ಭಾರತ್ ಜೋಡೊ ಯಾತ್ರೆಯ ಯಶಸ್ಸಿನ ಬಳಿಕ ಕಳೆದ ಕೆಲವು ಸಮಯದಿಂದ ನಿರಂತರವಾಗಿ ಸಾಮಾನ್ಯ ಜನರನ್ನು ಭೇಟಿಯಾಗುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂದು ದೆಹಲಿಯ ಬಡಗಿಗಳನ್ನು ಭೇಟಿಯಾಗಿ ಅವರ ಕಷ್ಟಸುಖಗಳನ್ನು ವಿಚಾರಿಸಿ, ಅವರೊಂದಿಗೆ ಕೆಲಸ ಮಾಡುವ ಮೂಲಕ ಕೆಲ ಸಮಯ ಕಳೆದರು.
ದೆಹಲಿಯ ಕೀರ್ತಿನಗರದಲ್ಲಿರುವ ಏಷ್ಯಾದ ಅತಿದೊಡ್ಡ ಪೀಠೋಪಕರಣ ಮಾರುಕಟ್ಟೆಗೆ ತೆರಳಿದ ಅವರು, ಬಡಗಿಗಳು ಕಠಿಣ ಕೆಲಸಗಾರರು. ಅದರ ಜೊತೆಗೆ ಅದ್ಭುತ ಕಲಾವಿದರು ಎಂದು ಮೆಚ್ಚಿಕೊಂಡಿದ್ದಾರೆ.
दिल्ली के कीर्तिनगर स्थित एशिया के सबसे बड़े फर्नीचर मार्केट जाकर आज बढ़ई भाइयों से मुलाकात की।
— Rahul Gandhi (@RahulGandhi) September 28, 2023
ये मेहनती होने के साथ ही कमाल के कलाकार भी हैं – मज़बूती और खुबसूरती तराशने में माहिर!
काफ़ी बातें हुई, थोड़ा उनके हुनर को जाना और थोड़ा सीखने की कोशिश की। pic.twitter.com/ceNGDWKTR8
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಇಂದು ನಾನು ದೆಹಲಿಯ ಕೀರ್ತಿನಗರದಲ್ಲಿರುವ ಏಷ್ಯಾದ ಅತಿದೊಡ್ಡ ಪೀಠೋಪಕರಣ ಮಾರುಕಟ್ಟೆಗೆ ಹೋಗಿ ಬಡಗಿ ವೃತ್ತಿ ಮಾಡುತ್ತಿರುವ ಸಹೋದರರನ್ನು ಭೇಟಿಯಾದೆ. ಅವರು ಕಠಿಣ ಕೆಲಸಗಾರರು. ಅಲ್ಲದೆ, ಅವರು ಅದ್ಭುತ ಕಲಾವಿದರೂ ಆಗಿದ್ದಾರೆ. ಶಕ್ತಿ ಮತ್ತು ಸೌಂದರ್ಯವನ್ನು ಕೆತ್ತುವಲ್ಲಿ ಪರಿಣಿತರು. ನಾವು ತುಂಬಾ ಮಾತನಾಡಿಕೊಂಡೆವು. ಅವರ ಕೌಶಲ್ಯಗಳ ಬಗ್ಗೆ ತಿಳಿದುಕೊಂಡು ಮತ್ತು ಸ್ವಲ್ಪ ಕಲಿಯಲು ಪ್ರಯತ್ನಿಸಿದೆ” ಎಂದು ತಿಳಿಸಿದ್ದಾರೆ.
आज @RahulGandhi जी दिल्ली के कीर्तिनगर स्थित एशिया के सबसे बड़े फर्नीचर मार्केट जाकर बढ़ई भाइयों से मुलाकात की!
— Chomu INC चौमूं कांग्रेस (@ChomuINC) September 28, 2023
ये मेहनती होने के साथ ही कमाल के कलाकार भी हैं -मज़बूती और खुबसूरती तराशने में माहिर!
काफ़ी बातें हुई,थोड़ा उनके हुनर को जाना और थोड़ा सीखने की कोशिश की। ~#RahulGandhi pic.twitter.com/u6pcN6ZbxJ
ದೇಶದಿಂದ ದ್ವೇಷ ನಿರ್ಮೂಲನೆಯಾಗಿ ಭಾರತ ಒಗ್ಗಟ್ಟಾಗುವವರೆಗೆ ಭಾರತ್ ಜೋಡೋ ಯಾತ್ರೆಯನ್ನು ಮುಂದುವರಿಸುವುದಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕನ್ಯಾಕುಮಾರಿಯಿಂದ ಕಾಶ್ಮೀರವರೆಗಿನ ಭಾರತ್ ಜೋಡೋಗೆ ಸೆ.7ರಂದು ಒಂದು ವರ್ಷವಾದ ವೇಳೆ ಘೋಷಿಸಿದ್ದರು.