ಒಂದು ದೇಶ ಒಂದು ಚುನಾವಣೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದ್ದು, ಇದನ್ನು ಕೈ ಬಿಡಬೇಕೆಂದು ಆಗ್ರಹಿಸಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ಸಂಘದ ಕಾರ್ಯಕರ್ತರು ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
“ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ʼಒಂದು ದೇಶ ಒಂದು ಚುನಾವಣೆʼ ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ಅಲ್ಲದೆ, ಭಾರತದ ಬಹು ಸಂಖ್ಯಾತ ಆದಿವಾಸಿ, ದಲಿತರು, ಮಹಿಳಾ ಸಮುದಾಯದ ಪಾಲಿಗೆ ಹಾಗೂ ಇತರ ಸಮಾನ ನಾಗರಿಕ ಸಂಹಿತೆ ದೇಶದ ವೈವಿಧ್ಯತೆಗೆ ವಿರೋಧವಾಗಿದೆ” ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
“ಬಿಜೆಪಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಚುನಾವಣೆಯಲ್ಲಿ ಸೋಲುವ ಭೀತಿ ಶುರುವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಕುತಂತ್ರ ಪ್ರಾರಂಭಿಸಿದೆ” ಎಂದು ಆರೋಪಿಸಿದರು.
“ವರ್ಷದ ಕೊನೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ದೇಶದಲ್ಲಿ ಪ್ರತಿ ಚುನಾವಣೆಗೂ ತನ್ನದೇ ಆದ ಪ್ರತ್ಯೇಕತೆ ಹೊಂದಿದೆ. ಏಕಕಾಲದಲ್ಲಿ ಚುನಾವಣೆ ನಿರ್ವಹಣೆ ಅನೇಕ ಸಮಸ್ಯೆಗಳಿಗೆ ಆಹ್ವಾನ ಮಾತ್ರವಾಗಿರದೆ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಘಾತಕಾರಿಯಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ನೀರು ಪಾಲಾದ ಬಾಲಕರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ
“ಏಕರೂಪ ನಾಗರಿಕ ಸಂಹಿತೆಯ ಜಾರಿಯಾದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ. ಇದು ಸಮಾನತೆಯ ಬದಲು ಅಸಮಾನತೆ ಸೃಷ್ಟಿಸುವ ಶಾಸನವಾಗಿದೆ” ಎಂದು ಪ್ರತಿಭಟಿಸಿದರು.
ಅಜೀಜ್ ಜಾಗಿರದಾರ, ಅಮರೇಶ್, ಮಲ್ಲಯ್ಯ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.