ತೆಲಂಗಾಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವಹೇಳನ ಮಾಡಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ ರಾಹುಲ್ ಗಾಂಧಿ, “ತೆಲಂಗಾಣದ ಹುತಾತ್ಮರು ಮತ್ತು ಅವರ ತ್ಯಾಗದ ಬಗ್ಗೆ ಪ್ರಧಾನಿ ಮೋದಿಯವರ ಅಗೌರವದ ಭಾಷಣವು ತೆಲಂಗಾಣದ ಅಸ್ತಿತ್ವ ಮತ್ತು ಸ್ವಾಭಿಮಾನಕ್ಕೆ ಅವಮಾನವಾಗಿದೆ” ಎಂದು ಹೇಳಿದ್ದಾರೆ.
ಸೋಮವಾರ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ, ಆಂಧ್ರಪ್ರದೇಶದಿಂದ ತೆಲಂಗಾಣವನ್ನು ಅವೈಜ್ಞಾನಿಕವಾಗಿ ವಿಭಜನೆ ಮಾಡಿದ್ದರಿಂದ ಎರಡೂ ರಾಜ್ಯಗಳಲ್ಲಿ ನೋವು ಮತ್ತು ರಕ್ತಪಾತಕ್ಕೆ ಕಾರಣವಾಯಿತು ಎಂದು ಹೇಳಿದ್ದರು.
ಪ್ರಧಾನ ಮಂತ್ರಿಯವರ ಹೇಳಿಕೆಯನ್ನು ತೆಲಂಗಾಣ ಸಚಿವ ಮತ್ತು ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ ಅವರು ‘ಅವಹೇಳನಕಾರಿ’ ಎಂದು ಹೇಳಿದ್ದು, ಈ ಮಾತುಗಳು ಐತಿಹಾಸಿಕ ಸಂಗತಿಗಳ ಬಗ್ಗೆ ಪ್ರಧಾನಿಯವರ ಸಂಪೂರ್ಣ ‘ಅಲಕ್ಷ್ಯ’ವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದ್ದರು.
ಈ ಸುದ್ದಿಯನ್ನು ಓದಿದ್ದೀರಾ? ಮಹಿಳಾ ಮೀಸಲಾತಿ ಮಸೂದೆಗೆ ಸೋನಿಯಾ, ರಾಹುಲ್ ಬೆಂಬಲ
“ತೆಲಂಗಾಣ ರಚನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯಿಂದ ನಾನು ತೀವ್ರ ಅಸಮಾಧಾನಗೊಂಡಿದ್ದೇನೆ. ತೆಲಂಗಾಣ ರಚನೆಯ ಬಗ್ಗೆ ಪ್ರಧಾನಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದು ಇದೇ ಮೊದಲಲ್ಲ. ಇದು ಐತಿಹಾಸಿಕ ಸಂಗತಿಗಳ ಬಗ್ಗೆ ಅವರ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿಸುತ್ತದೆ. ತೆಲಂಗಾಣದ ಜನರು ರಾಜ್ಯತ್ವವನ್ನು ಪಡೆಯಲು ಆರು ದಶಕಗಳ ಕಾಲ ಅವಿರತವಾಗಿ ಹೋರಾಡಲಾಗಿದೆ. ಅಂತಿಮವಾಗಿ ಜೂನ್ 2, 2014 ರಂದು ಮಹತ್ವದ ಸಾಧನೆಯನ್ನು ಸಾಧಿಸಲಾಯಿತು. ರಾಜ್ಯತ್ವದ ಪ್ರಯಾಣವು ವಿಶೇಷವಾಗಿ ತೆಲಂಗಾಣದ ಯುವಕರಿಂದ ಲೆಕ್ಕವಿಲ್ಲದಷ್ಟು ತ್ಯಾಗಗಳಿಂದ ಗುರುತಿಸಲ್ಪಟ್ಟಿದೆ” ಎಂದು ಹೇಳಿದ್ದಾರೆ.
ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, “ಅಟಲ್ ಬಿಹಾರಿ ವಾಜಪೇಯಿ ಆಡಳಿತಾವಧಿಯಲ್ಲಿ ಅತ್ಯಂತ ಯೋಜಿತ ರೀತಿಯಲ್ಲಿ ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಿಂದ ವಿಭಜಸಲಾದ ಜಾರ್ಖಂಡ್, ಉತ್ತರಾಖಂಡ ಮತ್ತು ಛತ್ತೀಸ್ಗಢವನ್ನು ಉಲ್ಲೇಖಿಸಿದ ಮೋದಿ, ಆಂಧ್ರಪ್ರದೇಶದ ವಿಭಜನೆಯನ್ನು ಅವೈಜ್ಞಾನಿಕ ರೀತಿಯಲ್ಲಿ ಮಾಡಲಾಗಿದೆ ಎಂದು ಹೇಳಿದ್ದರು.
ಆ ಮೂರು ರಾಜ್ಯಗಳು ರಚನೆಯಾದಾಗ ಎರಡೂ ಕಡೆ ಸಂಭ್ರಮಾಚರಣೆಗಳು ನಡೆದಾಗ, ಅಖಂಡ ಆಂಧ್ರಪ್ರದೇಶದ ವಿಭಜನೆಯು ಎರಡೂ ರಾಜ್ಯಗಳಲ್ಲಿ ಕಹಿ ಮತ್ತು ರಕ್ತಪಾತಕ್ಕೆ ಕಾರಣವಾಯಿತು ಎಂದು ಮೋದಿ ಹೇಳಿದ್ದರು.