ಉತ್ತರ ಪ್ರದೇಶ | ಮಥುರಾದಲ್ಲಿ ರೈಲು ಹಳಿಬಿಟ್ಟು ಪ್ಲಾಟ್​ಫಾರ್ಮ್​ ಏರಿದ್ದ ಘಟನೆಗೆ ಸಾಕ್ಷ್ಯ ಒದಗಿಸಿದ ಸಿಸಿಟಿವಿ!

Date:

Advertisements
  • ವಿಡಿಯೋ ಕಾಲ್‌ನಲ್ಲಿದ್ದ ರೈಲು ನಿರ್ವಾಹಕ; ಸಿಸಿಟಿವಿಯಲ್ಲಿ ದಾಖಲಾಗಿರುವ ವಿಡಿಯೋ ವೈರಲ್
  • ತನ್ನ ಬ್ಯಾಗ್ ಅನ್ನು ಥ್ರೋಟಲ್ ಮೇಲೆ ಇರಿಸಿ, ಮೊಬೈಲ್ ನೋಡುವುದರಲ್ಲಿ ಮಗ್ನನಾಗಿದ್ದ ನಿರ್ವಾಹಕ

ಉತ್ತರ ಪ್ರದೇಶದ ಮಥುರಾ ಜಂಕ್ಷನ್‌ ರೈಲು ನಿಲ್ದಾಣದಲ್ಲಿ ರೈಲೊಂದು ಪ್ಲಾಟ್‌ಫಾರ್ಮ್ ಏರಿದ ಘಟನೆ ಮಂಗಳವಾರ ನಡೆದಿತ್ತು. ಈ ಘಟನೆಗೆ ರೈಲು ನಿರ್ವಾಹಕನ ಬೇಜವಾಬ್ದಾರಿಯೇ ಕಾರಣ ಎಂಬ ಅಂಶ ಹಿರಿಯ ಅಧಿಕಾರಿಗಳ ತನಿಖೆಯಿಂದ ಬಯಲಿಗೆ ಬಂದಿದೆ. ಇದಕ್ಕೆ ಸಿಸಿಟಿವಿಯಲ್ಲಿ ದಾಖಲಾಗಿರುವ ದೃಶ್ಯವೇ ಈಗ ಸಾಕ್ಷ್ಯವಾಗಿ ಲಭ್ಯವಾಗಿದೆ.

ಎಲೆಕ್ಟ್ರಿಕ್ ಮಲ್ಟಿಪಲ್ ಘಟಕ (ಇಎಂಯು) ರೈಲು ಮಂಗಳವಾರ ಹಳಿ ತಪ್ಪಿ ಪ್ಲಾಟ್‌ಫಾರ್ಮ್ ಮೇಲೆ ಹತ್ತಿತ್ತು. ಎಂಜಿನ್ ಕ್ಯಾಬ್ ಪ್ರವೇಶಿಸಿದ ಬಳಿಕ ಆಪರೇಟರ್, ತನ್ನ ಬ್ಯಾಗ್ ಅನ್ನು ಥ್ರೋಟಲ್(ಕಂಟ್ರೋಲರ್) ಮೇಲೆ ಇರಿಸಿ, ಮೊಬೈಲ್‌ನಲ್ಲಿ ವಿಡಿಯೋ ಕಾಲ್‌ನಲ್ಲಿರುವ ದೃಶ್ಯ ಇಂಜಿನ್ ಒಳಗಿರುವ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅವಘಡಕ್ಕೆ ನಿರ್ಲಕ್ಷ್ಯವೇ ಕಾರಣ ಎಂದು ವರದಿಯಾಗಿದೆ.

ಕಳೆದ ಮಂಗಳವಾರ ರಾತ್ರಿ ಮಥುರಾ ಜಂಕ್ಷನ್‌ ರೈಲು ನಿಲ್ದಾಣಕ್ಕೆ ರೈಲು ತಲುಪಿದ ಬಳಿಕ ಮೊದಲು ಕರ್ತವ್ಯದಲ್ಲಿ ಚಾಲಕ ತನ್ನ ಕರ್ತವ್ಯ ಮುಗಿಸಿ ಕ್ಯಾಬಿನ್‌ನಿಂದ ನಿರ್ಗಮಿಸಿದ್ದ. ಬಳಿಕ ಕ್ಯಾಬ್ ಒಳಗೆ ಪ್ರವೇಶಿಸಿದ ರೈಲ್ವೆ ಸಿಬ್ಬಂದಿ ಸಚಿನ್ ಎಂಬಾತ, ವಿಡಿಯೋ ಕಾಲ್‌ನಲ್ಲಿದ್ದುಕೊಂಡೇ ತನ್ನ ಬೆನ್ನಲ್ಲಿದ್ದ ಬ್ಯಾಗನ್ನು ಕಂಟ್ರೋಲರ್ ಮೇಲೆ ಇರಿಸಿ, ಆಸನದಲ್ಲಿ ಕುಳಿತಿದ್ದಾನೆ. ಆ ಬಳಿಕ ಈ ಘಟನೆ ನಡೆದಿದೆ.

Advertisements
mathura railway accident

ರಾತ್ರಿ ನಡೆದ ಈ ಅವಘಡದಲ್ಲಿ ಅದೃಷ್ಟವಶಾತ್ ಈ ಅವಘಡಕ್ಕಿಂತ ಸ್ವಲ್ಪವೇ ಮೊದಲು ಪ್ರಯಾಣಿಕರು ಇಳಿದು ತೆರಳಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಆದರೆ ಘಟನೆಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದರು.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ರೈಲ್ವೆ ಅಧಿಕಾರಿಗಳು, ಅವಘಡಕ್ಕೆ ಕಾರಣವಾದ ಲೋಕೋ ಪೈಲಟ್ ಹಾಗೂ ನಾಲ್ವರು ತಾಂತ್ರಿಕ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ.

ಕರ್ತವ್ಯದ ವೇಳೆ ಮೊಬೈಲ್ ಫೋನ್‌ಗಳನ್ನು ಬಳಸಿದ್ದ ಹಾಗೂ ಮದ್ಯದ ಅಮಲಿನಲ್ಲಿ ಇರುವುದು ಪತ್ತೆಯಾಗಿದ್ದರಿಂದ ಲೋಕೋ ಪೈಲಟ್ ಸಹಿತ ಐದು ಮಂದಿಯನ್ನು ಅಮಾನತು ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಹಠಾತ್ತನೇ ವೇಗ ಪಡೆದುಕೊಂಡು ಪ್ಲಾಟ್​ಫಾರ್ಮ್​ಗೆ ಅಪ್ಪಳಿಸುತ್ತಿರುವುದು ಹಾಗೂ ಸಚಿನ್ ಮೊಬೈಲ್ ನೋಡುತ್ತಿರುವುದು ಮತ್ತು ರೈಲು ಅಪ್ಪಳಿಸಿದ ತಕ್ಷಣ ಗಾಬರಿಗೆ ಬೀಳುವುದೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಇದರ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬಣದಲ್ಲಿ ಅಸಮಾಧಾನ : ಎಂಎಲ್ ಸಿ ಕಾರು ತಡೆ ವಾಗ್ವಾದ

ಎಂಎಲ್ ಸಿ ಶರಣಗೌಡ ಪಾಟೀಲ್‌ ಅವರ ಕಾರಿಗೆ ಡಿ ಎಸ್ ಹುಲಗೇರಿ...

ಕಲಬುರಗಿ | ಮೂರು ತಿಂಗಳಿಂದ ಪಾವತಿಯಾಗದ ʼಗೃಹಲಕ್ಷ್ಮೀʼ ಹಣ : ವೆಲ್ಫೇರ್ ಪಾರ್ಟಿ ಆಕ್ರೋಶ

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಯ ಗೃಹಲಕ್ಷ್ಮೀ ಯೋಜನೆಯ ಹಣ...

ಬೆಳಗಾವಿ : ಮೂರು ವರ್ಷದ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ತಂದೆ ತಾಯಿ

ತಾಯಿಯ ಮಡಿಲಿಗೆ ತವಕಿಸುತ್ತಿರುವ ಮೂರು ವರ್ಷದ ಹೆಣ್ಣುಮಗುವನ್ನು ಆಸ್ಪತ್ರೆಯಲ್ಲಿ ತಂದೆ ತಾಯಿಗಳು...

Download Eedina App Android / iOS

X