ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆಯ 4ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ಚಾಲನೆ ನೀಡಿದರು.
ʼವಿಶ್ವ ರೇಬಿಸ್ʼ ದಿನದ ಅಂಗವಾಗಿ ಲಸಿಕಾ ಅಭಿಯಾನ ನಡೆಡಿದೆ ರೇಬಿಸ್ ಲಸಿಕೆ ಹಾಕಿಸಿ ರೇಬಿಸ್ ರೋಗ ಮುಕ್ತ ವಲಯವನ್ನು ಮಾಡಬೇಕು. ಪ್ರಥಮ ಚಿಕಿತ್ಸೆ ರೈತರ ನಡುವೆ ಸಂಪರ್ಕ ಕೊಂಡಿಯಂತೆ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿದರು. ಈ ಲಸಿಕಾ ಕಾರ್ಯಕ್ರಮ ಒಂದು ತೀಂಗಳುಗಳ ಕಾಲ ನಡೆಯಲಿದೆ. ಪಶು ಆಸ್ಪತ್ರೆಯ ಸಿಬ್ಬಂದಿ ಚಿಕ್ಕನರಗುಂದ, ಬೆನಕನಕೊಪ್ಪ, ಸಂಕಧಾಳ, ಅರಿಷಿನಗೋಡಿ, ಹಿರೇಕೊಪ್ಪ, ಕುರಗೋವಿನಕೊಪ್ಪ ಗ್ರಾಮದ ರೈತರ ಮನೆ ಬಾಗಿಲಿಗೆ ಬಂದು ಸೇವೆ ಸಲ್ಲಿಸಲಿದ್ದಾರೆ. ನಿಮ್ಮ ರಾಸುಗಳಿಗೆ ಲಸಿಕೆ ಹಾಕಲಿದ್ದಾರೆ. ಹೀಗಾಗಿ ಎಲ್ಲಾ ಗ್ರಾಮದ ರೈತರು ತಪ್ಪದೇ ನಿಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಎಂದು ಮನವಿ ಮಾಡಿದರು.
ಚಿಕ್ಕನರಗುಂದ ಪಶು ಚಿಕಿತ್ಸಾಲಯದ ವ್ಯಾಪ್ತಿಗೆ ಸೇರುವ ಆರು ಹಳ್ಳಿಗಳಲ್ಲಿನ 3,572 ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು, ಲಸಿಕೆದಾರರು 30 ದಿನಗಳ ಕಾಲ ಮನೆ ಮನೆಗಳಿಗೆ ತೆರಳಿ ಲಸಿಕೆ ಹಾಕುತ್ತಾರೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸಿ ಯಶಸ್ವಿಗೊಳಿಸಬೇಕು. ಎಲ್ಲ ರೈತರು ತಮ್ಮ ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಬೇಕೆಂದು ಚಿಕ್ಕನರಗುಂದ ಪಶು ವೈದ್ಯಕೀಯ ಪರೀಕ್ಷಕ ವೈ.ಎಸ್.ಚಂದ್ರಗಿರಿ ತಿಳಿಸಿದರು.
ಈ ಸಂಧರ್ಭದಲ್ಲಿ ಶಿವಾನಂದ ಬಾಚಿ, ಮಂಜುನಾಥ ಹೂಲಿ, ಮಲ್ಲು ಹೊಸಗಾಣಿಗೇರ, ಶಿವು ಮೇಟಿ, ಚನ್ನಪ್ಪ ಹಡಪದ, ಪಶು ಚಿಕಿತ್ಸಾಲಯ ಸಿಬ್ಬಂದಿ, ಪಶು ಸಕಿಯರು ಹಾಜರಿದ್ದರು.