- ಕೆಂಗೇರಿ ಉಪನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅಭಿಮತ
- ಖಾಸಗಿ ಬಸ್ಗಳಿಂದ ಹೆಚ್ಚಿನ ದರ ವಸೂಲಿ, ಕಾನೂನು ಕ್ರಮದ ಎಚ್ಚರಿಕೆ
ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 13,000 ಸಿಬ್ಬಂದಿ ನೇಮಕವನ್ನು ಶೀಘ್ರ ಮಾಡುತ್ತೇವೆ ಎಂದು ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ನೇತೃತ್ವದಲ್ಲಿ ಯಶವಂತಪುರ ಕ್ಷೇತ್ರದ ಕೆಂಗೇರಿ ಉಪನಗರದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಉದ್ಯೋಗ ತುಂಬಿಕೊಳ್ಳುವ ಭರವಸೆ ನೀಡಿದರು.
ಖಾಸಗಿ ಬಸ್ಗಳಿಂದ ಹೆಚ್ಚಿನ ದರ ವಸೂಲಿ ವಿಚಾರವಾಗಿ ಮಾತನಾಡಿ, “ಗೌರಿ ಗಣೇಶ ಹಬ್ಬಕ್ಕೆ ಹೆಚ್ಚಿನ ದರ ತೆಗೆದುಕೊಳ್ಳುತ್ತಿದ್ದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದೇವೆ. ಗೌರಿ ಗಣೇಶ ಹಬ್ಬಕ್ಕೆ ಹೆಚ್ಚುವರಿ ಬಸ್ಗಳನ್ನು ಬಿಡಲು ನಿರ್ಧರಿಸಿದ್ದೇವೆ” ಎಂದರು.
“ಶಾಸಕ ಎಸ್ ಟಿ ಸೋಮಶೇಖರ್ ಜತೆ ರಾಜಕೀಯ ಚರ್ಚೆ ಮಾಡಿಲ್ಲ. ಸೋಮಶೇಖರ್ ಮರುಸೇರ್ಪಡೆ ಆಗುತ್ತೇನೆ ಅಂದರೆ ಯೋಚಿಸೋಣ” ಎಂದು ಇದೇ ವೇಳೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ಚೈತ್ರಾ ಕುಂದಾಪುರ ಪ್ರಕರಣ | ಸ್ವಾಮೀಜಿ ಅಲ್ಲ, ಯಾರೇ ಇದ್ದರೂ ಬಂಧನ ಆಗಲಿ: ಬೊಮ್ಮಾಯಿ
ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಎಸ್ ಟಿ ಸೋಮಶೇಖರ್ ಪ್ರತಿಕ್ರಿಯಿಸಿ, “ಭಾರತೀಯ ಜನತಾ ಪಕ್ಷದಲ್ಲೇ ಇನ್ನೂ ಇದ್ದೇನೆ. ನಾನು ಸೈಲೆಂಟ್ ಆಗಿಲ್ಲ. ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಹೋಗುವ ಯೋಚನೆ ಇಲ್ಲ. ರಾಮಲಿಂಗಾರೆಡ್ಡಿ ಜತೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ” ಎಂದು ತಿಳಿಸಿದರು.
“ಬಸ್ ನಿಲ್ದಾಣಗಳ ಸಮಸ್ಯೆ ಬಗ್ಗೆ ಹೇಳಲು ಸಚಿವರನ್ನು ಕರೆಸಿದ್ದೆವು. ಸಾರಿಗೆ ಸಚಿವರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಜನವರಿಗೆ ಕೆಂಗೇರಿ ಟಿಟಿಎಂಸಿ ಉದ್ಘಾಟನೆ ಮಾಡೋಣ ಎಂದಿದ್ದಾರೆ” ಎಂದರು.