ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ಮರುಪಡೆಯಲು, ಕರ್ನಾಟಕ ಅರಣ್ಯ ಇಲಾಖೆಗೆ ಮೀಸಲಾದ ಕಾರ್ಯಪಡೆಯನ್ನು ರಚಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.
ರಾಜ್ಯಾದ್ಯಂತ ಅರಣ್ಯ ಭೂಮಿಯ ಹಲವು ಪ್ರಕರಣಗಳಲ್ಲಿ, ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಅತಿಕ್ರಮಣಗೊಂಡಿರುವ ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳುವಲ್ಲಿ ಉಂಟಾಗಿರುವ ಲೋಪದೋಷಗಳನ್ನು ಗಮನಿಸಿರುವ ಸಚಿವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅರಣ್ಯ ಭೂಮಿಯನ್ನು ಮರುಪಡೆಯಲು ಸಚಿವರು ಕರ್ನಾಟಕ ಅರಣ್ಯ ಇಲಾಖೆಗೆ ಮೀಸಲಾದ ಕಾರ್ಯಪಡೆಯನ್ನು ರಚಿಸುವಂತೆ ಸೂಚಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಸಮನ್ವಯದ ಜೊತೆಗೆ ಕಾನೂನು ಅಡೆತಡೆಗಳನ್ನು ನಿವಾರಿಸಿ ಮುಂದುವರೆಯಲಾಗುತ್ತದೆ. ಈ ಕಾರ್ಯಪಡೆಯಲ್ಲಿ ಅರಣ್ಯ, ಕಂದಾಯ, ನಗರಾಭಿವೃದ್ಧಿ, ಗೃಹ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಅಧಿಕಾರಿಗಳು ಹಾಗೂ ವಿಷಯ ತಜ್ಞರು ಇರಲಿದ್ದಾರೆ.
ಅರಣ್ಯ ಅತಿಕ್ರಮಣ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ತರುವಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಚಿವರು, ಅರಣ್ಯ, ಪರಿಸರ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಅರ್ಜಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಾರ್ಯಪಡೆಯನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಕರ್ನಾಟಕದಲ್ಲೇ ಅತಿ ಹೆಚ್ಚು ಅರಣ್ಯ ಒತ್ತುವರಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿರುವ ಸಚಿವರು, “ಒತ್ತುವರಿಯಾಗಿರುವ ಭೂಮಿ ತೆರವು ಮಾಡಲು ಕಂದಾಯ ಇಲಾಕೆಯೊಂದಿಗೆ ಸಹಕಾರ ಸಾಧಿಸುವಲ್ಲಿ ವಿಫಲರಾಗಿದ್ದಾರೆ ಮತ್ತು ಸಂರಕ್ಷಿಸುವಲ್ಲಿ ಆಸಕ್ತಿ ತೋರಿಸಿಲ್ಲ. ಅರಣ್ಯ ಭವಿಷ್ಯದ ಪೀಳಿಗೆಗೆ ಅಮೂಲ್ಯ ಸಂಪತ್ತು,” ಎಂದು ಪತ್ರದಲ್ಲಿ ಬರೆದಿದ್ದಾರೆ.
ಇಲಾಖೆಯ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ. ಹಸಿರು ಹೊದಿಯ ನಷ್ಟ, ನಮ್ಮ ಮೇಲಷ್ಟೇ ಅಲ್ಲ, ಪರಿಸರ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಈ ಅತಿಕ್ರಮಣಗಳ ಸುತ್ತಲು ಇರುವ ವಿವಾದಗಳನ್ನು ಬಗೆಹರಿಸುವುದು ಮುಖ್ಯವಾಗಿದೆ ಮತ್ತು ಇದಕ್ಕೆ ಇನ್ನೂ ಹೆಚ್ಚು ಸಮಯ ಬೇಕಿದೆ. ರಾಜ್ಯದಲ್ಲಿಯೇ ಬೆಂಗಳೂರು ಅತಿ ಹೆಚ್ಚು ಅರಣ್ಯ ಭೂಮಿಯನ್ನು ಅತಿಕ್ರಮಿಸಿದೆ. ಆದ್ದರಿಂದ, ಇಲ್ಲಿ ಪ್ರತ್ಯೇಕ ಕಾರ್ಯಪಡೆಯ ಅಗತ್ಯವಿದೆ. ಉಳಿದ ಭಾಗಗಳಿಗೆ ಮತ್ತೊಂದು ಪಡೆಯನ್ನು ರಚಿಸಬೇಕಾಗಿದೆ ಎನ್ನುತ್ತಾರೆ ಅರಣ್ಯ ಸಚಿವರು.
ಭೂ ಬಳಕೆಯ ನಮೂನೆ ಬದಲಾವಣೆಗಳ ದಾಖಲಾತಿಯ ಉಲ್ಲೇಖ ಮಾಡಿದ ಸಚಿವರು, ಅರಣ್ಯ ಭೂಮಿಯಲ್ಲಿನ ಬದಲಾವಣೆಗಳನ್ನು ದಾಖಲಿಸಲು ಮಾಹಿತಿ ತಂತ್ರಜ್ಞಾನ ಮತ್ತು ಉಪಗ್ರಹ ನಕ್ಷೆಯ ಇನ್‌ಪುಟ್ ಬಳಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಹುತೇಕ ಪ್ರಕರಣಗಳಲ್ಲಿ ಅಗತ್ಯ ದಾಖಲೆಗಾಗಿ ಅಕ್ರಮವಾಗಿ ಮರಗಳನ್ನು ಕಡಿಯುವುದು, ಅರಣ್ಯಭೂಮಿ ಒತ್ತುವರಿಮಾಡಿರುವವರ ಮೇಲೆ ಎಫ್‌ಐಆರ್ ದಾಖಲಿಸಲು ಯಾವುದೇ ನಿಬಂಧನೆ ಇಲ್ಲ. ಆದ್ದರಿಂದ, ಇಲಾಖೆಯಲ್ಲಿ ತ್ವರಿತ ಎಫ್‌ಐಆರ್ ನೋಂದಣಿ ಕಾರ್ಯವಿಧಾನ ರಚಿಸಲಾಗುವುದು. ಇಂತಹ ಸನ್ನಿವೇಶಗಳಲ್ಲಿ ಯಾವುದೆ ಅಡೆತಡೆಗಳಿಲ್ಲದೆ ಪ್ರಕರಣ ದಾಖಲಿಸಬಹುದು ಎಂದು ಸಚಿವರು ಪತ್ರದಲ್ಲಿ ಬರೆದಿದ್ದಾರೆ.