ಮುಂದಿನ ಲೋಕಸಭಾ ಚುನಾವಣೆ ನಂತರ ಜನಗಣತಿ ಮತ್ತು ಮರುವಿಂಗಣೆ ಕಾರ್ಯ ನಡೆಯಲಿದೆ. 2029ರ ಚುನಾವಣೆ ವೇಳೆಗೆ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ನಡೆಯಲಿದೆ. ಆದರೆ, ಕೊರೊನಾ ಕಾರಣದಿಂದಾಗಿ 2021ರಲ್ಲಿ ಜನಗಣತಿ ನಡೆದಿರಲಿಲ್ಲ. ಈ ಬಾರಿಯ ಚುನಾವಣೆ ನಂತರ ಜನಗಣತಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
“ಮಹಿಳಾ ಮೀಸಲಾತಿ ಮಸೂದೆಯಲ್ಲಿ ಲೋಪಗಳು ಕಂಡುಬಂದಲ್ಲಿ, ಅದನ್ನು ಸರಿಪಡಿಸಲಾಗುತ್ತದೆ. ಒಬಿಸಿ ಕೋಟಾ ಬಗ್ಗೆ ಸರ್ಕಾರವನ್ನು ದೂಷಿಸುತ್ತಿರುವ ವಿಪಕ್ಷಗಳು ಎಂದೂ ಒಬಿಸಿ ಅಥವಾ ಹಿಂದುಳಿದವರನ್ನು ಪ್ರಧಾನಿ ಮಾಡಿಲ್ಲ. ಬಿಜೆಪಿ ಅದನ್ನು ಮಾಡಿದೆ” ಎಂದರು.
“ಮೀಸಲಾತಿ ನಿಗದಿಯಲ್ಲಿ ಪಾರದರ್ಶಕತೆ ಖಾತ್ರಿಪಡಿಸಲು ಮಹಿಳಾ ಮೀಸಲು ಕ್ಷೇತ್ರಗಳನ್ನು ನಿರ್ಧರಿಸುವ ಹೊಣೆಯನ್ನು ಕ್ಷೇತ್ರ ಮರುವಿಂಗಡಣೆ ಸಮಿತಿಗೆ ವಹಿಸಲಾಗುತ್ತದೆ” ಎಂದು ಹೇಳಿದರು.
ಸಾರ್, ಅದಕ್ಕಿಂತ ಮೊದಲು ನಿಮ್ಮ ದಿನಗಳ ಗಣತಿ ಮಾಡಿ.