ಜನರ ಜೀವದ ಜೊತೆ ಜಲಸಂಪನ್ಮೂಲ ಸಚಿವರು ಚೆಲ್ಲಾಟವಾಡುತ್ತಿದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

Date:

Advertisements
  • ‘ನಮ್ಮ ಅಧಿಕಾರಿಗಳು ಕಾಟಾಚಾರಕ್ಕೆ ಸಭೆಯಲ್ಲಿ ಭಾಗಿಯಾಗುತ್ತಾರೆ’
  • ‘ದೇವೇಗೌಡರಿಗೆ ನಿಲ್ಲಲು ಆಗದೇ ಇದ್ದರೂ ಈ ಬಗ್ಗೆ ಮಾತನಾಡಿದ್ದಾರೆ’

ತಮಿಳುನಾಡಿಗೆ ಕಾವೇರಿ ನೀರು ಹರಿಸದೇ ಇದ್ದರೆ ಆದೇಶ ಉಲ್ಲಂಘನೆ ಆಗುತ್ತದೆ ಎಂದು ಜಲಸಂಪನ್ಮೂಲ ಸಚಿವರು ಹೇಳಿದ್ದಾರೆ. ಆ ಮೂಲಕ ಜನರ ಜೀವದ ಜೊತೆ ಸಚಿವರು ಚೆಲ್ಲಾಟವಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಹೇಳಿದರು.

ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಿಡಬ್ಲ್ಯೂಎಂಎ ಆದೇಶ ವಿಚಾರ ಸಂಬಂಧ ರಾಮನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಮಳೆಯ ಕೊರತೆಯಿಂದ ನಮ್ಮ ರೈತರ ಬೆಳೆ ನಾಶವಾಗುತ್ತಿದೆ. ಕಾವೇರಿ ನೀರಿನ ಸಂಬಂಧ ನಡೆಯುವ ಸಭೆಗಳಲ್ಲಿ ತಮಿಳುನಾಡಿನ 10-15 ಅಧಿಕಾರಿಗಳು ಭಾಗಿಯಾದರೆ, ನಮ್ಮ ಅಧಿಕಾರಿಗಳು ಒಬ್ಬರೋ ಇಬ್ಬರೂ ಕಾಟಾಚಾರಕ್ಕೆ ಭಾಗಿಯಾಗುತ್ತಾರೆ” ಎಂದು ಕಿಡಿಕಾರಿದರು.

“ರಾಜ್ಯ ಸರ್ಕಾರದ ನಡೆ ಖಂಡಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಜನರ ಬದುಕು ಸರಿಪಡಿಸಬೇಕು ಅಂದರೆ ಕಠಿಣ ನಿರ್ಧಾರ ಮಾಡಬೇಕು. ಬ್ರಿಟಿಷರ ಕಾಲದಿಂದಲೂ ತಮಿಳುನಾಡಿನವರು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ” ಎಂದರು.

Advertisements

“ನೀರಿನ ಹಂಚಿಕೆ ಕೊರತೆ ಬಗ್ಗೆ ದೇವೇಗೌಡರು ‌ನಿಲ್ಲೋಕಾಗದೇ ಇರುವ ಪರಿಸ್ಥಿತಿಯಲ್ಲೂ ರಾಜ್ಯದ ಬಗ್ಗೆ ಮಾತನಾಡಿದ್ದರು. ಆದರೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಎಲ್ಲಿ ಹೋಗಿದ್ದಾರೆ? ದೇವೇಗೌಡರು ಮಾತನಾಡಬೇಕಾದರೆ, ತಮಿಳುನಾಡು ಸದಸ್ಯರು ಪ್ರತಿಭಟಿಸಿದರು. ಅದನ್ನು ಕಂಡು ದೇವೇಗೌಡರು ಎದ್ದು ನಿಂತು ಮಾತಾನಾಡಿದ್ದು ಅವರ ಕಮಿಟ್ ಮೆಂಟ್ ತೋರಿಸುತ್ತದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಕಾವೇರಿ ವಿಷಯದಲ್ಲಿ ಸರ್ಕಾರ ತಪ್ಪು ಮಾಡುವ ಮೂಲಕ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದೆ: ಬೊಮ್ಮಾಯಿ

“ದೇವೇಗೌಡರು ಕಾವೇರಿ ವಿಚಾರಕ್ಕಲ್ಲ, ಮೈತ್ರಿ ಬಗ್ಗೆ ಡೆಲ್ಲಿಗೆ ಹೋಗಿದ್ದಾರೆ ಅಂತ ಹೇಳಿದ್ದಾರೆ. ನಿನ್ನೆ, ಮೊನ್ನೆ ಬಂದವರು ದೇವೇಗೌಡರ ಬಗ್ಗೆ ಮಾತನಾಡುತ್ತಾರೆ. ದೇವೇಗೌಡರೇ ಏಕಾಂಗಿ ಹೋರಾಟ ಮಾಡಬೇಕು. ಎಮರ್ಜೆನ್ಸಿ ಅರ್ಜಿ ಹಾಕಿ ಮಧ್ಯರಾತ್ರಿ ಕೋರ್ಟ್ ನಡೆದಿಲ್ವಾ? ಅದೇ ತರಹವೇ ಇದು ಎಮರ್ಜನ್ಸಿ ಅಂತ ಒಂದು ಅರ್ಜಿ ಹಾಕಿಸೋಕೆ ಆಗಿಲ್ಲ” ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

“ಪ್ರಾಧಿಕಾರಕ್ಕೆ ಏನಾದ್ರೂ ಪ್ರಶ್ನೆ ಕೇಳದ ಅಧಿಕಾರ ಕೊಟ್ಟಿದ್ದೀವಾ? ವಾಟರ್ ಮ್ಯಾನೇಜ್ ಮೆಂಟ್ ಹೇಳಿದರು ಅಂದ ತಕ್ಷಣ ನೀರು ಬಿಡೋದು. ಸರ್ಕಾರ ಬಂದಾಗಿನಿಂದ ನೋಡುತ್ತಿರುವೆ. ಇವರು ತಮಿಳುನಾಡಿಗೆ ನೀರು ಬಿಡುತ್ತಲೇ ಇದ್ದಾರೆ. ದೇವೇಗೌಡರೇ ಏಕಾಂಗಿ ಹೋರಾಟ ಮಾಡಬೇಕು. ಅದೇನೋ ಪಾದಯಾತ್ರೆ ಮಾಡಿದವರು ಇದ್ದಾರಲ್ಲ. ಅವರು ಯಾಕೆ ಮಾತಾಡೋಕೆ ಆಗಿಲ್ಲ” ಎಂದು ಡಿಕೆ ಶಿವಕುಮಾರ್‌ ವಿರುದ್ಧ ಕಿಡಿಕಾರಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಹಳ್ಳ ದಾಟಲು ಹೋದ ಯುವಕ ನೀರು ಪಾಲು

ಭಾರೀ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಓರ್ವ ವ್ಯಕ್ತಿ ದಾಟುತ್ತಿದ್ದ ವೇಳೆ...

ಚಿಕ್ಕಮಗಳೂರು l ವಾಹನ ಚಲಾಯಿಸುವಾಗ ನಿಯಮ ಉಲ್ಲಂಘನೆ: ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಿದ ಅಧಿಕಾರಿಗಳು

ವಾಹನ ಚಲಾಯಿಸುವಾಗ ಹೆಲ್ಮಟ್, ಸೀಟ್ ಬೆಲ್ಟ್ ಧರಿಸದವರಿಗೆ ಗುಲಾಬಿ ಹೂ ಕೊಡುವ...

ಹಾವೇರಿ | ಒಳಮೀಸಲಾತಿಗೆ ಶ್ರಮಿಸಿದವರಿಗೆ ಧನ್ಯವಾದ ಸಲ್ಲಿಸಿದ ಉಡಚಪ್ಪ ಮಾಳಗಿ

"ರಾಜ್ಯದಲ್ಲಿ ವಿವಿಧ ದಲಿತ ಸಂಘಟನೆಯ ಮುಖಂಡರು ಹಾಗೂ ದಲಿತ ಸಮುದಾಯದವರ ನಿರಂತರ...

ಅರಸೀಕೆರೆ l ನಗರಸಭಾ ಅಧ್ಯಕ್ಷ, ಉಪಾಧ್ಯಕ್ಷರ ಉತ್ತಮ ಅಭಿವೃದ್ಧಿ ಕೆಲಸ; ನಗರಸಭಾ ಸದಸ್ಯರಿಂದ ಸನ್ಮಾನ

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ನಗರಸಭಾ ಕಾರ್ಯಾಲಯದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು...

Download Eedina App Android / iOS

X