರಣೆ ಕೈಬಿಟ್ಟು ಅಖಂಡ ಭಾರತದ ಸಿದ್ಧಾಂತ ಕಾಪಾಡಬೇಕು.

ರಾಜ್ಯ ಸೇರಿದಂತೆ ಹಿಂದಿಯೇತರ ರಾಜ್ಯಗಳಲ್ಲಿ ಕೇಂದ್ರ ಸರಕಾರ ಸೆ. 14ರಂದು ಹಿಂದಿ ಸಪ್ತಾಹ ಕಾರ್ಯಕ್ರಮ ಆಚರಿಸಲು ಸೂಚಿಸಿರುವುದು ಸರಿಯಲ್ಲ. ಸ್ಥಳೀಯ ಭಾಷಾ ವೈವಿಧ್ಯತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಹೀಗಾಗಿ ಹಿಂದಿ ಸಪ್ತಾಹ ಆಚರಣೆ ಕೈಬಿಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.

ಈ ಕುರಿತು ಭಾಲ್ಕಿ ತಾಲೂಕು ಕರವೇ ಅಧ್ಯಕ್ಷ ಗಣೇಶ ಪಾಟೀಲ್ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಪ್ರಧಾನಿ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಾಲೂಕಾಡಳಿತಕ್ಕೆ ಸಲ್ಲಿಸಿದರು.

“ಕೇಂದ್ರ ಸರಕಾರ ಹಿಂದಿ ಹೇರಿಕೆ ನೆಪದಲ್ಲಿ ಹಿಂದಿ ಸಪ್ತಾಹ ಆಚರಿಸುತ್ತಿರುವುದು, ಭಾರತ ಒಕ್ಕೂಟ ರಾಷ್ಟ್ರ, ಅಖಂಡ ಭಾರತದ ಬುಡದಲ್ಲಿಯೇ ಕೊಡಲಿ ಪೆಟ್ಟು ಹಾಕುತ್ತಿದೆ. ಆದರೆ ಅಂದಿನ ರಾಷ್ಟ್ರ ಪ್ರೇಮಿ, ಸ್ವಾತಂತ್ರ ಹೋರಾಟಗಾರರು
ಸಂವಿಧಾನದಲ್ಲಿಯೇ ಲಿಖಿತ ರೂಪದಲ್ಲಿ ಎಲ್ಲ ಭಾಷೆಗಳನ್ನು ಸಮಾನವಾದ ಸ್ಥಾನ ಮಾನ ನೀಡುವ ವಾಗ್ದಾನವಿದೆ. ಆದರೆ ಇಂದಿನ ದಿನಮಾನ ಕಾಲದಲ್ಲಿ ಹಿಂದಿ ಮಾತ್ರ ರಾಷ್ಟ್ರ ಭಾಷೆ ಎಂದು ಹೇರಿಕೆ ಮಾಡಿ, ಎಲ್ಲ ರಾಜ್ಯಗಳಿಂದ ರಜಸ್ವಿ ಪಡೆದು ಹಿಂದಿ ಅಭಿವೃದ್ಧಿಗೆ ಕೈ ಹಾಕುವುದು ನಾವು ಒಪ್ಪುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisements

“ಕನ್ನಡ ಸಾವಿರಾರು ವರ್ಷಗಳ ಇತಿಹಾಸವಿದೆ. ರಾಜ್ಯದಲ್ಲಿ ಕನ್ನಡವೇ ಸರ್ವಸ್ವ ನಮಗೆ ಕನ್ನಡವೇ ರಾಷ್ಟ್ರ ಭಾಷೆ, ಇತರೆ ಯಾವುದೇ ಇಲ್ಲ. ಕನ್ನಡವೇ ಆಡಳಿತ ಭಾಷೆ, ರೂಢಿ ಭಾಷೆ ನಡೆ – ನುಡಿ ಎಲ್ಲವೂ ಕನ್ನಡ ಅದನ್ನು ತಪ್ಪಿಸಲು ಯಾರಿಂದಲು ಸಾಧ್ಯವಿಲ್ಲ. ಕೂಡಲೇ ಕೇಂದ್ರ ಸರಕಾರ ಆಚರಿಸುವ ಹಿಂದಿ ಸಪ್ತಾಹ ಆಚರಣೆ ಕೂಡಲೇ ಕೈಬಿಟ್ಟು ಅಖಂಡ ಭಾರತದ ಸಿದ್ಧಾಂತ ಕಾಪಾಡಬೇಕೆಂದು” ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೈತರ ಆತ್ಮಹತ್ಯೆ ತೀವ್ರ ಹೆಚ್ಚಳ; ಅನ್ನದಾತರ ಬದುಕಿಗೆ ಬೇಕಿದೆ ಭರವಸೆ

ಈ ಸಂದರ್ಭದಲ್ಲಿ ಕರವೇ ಪ್ರಮುಖರಾದ ಮಾಳಸ್ಕಾಂತ ವಾಘೆ, ಬಸವರಾಜ ಕಾರಬಾರಿ, ಭದ್ರೇಶ ಸ್ವಾಮಿ, ಲೋಕೇಶ ಪಾಟೀಲ್, ಚೇತನ ಬಿರಾದಾರ್, ಸಂಗಮೇಶ ಮಾತ್ರಾAಢ, ಸಾಹಿಲ್ ಮಾಸುಲ್ದಾರ, ಅಭೀಷೇಕ ಸ್ವಾಮಿ, ರಾಹುಲ ಶೀರೂರೆ, ದಯಾನಂದ ಮೇತ್ರೆ, ನರೇಶ ಗಾಯಕವಾಡ, ಕಿರಣ ಜೋಳದಾಪಗೆ, ಅಭೀಷೇಕ ಬಿರಾದಾರ್, ರಾಹುಲ ಜಾಧವ, ರೋಹಿತಸಿಂಗ ಹಜಾರಿ ಸೇರಿದಂತೆ ಹಲವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

Download Eedina App Android / iOS

X