ಯುವಕನ ಕಿರುಕುಳಕ್ಕೆ ಬೆಸತ್ತು ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕಿಯೋರ್ವಳು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳೆಕಿಗೆ ಬಂದಿದೆ. ಕಳೆದ ಆಗಸ್ಟ್ 17 ರಂದು ನಡೆದ ಘಟನೆಗೆ ಹೊಸ ತಿರುವು ದೊರಕಿದ್ದು, ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಒಂದು ತಿಂಗಳ ನಂತರ ಸೆ.21 ರಂದು ಚಿಟಗುಪ್ಪ ತಾಲೂಕಿನ ಬೇಮಳಖೇಡಾ ಪೋಲಿಸ್ ಠಾಣೆಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಚಿಟಗುಪ್ಪ ತಾಲೂಕಿನ ಬೇಮಳಖೇಡಾ ಗ್ರಾಮದ ಭಾಗಮ್ಮ (ಪ್ರಿಯಾಂಕಾ) (17) ಮರಕುಂದಾ ಎನ್ನುವ ಬಾಲಕಿಗೆ ಅದೇ ಗ್ರಾಮದ ಯುವಕನೋರ್ವ ಪರಿಚಯವಾಗಿ ಸಲುಗೆ ಬೆಳೆಸಿದ, ಬೀದರನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕಿ ಯುವಕನೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದಾಳೆ. ಅದೇ ಪ್ರೀತಿ ಸಲುಗೆಯಿಂದ ಇಬ್ಬರೂ ಫೋಟೋ ತೆಗೆಸಿಕೊಂಡಿದ್ದಾರೆ. ಆದರೆ, ಬಾಲಕಿಯೊಂದಿಗೆ ಮಾತನಾಡಿದ ಆಡಿಯೋ ರೆರ್ಕಾಡ್, ಪೋಟೋಗಳನ್ನು ಇಟ್ಟುಕೊಂಡು ಯುವಕ ಬಾಲಕಿಗೆ ಬ್ಲಾಕ್ ಮೇಲ್ ಮಾಡಿ ಹಣ ನೀಡುವಂತೆ ಪದೇ ಪದೇ ಪೀಡಿಸುತ್ತಿದ್ದ. ಬಾಲಕಿ ಫೋನ್‌ಪೇ ಮೂಲಕ ಯುವಕನಿಗೆ ಹಣ ಹಾಕಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.
ಯುವಕ ಮತ್ತೆ ಆ.17ರಂದು ಬಾಲಕಿ ಜೊತೆ ಮಾತನಾಡಿ ಹಣ ಕಳುಹಿಸು, ಇಲ್ಲದಿದ್ದರೆ ನಿನ್ನ ಜೊತೆ ಮಾತನಾಡಿದ ರೆಕಾರ್ಡ್, ಪೋಟೊ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವೆ ಎಂದು ಕಿರುಕುಳ ನೀಡಿದ್ದಾನೆ. ಆ ಕಾರಣಕ್ಕೆ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮುಂದೆ ಯಾರ ಮನೆಯ ಹೆಣ್ಣು ಮಕ್ಕಳಿಗೆ ಈ ರೀತಿಯ ಅನ್ಯಾಯ ಆಗಬಾರದು. ನನ್ನ ಮಗಳ ಸಾವಿಗೆ ಕಾರಣವಾದ ಯುವಕನ ಮೇಲೆ ಸೂಕ್ತ ಕ್ರಮ ಜರುಗಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಮೃತ ಬಾಲಕಿಯ ತಾಯಿ ಗಂಗಮ್ಮಾ ನೀಡಿದ ದೂರಿನ ಅನ್ವಯ ಬೇಮಳಖೇಡಾ ಪೋಲಿಸರು ಯುವಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಿ ಅನುದಾನಿತ ಉತ್ಸವಗಳೆಲ್ಲ ಸರಳಗೊಳ್ಳಲಿ
ಈ ಕುರಿತು ಬೇಮಳಖೇಡಾ ಪಿಎಸ್‌ಐ ಈದಿನ.ಕಾಮ್ ದೊಂದಿಗೆ ಮಾತನಾಡಿ, “ಒಂದು ತಿಂಗಳ ಹಿಂದೆ ಬೇಮಳಖೇಡಾ ಗ್ರಾಮದಲ್ಲಿ ಪಿಯುಸಿ ವಿದ್ಯಾರ್ಥನಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆದರೆ ಮೃತ ಬಾಲಕಿಯ ಗಂಗಮ್ಮ ಅವರು ಸೆ.21 ರಂದು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಯುವಕನಿಗೆ ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.