ಪ್ರಗತಿಪರ ವಕೀಲ ಆರ್ ಜಗನ್ನಾಥ್ ಅವರ ತಂದೆ ರಾಮಸ್ವಾಮಿ ತಮ್ಮ 80ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ರಾಮಸ್ವಾಮಿ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರ ಕುಟುಂಬ ರಾಮಸ್ವಾಮಿಯವರ ನೇತ್ರಗಳನ್ನು ದಾನ ಮಾಡಿದೆ.
ರಾಮಸ್ವಾಮಿಯವರು ಮಂಡ್ಯ ಎಪಿಎಂಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅನಾರೋಗ್ಯದ ಕಾರಣದಿಂದ ಅವರನ್ನು ನಿನ್ನೆಯಷ್ಟೇ ನಗರದ ಸಂಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತ ರಾಮಸ್ವಾಮಿಯವರ ನೇತ್ರಗಳನ್ನು ಮಂಡ್ಯ ಮೀಮ್ಸ್ ಆಸ್ಪತ್ರೆಗೆ ದಾನ ಮಾಡಲಾಗಿದೆ. ಮಿಮ್ಸ್ ವೈದ್ಯ ಡಾ. ಕಾನಿಷ್ಕ್ ಆದಾನ ಮತ್ತು ತಂಡದವರು ನೇತ್ರಗಳನ್ನು ಪಡೆದು ಸಂರಕ್ಷಿಸಿದರು.
ಮಂಡ್ಯ ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾಕ್ಟರ್ ಎಚ್.ಎಲ್ ನಾಗರಾಜು ಅವರು ನೇತ್ರದಾನದ ದೃಢೀಕರಣ ಪತ್ರವನ್ನು ಕುಟುಂಬದವರಿಗೆ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಾಮಸ್ವಾಮಿಯವರ ನೇತ್ರಗಳನ್ನು ದಾನ ಮಾಡುವ ಮೂಲಕ ಕುಟುಂಬವು ಸಮಾಜಕ್ಕೆ ಮಾದರಿಯಾಗಿದೆ.