- ಸಂಡೂರು ತಾಲ್ಲೂಕಿನಲ್ಲಿ ರಾಜಕೀಯ ಮುಖಂಡರಿಂದ ಸರಕಾರ ಜಮೀನು ಒತ್ತುವರಿ
- ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಗೆ ಮನವಿ ಸಲ್ಲಿಸಿದ ಗ್ರಾಕೂಸ್ ಕಾರ್ಯಕರ್ತರು
ಸಂಡೂರ್ ಮತ್ತು ಕಂಪ್ಲಿ ತಾಲೂಕಿನ ಸರಕಾರದ ಜಮೀನಿನಲ್ಲಿ ಬಡ ನಿರ್ಗತಿಕ ಕುಟುಂಬಗಳಿಗೆ ವಸತಿ ಹಕ್ಕು ಕಲ್ಪಿಸಿ ಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರಿಗೆ ಗ್ರಾಮೀಣ ಕೂಲಿಕಾರ ಸಂಘಟನೆಯ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು.
“ವಸತಿ ವಂಚಿತರಿಗೆ ವಸತಿ ಕಲ್ಪಿಸುವಂತೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನಿವೇಶನ ಬಗ್ಗೆ ಗಮನಕ್ಕೆ ತಂದರೂ ಯಾವುದೇ ಸಮಸ್ಯೆ ಬಗೆಹರಿಸಿಲ್ಲ. ಸಂಡೂರು ತಾಲ್ಲೂಕಿನ ಕೆಲ ಪ್ರದೇಶದಲ್ಲಿ ಪ್ರಬಲ ರಾಜಕೀಯ ವ್ಯಕ್ತಿಗಳು ಸರಕಾರ ಜಮೀನು ಒತ್ತುವರಿ ಮಾಡಿ ಕಬಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು ..
ಈದಿನ.ಕಾಮ್ ಜೊತೆ ಮಾತನಾಡಿದ ಅಕ್ಕಮ್ಮ, “ಮರಬ್ಬಿಹಾಳು ನಿವೇಶನ ಹಂಚಿಕೆ ಮಾಡಿದರೆ ನಾವು ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತೇವೆ. ಕೂಲಿ ಕೆಲಸದಿಂದ ಮನೆ ಬಾಡಿಗೆ ಕಟ್ಟುವುದಕ್ಕೆ ಆಗುತ್ತಿಲ್ಲ” ಎಂದು ಅಳಲು ತೋಡಿಕೊಂಡರು.
ಈ ಸುದ್ದಿ ಓದಿದ್ದೀರಾ? ಈ ದಿನ ವಿಶೇಷ | ಪಠ್ಯಪುಸ್ತಕ ಪರಿಷ್ಕರಣೆಯ ನಡೆ ಗೊಂದಲದ ಗೂಡು- ತಜ್ಞರ ಆಕ್ರೋಶ
ಈ ವೇಳೆ ವಿಜಯನಗರ ಜಿಲ್ಲಾ ಸಂಚಾಲಕ ಮಲ್ಲೇಶ್ ಕೋಗಳಿ , ಸಂಡೂರು ತಾಲ್ಲೂಕು ಕಾರ್ಯಕರ್ತೆ ವೀಣಾ ಹಾಗೂ ಕಾರ್ಯಕರ್ತರು ಇದ್ದರು.